ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭವಿಷ್ಯ ಪುರಾಣ ೯೭ ಇವಲ್ಲದೆ ಎಷ್ಟೋ ಸಣ್ಣ ಮೋಡಗಳಂಧ ಜ್ಯೋತಿರ್ಮಯ ಪದಾರ್ಧ ಗಳು ಕಾಣುವವು. ಇವುಗಳಲ್ಲಿ ಎಷ್ಟೋ ನಿಜವಾಗಿ ನಕ್ಷತ್ರಗಳ ಗುಂಪು ಗಳೆ ಇರುವವು. ನಾವು ನೋಡುವ ನಕ್ಷತ್ರಗಳದೊಂದು ವಿಶ್ವವಿರುವಂತೆ ಇವುಗಳಲ್ಲಿ ಪ್ರತಿಯೊಂದೂ ಹೀಗೆ ಬೇರೆ ಬೇರೆ ವಿಶ್ವಗಳಿರುವವು. ಕೆಲವು ಮಾತ್ರ ನಿಜವಾಗಿ ಬೆಳಕಿನ ಮೋಡಗಳಿರುವವು. ಇವುಗಳಲ್ಲಿ ಅತಿವಿರಲವಾದ ದ್ರವ್ಯವಿದ್ದು ಅದು ಬಹಳ ದೂರದವರೆಗೆ ಪಸರಿಸಿರುವುದು. ಇವು ಸಂಕೋಚ ಹೊಂದುತ್ತ ಮುಂದೆ ನಕ್ಷತ್ರಗಳಾಗುವವು. ಇಂಥ ಪ್ರತಿಯೊಂದರಲ್ಲಿಯ ನೂರುಕೋಟಿ ಸೂರ್ಯರು ಹುಟ್ಟುವಷ್ಟು ದ್ರವ್ಯವಾದರೂ ಇರುವುದು ! ಈಗಿನ ದುರ್ಬಿನುಗಳಲ್ಲಿಯೇ ಇಂಧ ೨ ಲಕ್ಷ ಜ್ಯೋತಿರ್ಮಘಗಳು ಕಾಣುವವು. ದುರ್ಬಿನುಗಳು ದೊಡ್ಡವಾದಂತೆ ಇನ್ನೂ ಎಷ್ಟೋ ಕಾಣಿಸ ಬಹುದು. ಹೀಗೆ ಒಂದಿಲ್ಲೊಂದುದಿನ ಕಾಣಬಹುದಾದ ವಿಶ್ವವು ಈಗ ಕಾಣುವ ಭಾಗದ ೧೦೦ ಕೊಟಪಟ್ಟು ದೊಡ್ಡದಿರುವುದೆಂದು ಹೇಳಬಹುದು. ಇದರ ಹೊರಗೂ ಸ್ಥಳವಿರಬಹುದು. ಆದರೆ ಅಲ್ಲಿಯ ಕಿರಣಗಳು ಮೇಲೆ ಹೇಳಿದಂತೆ ನಮ್ಮಲ್ಲಿಗೆ ಬರುವುದೇ ಶಕ್ಯವಿಲ್ಲ. ದೃಶ್ಯ ವಿಶ್ವದಲ್ಲಿಯೆ ಒಟ್ಟು ನಕ್ಷತ್ರಗಳು ೨೦ ಲಕ್ಷ ಪರಾರ್ಧ (೨,೦೦೦,೦೦೦,೦೦೦,೦೦೦,೦೦೦,೦೦೦,೦೦೦,೦೦೦) ಇರುವವು! ಒಂದರಿಂದೊಂದರ ಅಂತರವನ್ನಾಕ್ರಮಿಸಲಿಕ್ಕೆ ಬೆಳಕಿಗೆ ಸಾಧಾರಣವಾಗಿ ೪ ವರುಷಗಳು ಬೇಕಾಗುವವು. ಇದರಿಂದ ದೃಶ್ಯವಿಶ್ವವೇ ಎಷ್ಟು ಅನಂತವಾಗಿರುವುದೆಂಬುದನ್ನು ನಾವು ಊಹಿಸಬಹುದು. ಈ ವಿಶ್ವದ ಭವಿತವ್ಯತೆಯಾದರೂ ಏನು? ಈಗ ನಾವು ವಿಶ್ವದಲ್ಲಿ ದ್ರವ್ಯ (Matter), ಶಕ್ತಿ (Motion) ಈ ಎರಡು ವಸ್ತುಗಳನ್ನು ನೋಡು ತೇವೆ. ಭೂಮಿಯಮೇಲೆ ಇವೆರಡೂ ಭಿನ್ನವಾಗಿರುವವು. ದ್ರವ್ಯವೂ ಶಕ್ತಿಯ ಕೂಡಿ ನಾವು ನೋಡುವ ಪ್ರಾಣಿಮಾತ್ರಗಳಾಗ ವವು. ಬರೀ ದ್ರವ್ಯದಿಂದ ಶಕ್ತಿ ಹುಟ್ಟದು. ಬರೀ ಶಕ್ತಿಯಿಂದ ದ್ರವ್ಯ ಹುಟ್ಟದು. ಸೂರ್ಯನ ಬೆಳಕನ್ನು ಹಿಡಿದು ಯಾರು ಕಲ್ಲು ಕಬ್ಬಿಣಗಳನ್ನು ಮಾಡ ಬಲ್ಲರು ? ಕಲ್ಲು ಕಬ್ಬಿಣಗಳೊಳಗಿಂದ ಯಾರು ಶಕ್ತಿಯನ್ನು ಹೊರತೆಗೆಯ ಬಲ್ಲರು ? ಆದರೆ ಸೂರ್ಯನಮೇಲೆಯ ನಕ್ಷತ್ರಗಳಮೇಲೆಯೂ ಇರುವ ಸ್ಥಿತಿಯು ತೀರ ಭಿನ್ನವಿರುತ್ತದೆ. ಅಲ್ಲಿಯ ಪ್ರಚಂಡ ಉಷ್ಣತೆಯಲ್ಲಿ