ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ನೆಯ ಪ್ರಕರಣ ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕ ಆಕಾಶದೊಳಗಿನ ಚಮತ್ಕಾರಗಳನ್ನು ಕುರಿತು ಮನುಷ್ಯನ ವಿಚಾರ ಮಾಡಿದ ಹಾಗೆಲ್ಲ ಜಗದೀಶ್ವರನ ಈ ಲೀಲೆಗಳ ವಿಷಯವಾಗಿ ಹೆಚ್ಚು ಹೆಚ್ಚು ಅದ್ಭುತವೂ ಆನಂದವೂ ಉಂಟಾಗ ವವು. ಮನುಷ್ಯನು ಅವುಗಳನ್ನು ಹಿಡಿಯಹೋದಂತೆ ಅವನಿಂದ ಅವು ಮತ್ತಿಷ್ಟು ದೂರವೆ ಓಡುವಂತೆ ತೋರುತ್ತವೆ. ಮೊದಲು, ನಮ್ಮ ಸೃದ್ಧಿಯ ಲೀಲೆಯೆ ಅದ್ಭುತವಾಗಿದೆ. ಅದಕ್ಕಿಂತ ಚಂದ್ರನ ಲೀಲೆಯು ಅದ್ಭುತ. ಬುಧ ಶುಕ್ರ ಗ ರ ಗಳ ಲೀಲೆಯು ಅದಕ್ಕೂ ಅದ್ಭುತವು. ಸೂರ್ಯನ ಲೀಲೆಯು ಅಗಾಧವಾದ ಅದ್ಭುತವು. ನಕ್ಷತ್ರಗಳ ಲೀಲೆಯನ್ನಂತೂ ಬಣ್ಣಿಸಲಳವಲ್ಲ. ನಕ್ಷತ್ರಗಳ ತಂದೆಯಾದ ತೇಜೋರಾಶಿಗಳ ಅದ್ಭುತವಾದ ಲೀಲೆಯು ಅತರ್ಕವಾಗಿದೆ. ಈ ಅದ್ಭುತ ಪರಂಪರೆಯ ನ್ನು ಕುರಿತು ಯೋಚಿಸ ಹೋದಂತೆ ಮನುಷ್ಯನ ಮನಸ್ಸು ಕೌತುಕ ಸಾಗರದಲ್ಲಿ ನಿಮಗ್ನವಾಗಿ ಹೋಗುವುದೇ ನಾಶ್ಚರ್ಯ? ಆದರೆ ಇದು ಒಂದು ಬ್ರಹ್ಮಾಂಡದ ಸ್ಪಿತಿಯಾಯಿತು ! ಇಂಧ ಎಷ್ಟು ಬ್ರಹ್ಮಾಂಡಗಳನ್ನು ದೇವರು ಹುಟ್ಟಿಸಿರುವನೋ ! ಅಲ್ಲಿ ಎಂತೆಂಧ ಅದ್ಭುತ ವ್ಯಾಪಾರಗಳು ನಡೆದಿರುವವೊ ! ಈಗಲೂ ಆತನು ಇಂಧ ಎಷ್ಟು ಹೊಸ ಹೊಸ ಬ್ರಹ್ಮಾಂಡಗಳನ್ನು ನಿರ್ಮಾಣಮಾಡುತ್ತಿರುವನೋ ! ಈ ವಿಷಯಗಳು ಮನಸ್ಸಿನಲ್ಲಿ ಬರಲಾರಂಭಿಸಿದವೆಂದರೆ, ಮನುಷ್ಯನು ಪರಮೇಶ್ವರನ ಅಚಿಂತ್ಯವಾದ ಶಕ್ತಿಯ ವಿಷಯವಾಗಿ ಪೂಜ್ಯಭಾವವನ್ನು ತಾಳಿ ಆತನ ಅನಂತ ಗುಣಗಳನ್ನು ಗಾನಮಾಡುತ್ತ ಆನಂದಸಾಗರದಲ್ಲಿ ಓಲಾಡಬೇಕಲ್ಲವೆ? ಹೀಗೆ ಅನಂತಕೋಟಿ ಬ್ರಹ್ಮಾಂಡಗಳ ನಾಯಕನೂ ಅಚಿಂತ್ಯಾದುತಶಕ್ತಿಗಳಿಂದ ಕೂಡಿದವನೂ ಆದ ಆ ಪರಬ್ರಹ್ಮನಿಗೆ ಅನಂತಾನಂತ ಪ್ರಣಿಪಾತಗಳು !