ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಕಾಶಕರ ಪ್ರಸ್ತಾವನೆ ಶ್ರೀ ಪರಮಾತ್ಮನ ಕೃಪೆಯಿಂದ ನವಜೀವನ ಗ್ರಂಧಭಾಂಡಾರದ ಮೊದ ಲನೆಯ ಗ್ರಂಧವಾದ (ಆಕಾಶದೊಳಗಿನ ಅದ್ಭುತ ಚಮತ್ಕಾರಗಳು” ಎಂಬೀ ಜ್ಯೋತಿಶ್ಯಾಸ್ತ್ರದ ಗ್ರಂಧವು ಈಗ ಹೊರಟಿದೆ. ಗಹನವಾದ ವಿಷಯಗಳನ್ನು ಅತ್ಯಂತ ಸುಲಭವಾಗಿಯೂ ಮನೋರಂಜಕವಾಗಿಯೂ ತಿಳುಹಿಸುವುದೇ ಈ ಗ್ರಂಧಭಾಂಡಾರದ ಮುಖ್ಯ ಉದ್ದೇಶ. ದೊಡ್ಡ ಗ್ರಂಧಗಳನ್ನು ಬರೆಯುವುದಕ್ಕಿಂತಲೂ ಇಂತಹ ಸಣ್ಣ ಪುಸ್ತಕಗಳನ್ನು ಬರೆಯುವುದು ಬಹಳ ಬಿಗಿಯಾದ ಕೆಲಸವೆಂಬುದನ್ನು ಸುಶಿಕ್ಷಿತರಿಗೆ ಹೇಳಬೇಕಾದುದಿಲ್ಲ. ಅದರಲ್ಲಿಯೂ, ಕರ್ನಾಟಕದಂಧ ಶಿಕ್ಷಣ ಪ್ರಸಾರವು ತೀರ ಕಡಿಮೆಯಿರುವ ಪ್ರಾಂತದಲ್ಲಿ ಸಾಮಾನ್ಯರಿಗೂ ಸುಬೋಧವಾಗುವಂತೆ ಬರೆಯುವುದು ಬಹಳ ಕಠಿನ ಕೆಲಸ. ಅದು ಈ ಗ್ರಂಥದಲ್ಲಿ ಎಷ್ಟರಮಟ್ಟಿಗೆ ಸಾಧಿಸಿದ ಎಂಬುದನ್ನು ವಾಚಕರೇ ಹೇಳಬೇಕು. ನಾವೇನೋ ಅದನ್ನು ಆದಷ್ಟು ಮಟ್ಟಿಗೆ ತೃಪ್ತಿಕರವಾಗುವಂತೆ ಮಾಡುವುದಕ್ಕೆ ಪ್ರಯತ್ನಿಸಿರುವೆವು. ಈ ತರಹದ ವಾಲ್ಮೀಯವು ಪಾಶ್ಚಿಮಾತ್ಯರಲ್ಲಿ ಹೊರಟೂ ಬಹಳ ವರ್ಷಗಳಾಗಿಲ್ಲ. ಹಿಂದುಸ್ಥಾನದಲ್ಲಿ ಈ ತರಹದ ವಾಯವನ್ನು ಹುಟ್ಟಿಸು ವುದು ಇದೇ ಮೊದಲಿನ ಪ್ರಯತ್ನ ವೆಂದು ಹೇಳಬಹುದು. ಏಕೆಂದರೆ, ಮಿಕ್ಕ ಭಾಷೆಗಳಲ್ಲಿಯೂ ಈ ಮಾದರಿಯ ವಾಲ್ಮೀಯವು ಇನ್ನೂ ಹುಟ್ಟಿರುವುದಿಲ್ಲ. ಆದುದರಿಂದ, ವಾಚಕರು ಈ ಗ್ರಂಧವನ್ನು ಸಹಾನುಭೂತಿಯ ದೃಷ್ಟಿಯಿಂದ ಓದಿ ನಮಗೆ ಸಲಹೆಗಳನ್ನು ಕೊಟ್ಟರೆ ಮುಂದಿನ ಗ್ರಂಥಗಳನ್ನು ಬರೆಯು ಸುವುದರಲ್ಲಿ ಅವುಗಳ ಉಪಯೋಗವನ್ನು ನಾವು ಆದಷ್ಟು ಮಟ್ಟಿಗೆ ಮಾಡಿ ಕೊಳ್ಳುವೆವು. ಇಂಧ ಗ್ರಂಥಗಳ ಸಂಪಾದಕರಿಗೆ “ಸಂಪಾದಕ 'ರೆನ್ನು ವು ದಕ್ಕಿಂತಲೂ ರೂಪಕಾರಿ'(ರೂವಾರಿ)ಗಳೆಂದು ಕರೆಯುವುದು ಹೆಚ್ಚು ಅನ್ವರ್ಧಕವೆಂದು ನನಗೆ ತೋರುತ್ತದೆ. ಏಕೆಂದರೆ, ವೃತ್ತಪತ್ರ ಮುಂತಾ