________________
೧೮ ಜ್ಯೋತಿಶ್ಯಾಸ್ತ್ರ ದೂರದರ್ಶಕ ಯಂತ್ರದ ಮೂಲಕ ಆಕಾಶಗಂಗೆಯು ನಕ್ಷತ್ರಗಳದೊಂದು ದೊಡ್ಡ ಗುಂಪೆಂದು ಗೊತ್ತಾಯಿತು. ಪೃಥ್ವಿಯು ಸೂರ್ಯನ ಸುತ್ತಲೂ ತಿರುಗುತ್ತದೆಂದು ಇವನ ಅಭಿಪ್ರಾಯ. ಹೀಗೆ ಅವನ ಸಿದ್ದಾಂತಗಳೆಲ್ಲವೂ “ಬಾಯ್ಬಲ್ಲಿ'ಗೆ ವಿರುದ್ಧವಾಗಿದ್ದವು. ಆತನು ತನ್ನ ಸಿದ್ದಾಂತಗಳದೊಂದು ಪುಸ್ತಕವನ್ನು ಬರೆದನು. ಅರವತ್ತೊಂಬತ್ತು ವರುಷದ ಆ ಮುದುಕನನ್ನು ಪೋಪನು ರೋಮಪಟ್ಟಣಕ್ಕೆ ಹಿಡಿತರಿಸಿದನು. ಆತನು ಕಾಲೂರಿ ಕ್ಷಮೆ ಬೇಡಬೇಕೆಂದೂ ಸೂರ್ಯನ ಸುತ್ತಲು ಪೃಥ್ವಿಯು ತಿರುಗುತ್ತದೆಂದು ಜನರಿಗೆ ಕಲಿಸಿದರೆ ಮರಣದಂಡನೆಯನ್ನು ಆತನು ಅನುಭವಿಸಬೇಕಾಗುವು ದೆಂದೂ ಪೋಪನು ಆಜ್ಞಾಪಿಸಿದನು. ಆಗ ಆ ಮುದುಕನು ಕಾಲೂರಿ ಕ್ಷಮೆ ಬೇಡಿಕೊಂಡನೇನೋ ಸರಿ. ಆದರೆ ಎದ್ದೊಡನೆಯೇ ಹತ್ತರವಿದ್ದವ ನೊಬ್ಬನ ಕಿವಿಯಲ್ಲಿ “ ಇಷ್ಟಾದರೂ ಸೃದ್ಧಿಯು ಹಾಗೆ ತಿರುಗುವುದೇ ಖಂಡಿತ” ಎಂದು ಉಸುರಿದನಂತೆ ! ಕ್ಷಮೆ ಬೇಡಿಕೊಂಡರೂ ಪೋಪನ ಇಚ್ಚೆ ಇರುವವರೆಗೆ, ಗ್ಯಾಲಿಲಿಯೋನು ಸೆರೆಮನೆಯಲ್ಲಿರಬೇಕೆಂದು ಅಪ್ಪಣೆ ಯಾಯಿತು. ರೋಮ ಪಟ್ಟಣದಲ್ಲಿ ಆತನು ಬಂಧಿಸಿಡಲ್ಪಟ್ಟನು. ಅಲ್ಲಿಯ ಬಿಸಿಲು ಆತನಿಗೆ ತಡೆಯಲಿಲ್ಲ. ಆಗ ಮನೆಗೆ ಕಳುಹಿಸಲ್ಪಟ್ಟನು. ಆದರೆ ಮನೆಬಿಟ್ಟು ಹೊರಗೆ ಹೋಗಕೂಡದೆಂದು ಕಟ್ಟಪ್ಪಣೆ ಮುಂದೆ ಆತನು ಕುರುಡನಾದನು. ನಾಲ್ಕು ವರುಷ ಕುರುಡನಾಗಿದ್ದು ೧೬೪೨ರಲ್ಲಿ ತೀರಿ ಕೊಂಡನು. ಜರ್ಮನಿಯಲ್ಲಿ ೧೫೭೧ನೆಯ ಇಸವಿಯಲ್ಲಿ ಹುಟ್ಟಿದ ಕಸ್ಥರ ಎಂಬವ ನಿಗೂ ಪರಿಪರಿಯ ಕಷ್ಟಗಳನ್ನು ಅನುಭವಿಸಬೇಕಾಯಿತು. ಆತನು ಬಹಳ ಬಡವನು. ಆತನು ಟಾಯಕೊ ಬ್ರಹ್ಮನ ಶಿಷ್ಯನು, ಮಾಯಕೊ ಬ್ರಹ್ಮನ ಅಳಿಯನೂ ಒಬ್ಬನು ಜ್ಯೋತಿಷ ಬಲ್ಲವನಿದ್ದನು. ಆತನಿಗೆ ಕೆಪ್ಲರನಮೇಲೆ ಬಹಳ ಹೊಟ್ಟೆಕಿಚ್ಚು, ಆತನು ಕೆಪ್ಲರನ ವಶದಲ್ಲಿದ್ದ ಮಾಯಕೊನ ಜ್ಯೋತಿಶ್ಯಾಸ್ತ್ರದ ಉಪಕರಣಗಳನ್ನು ಕಸಿದುಕೊಂಡುಬಿಟ್ಟನು. ಆತನ ಅರಸನು ಆತನಿಗೆ ಗೊತ್ತುಮಾಡಿದ ನಾಲ್ಕು ವರ್ಷದ ಸಂಬಳವನ್ನೇ ಕೊಡ ಲಿಲ್ಲ. ಅರಸನನ್ನು ಭಿಕ್ಷೆ ಬೇಡಿ, ಆತನಿಗೆ ತನ್ನ ಹೊಟ್ಟೆಯನ್ನು ಸಾಗಿಸ ಬೇಕಾಯಿತು. ಆತನು ಗ್ರಹಗಳ ಸಂಬಂಧದಿಂದ ಹೊಸ ನಿಯಮಗಳನ್ನು