ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦ ಜ್ಯೋತಿಶ್ಯಾಸ್ತ್ರ ವರ್ಣವಿಭಜನ ಯಂತ್ರ (Spectroscope) ಎಂದರೆ ಪ್ರಕಾಶಕಿರಣಗಳನ್ನು ವಿಂಗಡಿಸಿ ಅವುಗಳ ಮೇಲಿಂದ ಆ ಪ್ರಕಾಶವನ್ನು ಕೊಡುವ ಮೂಲ ವಸ್ತುವು ಯಾವುದೆಂಬುದನ್ನ ತಿಳಿದುಕೊಳ್ಳುವ ಯಂತ್ರ, ಛಾಯಾಯಂತ್ರ (Photography) ಎಂದರೆ ಪದಾರ್ಥಗಳ ಭಾವಚಿತ್ರಗಳನ್ನು ತೆಗೆದು ಕೊಳ್ಳುವ ಯಂತ್ರ-ಮುಖ್ಯವಾಗಿ ಈ ಮೂರು ಯಂತ್ರಗಳು ಜ್ಯೋತಿ ರ್ಜ್ಞಾನದಲ್ಲಿ ಬಹಳ ದೊಡ್ಡ ಕ್ರಾಂತಿಯನ್ನು ಮಾಡಿವೆ. ಇವುಗಳ ಪರಿಣಾಮವು ಎಷ್ಟಾಗಿದೆ ನೋಡಿರಿ. ಇವುಗಳ ಮೂಲಕ ನಮ್ಮ ಹಳೆಯ ಕಲ್ಪನೆಗಳಲ್ಲಿ ಕೆಲವು ಬುಡಸಹಿತ ಕಿತ್ತು ಬಿದ್ದಿವೆ. ಮತ್ತೆ ಕೆಲವು ಬಹಳ ಬದಲಾವಣೆಯನ್ನು ಹೊಂದಿವೆ. ಸೃಥ್ವಿಯು ಸಪಾಟವಾ ಗಿರುತ್ತದೆಂದು ಸಾಮಾನ್ಯ ಜನರ ಕಲ್ಪನೆ. ಅದಕ್ಕೆ ವಿರುದ್ಧವಾಗಿ ಸೃದ್ಧಿಯು ೨೫,೦೦೦ ಮೈಲು ಸುತ್ತಳತೆಯುಳ್ಳ ದೊಡ್ಡದೊಂದು ಗೋಲವಾಗಿರುತ್ತ ದೆಂದು ಜ್ಯೋತಿಶ್ಯಾಸ್ತ್ರವು ಹೇಳುತ್ತದೆ. ಪೃಥ್ವಿಯು ಸ್ಥಿರವಾಗಿದ್ದು ಅದರ ಸುತ್ತಲು ಸೂರ್ಯ ಚಂದ್ರ ತಾರೆಗಳು ತಿರುಗುತ್ತವೆಂಬ ಹಳೆಯ ಕಲ್ಪನೆಯು ಈಗ ಹಾರಿಹೋಗಿದೆ. ಅದಕ್ಕೆ ಬದಲು ಸೃದ್ಧಿಯೇ ಸೂರ್ಯನ ಸುತ್ತಲು ತಿರುಗುತ್ತದೆಂದೂ, ಹೀಗೆ ತಿರುಗುವಾಗ ತನ್ನ ಸುತ್ತಲು ಒಂದು ಮಿನಿಟಿಗೆ ೨ ಮೈಲು ವೇಗದಿಂದ ತಿರುಗುತ್ತಿದೆಯೆಂದೂ, ನಕ್ಷತ್ರಗಳು ಸೂರ್ಯ ಚಂದ್ರಾದಿಗಳಂತೆ ಸಮೀಪದಲ್ಲಿರದೆ ಎಲ್ಲಿಯೋ ದೂರ ಇರುತ್ತವೆಂದೂ ಹೊಸ ಶೋಧಗಳು ಹೇಳುತ್ತವೆ. ಸೂರ್ಯನು ದಿನಾಲು ಮುಳುಗಿದೊಡ ನೆಯೆ ಆತನು ದೋಣಿಯಲ್ಲಿ ಹಾಕಲ್ಪಟ್ಟು ಒಯ್ಯುವಷ್ಟು ಚಿಕ್ಕ ಪದಾರ್ಧನಿರುವನೆಂದೂ ಅಧವಾ ಆತನು ಪ್ರಕಾಶಮಾನವಾದ ಆದರೆ ಸೃಥ್ವಿಗಿಂತ ಅತ್ಯಂತ ಸಣ್ಣದಾದ ವಸ್ತುವಿರುವುದೆಂದೂ ಮೊದಲಿನ ತಿಳು ವಳಿಕೆ, ಈಗಿನ ಶೋಧದಿಂದ ಆತನು ಸೃದ್ಧಿಯ ೧೦ ಲಕ್ಷ ಪಟ್ಟು ದೊಡ್ಡವ ನಿರುವನೆಂದು ಗೊತ್ತಾಗಿದೆ. ಬುಧ-ಗುರು-ಶನಿ ಮುಂತಾದ ಗ್ರಹಗಳು ಚಿಕ್ಕ ಚಿಕ್ಕವುಗಳೆಂದು ಆಗ ಜನರು ನಂಬಿದ್ದರು. ಈಗ ಕೆಲವು ಗ್ರಹಗಳು ಸೃಷ್ಟಿಯ ೧,೦೦೦ ಮಡಿ ದೊಡ್ಡವಿರುವವೆಂದು ತಿಳಿದುಬಂದಿದೆ. ನಕ್ಷತ್ರ ಗಳೆಂದರೆ ಸೂರ್ಯ ಚಂದ್ರರ ಜೊತೆಯಲ್ಲಿ ಮಿನಿವಿನಿ ಮಿನುಗುವ ಜ್ಯೋತಿ ಗಳೆಂಬ ಹಿಂದಿನ ಕಲ್ಪನೆಯು ತೀರ ಬುಡ ಮೇಲಾಗಿಹೋಗಿದೆ. ಈಗ,