ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಕಾಶರಾಜ ಪಟ್ಟಣ ಅಥವಾ ಖಗೋಲ ಚಿಕ್ಕಮಕ್ಕಳು ಗಿಮಿಗಿಮಿಯಾಗಿ ಕಾಳೆಮಾಳೆಯಾಡಲು ಅವರಿಗೆ ಸುತ್ತಲಿನ ಎಲ್ಲ ಪದಾರ್ಥಗಳು ತಿರುಗಿದಂತೆ ಕಾಣುವುದಿಲ್ಲವೆ? ನಿಜವಾಗಿ ತಿರುಗುತ್ತಿರುವವರು ತಾವು, ಆದರೆ ತಾವು ನಿಂತಿರುವೆವೆಂದೂ ಸುತ್ತಲಿನ ಮನೆ-ಮರಗಳೆ ಹುಚ್ಚೆದ್ದು ತಿರುಗುವವೆಂದೂ ಅವರ ಕಲ್ಪನೆ. ಈ ಮರಮನೆಗಳು ಭೂಮಿಯಲ್ಲಿ ದೃಢವಾಗಿ ನಟ್ಟವುಗಳಿರುವುದರಿಂದ ಅವು ಹೀಗೆ ತಿರುಗುವುದು ಅಶಕ್ಯವೆಂದು ಹೇಳಿದರೆ ಅವರು ನಂಬುವರೋ ? ನಮ್ಮೆಲ್ಲರ ಸ್ಥಿತಿಯೂ ಹೀಗೆಯೆ ಇದೆ. ಭೂಮಿಯಮೇಲಿನ ನಿಜ ಪರಿಸ್ಥಿತಿಯನ್ನು ತಿಳಿದುಕೊಳ್ಳುವಷ್ಟು ನಾವು ಜಾಣರಿರುವೆವು. ಆದರೆ ಆಕಾಶದಲ್ಲಿಯ ಜ್ಯೋತಿಗಳು ಚಲಿಸಿದಂತೆ ಕಾಣುವುದು ನಿಜವೊ ? ಭಾಸವೊ? ಎಂಬುದು ಮಾತ್ರ ತಿಳಿದುಕೊಳ್ಳುವುದಕ್ಕೆ ಕಠಿನವಾಗಿರುವುದು. ಭಾಸ ವಾಗಿದ್ದರೆ ನಾವು ಚಲಿಸುತ್ತಿರಬೇಕಲ್ಲವೆ? ಚಿಕ್ಕಮಕ್ಕಳು ಬಹಳ ಹೊತ್ತು ತಿರುಗಲು, ಅವರ ತಲೆಯು ತಿರುಗಹತ್ತುತ್ತದೆ; ಕಾಲುಗಳು ನೋಯುತ್ತವೆ. ಅದರಿಂದಾದರೂ ಅವರಿಗೆ ತಾವು ತಿರುಗುತ್ತಿರುವ ಕಲ್ಪನೆಯು ಬರಲಿಕ್ಕೆ ಸಾಕು. ಆದರೆ ನಾವು ಯಾವಾಗಲೂ ಇದ್ದಲ್ಲಿಯೆ ಇರುತ್ತೇವೆ. ನಮ್ಮ ಕಾಲುಗಳೂ ನೋಯುವುದಿಲ್ಲ; ತಲೆಯ ತಿರುಗುವುದಿಲ್ಲ. ಎಂದ ಬಳಿಕ ನಾವು ತಿರುಗುತ್ತಿರುವೆವೆನ್ನುವ ಬಗೆ ಹೇಗೆ ? ಆಕಾಶದೊಳಗಿನ ಜ್ಯೋತಿಗಳು ಚಲಿಸುವುದು ಭಾಸವೆನ್ನುವ ಬಗೆ ಹೇಗೆ? ಇನ್ನು ಆಕಾಶದಲ್ಲಿಯ ಗತಿಗಳು ನಿಜವೆಂದಿಟ್ಟುಕೊಳ್ಳೋಣ. ಎಲ್ಲ ನಕ್ಷತ್ರಗಳೂ ಗ್ರಹಗಳೂ ಸೂರ್ಯ ಚಂದ್ರರೂ ದಿನಾಲು ಮಡಿ ಮುಳುಗು ವಂತೆ ಕಾಣುವವು. ಇವೆಲ್ಲ ನಮ್ಮ ಸುತ್ತಲೂ ತಿರುಗುವಂತೆ ಕಾಣುವವು. ಸೂಕ್ಷ್ಮವಾಗಿ ನೋಡಿದರೆ ನಕ್ಷತ್ರಗಳ ಗತಿಗೂ ಸೂರ್ಯ ಚಂದ್ರು ಗ್ರಹಾದಿಗಳ ಗತಿಗೂ ವ್ಯತ್ಯಾಸವು ಕಂಡುಬರುವುದು. ಎಲ್ಲ ನಕ್ಷತ್ರ ಗಳು ದಿನದ ತಮ್ಮ ಗತಿಯನ್ನು ಒಂದೇ ಅವಧಿಯಲ್ಲಿ ಮುಗಿಸುತ್ತವೆ. ಏಕಕಾಲಕ್ಕೆ ಉದಯವಾಗುವ ನಕ್ಷತ್ರಗಳು ಯಾವಾಗಲೂ ಏಕ ಕಾಲಕ್ಕೆ ಉದಯವಾಗುತ್ತವೆ, ಮತ್ತು ಅವು ಪರಸ್ಪರ ಸ್ಥಾನವನ್ನೂ ಬದಲಿಸುವುದಿಲ್ಲ. ಆದುದರಿಂದ ಇವು ಮುಗಿಲಿನಲ್ಲಿ ದೃಢವಾಗಿ ನೆಟ್ಟ