ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಕಾಶರಾಜ ಪಟ್ಟಣ ಅಥವಾ ಖಗೋಲ ೨೩. ಪಡಸಾಲೆ, ನಡುಮನೆ, ಮೊದಲಾದ ಭಾಗಗಳನ್ನೆಲ್ಲ ಒಂದೇ ಕಾಗದದ ಮೇಲೆ ತೋರಿಸಬೇಕಾಗುತ್ತದೆ. ನಕಾಶದಲ್ಲಿ ಇದು ಉತ್ತರ, ಇದು ಪೂರ್ವ ಮುಂತಾಗಿ ದಿಕ್ಕುಗಳನ್ನು ಕಲ್ಪಿಸಬೇಕಾಗುತ್ತದೆ. ನಾಟಕದಲ್ಲಿ ಒಂದೆ ಪರದೆಯಮೇಲೆ ಅನೇಕ ಅರಮನೆ, ಬೀದಿ ಮುಂತಾದವುಗಳನ್ನು ತೋರಿಸ ಬೇಕಾಗುತ್ತದೆ. ಖಗೋಲವು ಇಂತಹದೊಂದು ಪರದೆಯು, ಇದು ಕಾಲ್ಪನಿಕವಿರುತ್ತದೆ. ಅದು ಪದಾರ್ಧವಲ್ಲ; ಅದಕ್ಕೆ ಬಣ್ಣವಿಲ್ಲ. ಬಣ್ಣ ವಿಲ್ಲದ ಪದಾರ್ಧವು ಕಪ್ಪಕಾಣಿಸಬೇಕು-ಎಂದ ಬಳಿಕ ಆಕಾಶವು ನಮಗೆ ಕಪ್ಪಕಾಣಿಸಬೇಕಲ್ಲವೆ? ಎಂದು ನೀವು ನಮಗೆ ಕೇಳಬಹುದು. ಭೂಮಿಯ ಸುತ್ತಲು ವಾತಾವರಣವಿಲ್ಲದಿದ್ದರೆ, ಅದು ನಿಜವಾಗಿ ಕಪ್ಪಾಗಿ ತೋರು ತಿತ್ತು. ವಾತಾವರಣದಲ್ಲಿಯ ಧೂಳಿಯ ಕಣಗಳಮೇಲೆ ಸೂರ್ಯ ಪ್ರಕಾಶವು ಬೀಳಲು, ಅವು ನೀಲಿ ಬಣ್ಣದಿಂದ ಹೊಳೆಯುತ್ತವೆ. ಕಪ್ಪಾದ ಪರದೆಯಮೇಲೆ ಇವು ಒಂದು ನೀಲಿಯ ಬಣ್ಣದ ಗೌಸಣಿಕೆಯಂತಾ ಗುವವು. ಹಗಲಂತೂ ಯಾವವೂ ಕಾಣುವುದಿಲ್ಲ. ರಾತ್ರಿಯಲ್ಲಿ ನಮಗೆ ಸೂರ್ಯನು ಕಾಣಿಸದಿದ್ದರೂ ಅವನ ಕೆಲವು ಕಿರಣಗಳು ವಾತಾವರಣದಲ್ಲಿ ಸೇರಿ ಮಣಿದು ಹೀಗೆ ಹೊಳೆಯುತ್ತವೆ. ರಾತ್ರಿಯಲ್ಲಿ ಆಕಾಶವು ಹೆಚ್ಚು ಕಪ್ಪಾಗಿರುವುದು. ಎಂದರೆ ಅದರಮೇಲಿನ ಈ ಧೂಳಿಯ ಗೌಸಣಿಕೆಯು ತೀರ ತೆಳ್ಳಗಾಗುವುದು. ಅದರಿಂದಲೇ ನಕ್ಷತ್ರಗಳು ಕಾಣಹತ್ತುವವು. ಈ ಗೌಸಣಿಕೆಯು ಇರದೆ ಇದ್ದರೆ ನಾವು ಇನ್ನೂ ಎಷ್ಟೋ ನಕ್ಷತ್ರಗಳನ್ನು ಕಾಣಬಹುದಾಗಿತ್ತು. ಅವು ಹೆಚ್ಚು ಜಾಜ್ವಲ್ಯವಾಗಿ ಕಾಣುತ್ತಿದ್ದವು. ಸೂರ್ಯನು ಕೆಂಬಣ್ಣದವನಾಗದೆ ನೀಲವರ್ಣದವನಾಗಿ ಕಾಣುತ್ತಿದ್ದನು. ಹಗಲು ಸಹ ರಾತ್ರಿಯಂತೆ ಎಲ್ಲ ನಕ್ಷತ್ರಗಳು ಕಾಣುತ್ತಿದ್ದವು. ಈ ಆಕಾಶರಾಜ ಪಟ್ಟಣದಲ್ಲಿ ನಕ್ಷತ್ರಗಳು ಮನೆಗಳಂತಿರುತ್ತವೆ. ಇವು ಅಂತರಿಕ್ಷದಲ್ಲಿ ನಿಂತಿರುತ್ತವೆ. ಸೂರ್ಯನು ಕೂಡ ಇಂತಹದೊಂದು ನಕ್ಷತ್ರವೇ, ಆತನು ನಮಗೆ ಸಮೀಪದಲ್ಲಿರುವುದರಿಂದಲೇ ನಮಗೆ ದೊಡ್ಡವ ನಾಗಿ ಕಾಣುತ್ತಾನೆ. ಆತನ ಸುತ್ತಲು ಈ ಭೂಮಿಯು ಮತ್ತು ಇನ್ನೂ ಏಳು ಭೂಮಿಗಳು ತಿರುಗುತ್ತವೆ. ಅವು ಯಾವುವೆಂದರೆ, ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್, ನೆಪಯ್ಯನ್, ಇವುಗಳಿಗೆ ಸ್ವಂತ