ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಳೆಯ ಜ್ಞಾನಸಂಪತ್ತು, ಹುಡುಕಿ ತೆಗೆದಿದ್ದರು. ಅವುಗಳ ಸಹಾಯದಿಂದ ಅವರು ಸೂರ್ಯ, ಚಂದ್ರ, ಗ್ರಹ, ನಕ್ಷತ್ರಗಳ ಗತಿಗಳನ್ನು ತಿಳಿದುಕೊಳ್ಳುತ್ತಿದ್ದರು. ಆರ್ಯಭಟ್ಟ ನೆಂಬವನು ಪೃಥ್ವಿಯು ತನ್ನ ಸುತ್ತಲು ತಿರುಗುತ್ತದೆಂಬ ಈಗಿನ ಹೊಸ ಶೋಧದಿಂದ ಸಿದ್ಧವಾಗಿರುವ ಮಾತನ್ನು ಕೂಡ ಆಗಿನ ಕಾಲಕ್ಕೆ ಕಂಡು ಹಿಡಿದಿದ್ದನು, ಎಂದರೆ 8ನೆಯ ಶತಮಾನದಲ್ಲಿಯೇ ಕಂಡುಹಿಡಿದಿದ್ದನು. ಆದರೆ ಆ ಮಾತಿಗೆ ಮಿಕ್ಕವರೊಪ್ಪಲಿಲ್ಲ. ಇತ್ತೀಚೆಗೆ ನ್ಯೂಟನ್‌ನೆಂಬ ಅತ್ಯಂತ ಪ್ರಸಿದ್ದ ಜ್ಯೋತಿಶ್ಯಾಸ್ತ್ರಜ್ಞನು ಶೋಧಿಸಿದ ಗುರುತ್ವಾಕರ್ಷಣ ಶಕ್ತಿಯು, ನಮ್ಮ ಭಾಸ್ಕರಾಚಾರ್ಯರಿಗೆ (೧೨ನೆಯ ಶತಮಾನ) ಬೀಜರೂಪದಲ್ಲಿ ಗೊತ್ತಿತ್ತು, ಅರ್ಧಾತ್, ನ್ಯೂಟನ್‌ನಂತೆ ಅವರು ಅದನ್ನು ವಿಸ್ತಾರಗೊಳಿಸಿರುವುದಿಲ್ಲ. ಇರಲಿ, ಈ ಬಗೆಯಾಗಿ ಪುರಾತನಕಾಲದಲ್ಲಿ ನಮ್ಮ ಜ್ಯೋತಿಶ್ಯಾಸ್ತ್ರ ಜ್ಞಾನವು ಆಗಿನ ಮಾನದಿಂದ ಬಲುಮಟ್ಟಿಗೆ ಬೆಳೆದಿತ್ತೆಂದು ನಿಸ್ಸಂದೇಹವಾಗಿ ಹೇಳಬಹುದು. ಇನ್ನು, ಈ ಅವಧಿಯಲ್ಲಿ ಯುರೋಪಖಂಡದ ಸ್ಥಿತಿಯು ಹೇಗಿ ತೆಂಬುದನ್ನು ನೋಡುವ, ಯುರೋಪಖಂಡದಲ್ಲಿ ಗ್ರೀಸದೇಶವು ಈ ಶಾಸ್ತ್ರದಲ್ಲಿ ಮೊದಲಿಗೆ ಬಹಳ ಮುಂದುವರಿದ ದೇಶವು. ಕ್ರಿಸ್ತ ಶಕದ ಪೂರ್ವದ ೬೦೦ ವರುಷಗಳಿಂದ ಕ್ರಿಸ್ತ ಶಕದ ನಂತರದ ೪೦೦ ವರ್ಷಗಳವರೆಗೆ, ಎಂದರೆ ಸುಮಾರು ಒಂದು ಸಾವಿರ ವರುಷ ಆ ಶಾಸ್ತ್ರವು ಗ್ರೀಸದೇಶದಲ್ಲಿ ಒಳ್ಳೆ ಊರ್ಜಿತ ಸ್ಥಿತಿಯಲ್ಲಿತ್ತು, ಪ್ಲೇಟೋ (ಕ್ರಿ. ಪೂ. ೪೨೮-೩೪೭), ಅರಿಸ್ಟಾಟಲ್ (ಕ್ರಿ. ಪೂ. ೩೮೮-೩೨೨), ಯುಡೋಕ್ಸಸ್ (ಕ್ರಿ. ಪೂ. ೪೦೯-೩೫೬), ಇರಾಟೋಸ ಧೇನಿಸ್ (ಕ್ರಿ. ಪೂ. ೨೭೬-೧೯೬), ಹಿಪಾರ್ಕಸ್ (ಕ್ರಿ. ಪೂ. ೧೫೦), ಟೋಲೆಮಿ (ಕ್ರಿ. ಶ. ೧೫೦) ಮುಂತಾದ ಪ್ರಸಿದ್ಧ ಜ್ಯೋತಿಷಿಗಳು ಆಗಿಹೋದರು. ಆದರೆ ಅವರ ಇತಿಹಾಸವು ನಮಗೆ ಚೆನ್ನಾಗಿ ಗೊತ್ತಿರುವುದಿಲ್ಲ. ಹಿಪಾರ್ಕಸನೆಂಬವನೇ ಜ್ಯೋತಿ ಶ್ಯಾಸ್ತ್ರದ ಜನಕನೆಂದು ಗಣಿಸಲ್ಪಡುತ್ತಾನೆ. ಅವನ ಗ್ರಂಧವು ಉಪಲಬ್ದ ವಿಲ್ಲ. ಆದರೆ ಆತನ ತರುವಾಯದಲ್ಲಿ ಆಗಿಹೋದ ಟೊಲೆಮಿಯ ಗ್ರಂಧದಲ್ಲಿ ಅವನ ಅಭಿಪ್ರಾಯಗಳ ಉಲ್ಲೇಖವಿದೆ. ಕೊನೆಯ ಜ್ಯೋತಿಷಿಯಾದ ಟೋಲೆಮಿಯ ಮುಖ್ಯವಾದ ಸಿದ್ಧಾಂತಗಳು ಯಾವುವೆಂದರೆ:-(೧)