ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಕೊಪರ್ನಿಕಸನೆಂಬವನೇ ಹೊಸ ಜ್ಯೋತಿಶ್ಯಾಸ್ತ್ರದ ಜನಕನು. ಆತನು ಪೋಲಂಡದೇಶದವನು. ೧೪೭೩ರಲ್ಲಿ ಹುಟ್ಟಿದನು. ಪೃಥ್ವಿಯು ತನ್ನ ಸುತ್ತಲು ತಿರುಗುತ್ತದೆಂದು ಮೊದಲಿಗೆ ಹೇಳಿದವನು ಇವನೇ. ಸೃಥ್ವಿಯ ಮಿಕ್ಕ ಗ್ರಹಗಳೂ ಸೂರ್ಯನ ಸುತ್ತಲೂ ತಿರುಗುತ್ತವೆಂದು ಹೇಳಿದವನೂ ಇವನೇ, ಸಾವಿರಾರು ಜನರು ಬಂದು ಆತನೊಡನೆ ವಾದ ವನ್ನು ಹಾಕಿ ಆತನ ಸಿದ್ದಾಂತವು ನಿಜವೆಂದು ಮನಗಂಡು ಹೋದರು. ಆದರೂ ಧರ್ಮಗುರುಗಳೂ ಸಾಮಾನ್ಯ ಜನತೆಯ ಆತನಿಗೆ ವಿರುದ್ಧ ವಾಗಿಯೇ ಇದ್ದರು. ಅದರಿಂದ ಆತನು ಮಾಡಿದ ಈ ಕ್ರಾಂತಿಕಾರಕ ಶೋಧವನ್ನು ಯಾರೂ ಲೆಕ್ಕಿಸಲಿಲ್ಲ. ಕೋಪರ್ನಿಕಸನು ತನ್ನ ಸಿದ್ಧಾಂತ ವನ್ನು ಪುಸ್ತಕರೂಪವಾಗಿ ಪ್ರಕಟಿಸಲಿಕ್ಕೆ ಕೂಡ ಆತನಿಗೆ ಧೈರ್ಯವಾಗ ಲಿಲ್ಲ. ಕೋಪರ್ನಿಕಸನು ಅರವತ್ತೆಂಟು ವರುಷದ ಮುದುಕನಾದಾಗ ಆತನ ಶಿಷ್ಯನೊಬ್ಬನು ಆ ಗ್ರಂಧವನ್ನು ಪ್ರಸಿದ್ದಿ ಸುವ ಸಾಹಸಮಾಡಿದನು! ಮುಂದೆ ಎರಡೇ ವರುಷಕ್ಕೆ ಎಂದರೆ ೧೫೪೩ರಲ್ಲಿ ಕೋಪರ್ನಿಕಸನು ಸತ್ತು ಹೋದನು. ಈತನು ಸತ್ತ ಮೂರು ವರುಷಗಳ ತರುವಾಯ ಡೆನ್ಮಾರ್ಕ ದೇಶದಲ್ಲಿ ಟಾಯಕ ಬ್ರಹೇ ಎಂಬವನೊಬ್ಬ ಜ್ಯೋತಿಷಿಯು ಹುಟ್ಟಿ ದನು. ಆತನು ಸರದಾರ ವಂಶದವನು. ಉಂಡುಟ್ಟು ಸುಖದಿಂದಿದ್ದು ವಕೀಲಿಮಾಡುತ್ತ ಕಾಲಕಳೆಯಬೇಕೆಂದು ಆತನ ಚಿಗಪ್ಪನ ಇಚ್ಛೆ, ನಿದ್ದೆ ಗಟ್ಟಿ ಕಷ್ಟ ಬಟ್ಟು ನಕ್ಷತ್ರಗಳನ್ನು ನೋಡುತ್ತ ಕುಳಿತುಕೊಳ್ಳಬೇಕೆಂದು ಮಗನ ಹಟ, ಸರದಾರ ಮನೆತನದವರು ಹೀಗೆ ವ್ಯರ್ಧಕಾಲ ಕಳೆದು ನೀಚ ಉದ್ಯೋಗದಲ್ಲಿ (ಅದು ನೀಚ ಉದ್ಯೋಗವೆಂದು ಆಗಿನ ತಿಳುವಳಿಕೆ) ತೊಡ ಗುವುದು ಅಸಮಂಜಸವೆಂದು ಚಿಗಪ್ಪನ ಅಭಿಪ್ರಾಯ. ಆದುದರಿಂದ ತನ್ನ ಮಗನು ಜ್ಯೋತಿಶ್ಯಾಸ್ತ್ರವನ್ನು ಅಭ್ಯಾಸಮಾಡದಂತೆ ಆತನಮೇಲೆ ಕಣ್ಣಿಟ್ಟಿರಬೇಕೆಂದು ಚಿಗಪ್ಪನು ಆತನ ಅಧ್ಯಾಪಕನಿಗೆ ಕಟ್ಟಪ್ಪಣೆಯನ್ನು ಮಾಡಿದ್ದನು. ತೀಕ್ಷ್ಯ ಕುತೂಹಲವು ಹೀಗೆ ಕಟ್ಟಪ್ಪಣೆಯಿಂದ ಕೊಲ್ಲಲ್ಪಡು ವುದೊ? ಇಲ್ಲ. ಟಾಯನು ರಾತ್ರಿಯಲ್ಲಿ ಕದ್ದು ಹೋಗಿ ಬೆಳತನಕ ನಿದ್ದೆಗಟ್ಟಿ ನಕ್ಷತ್ರಗಳನ್ನು ನೋಡುತ್ತ ಕುಳಿತುಕೊಳ್ಳುತ್ತಿದ್ದನು. ಚಿಗಪ್ಪನು