ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ರೆಪ್ಪೆ ಮುಚ್ಚಿ ರೆಪ್ಪೆ ತೆಗೆಯುವಷ್ಟರಲ್ಲಿಯೆ ಅದೆಲ್ಲವೂ ಕರಗಿ ನೀರಾಗಿಹೋಗು ವುದು ; ಏಳು ನಿಮಿಷಗಳಲ್ಲಿಯೆ ಅದೆಲ್ಲವೂ ಉಗಿಯಾಗಿ ಹಾರಿ ಹೋಗು ವುದು. ೧೧,೦೦೦,೦೦೦,೦೦೦,೦೦೦,೦೦೦ ಟನ್ನು ಕಲ್ಲಿದ್ದಲಿಯನ್ನು ಒಮ್ಮೆಲೆ ಸುಟ್ಟರೆ ಹೊರಡುವಷ್ಟು ಆತನ ಬೆಂಕಿಯಿರುತ್ತದೆ. ಸೂರ್ಯನ ಸೃಷ್ಣ ಭಾಗದ ಪ್ರತಿ ಚದರು ಮೊಳದಿಂದ ಹೊರಡುವ ಉಷ್ಣತೆಯಿಂದ ನಾವು ೧,೬೦೦ ಕುದುರೆಗಳ ಶಕ್ತಿಯುಳ್ಳ ಇಂಜನವನ್ನು ನಡೆಸಬಹುದು. ಕುದಿ ಯುವ ನೀರಿನ ಉಷ್ಣತೆಯು ೧೦೦ ಅಂಶವೆಂದು ತಿಳಿದರೆ ಸೂರ್ಯನ ಮೇಲಿನ ಉಷ್ಣತೆಯು ಆರುಸಾವಿರ ಅಂಶಗಳಿಗೆ ಕಡಿಮೆಯಿರಲಾರದು. ಮೇಲ್ಮಯ್ಯ ಉಷ್ಣತೆಯೆ ಇಟ್ಟಿದ್ದ ಬಳಿಕ ಒಳಗಿನ ಉಷ್ಣತೆಯು ಎಷ್ಟಿರಬೇಕು? ಇನ್ನು ಆತನ ಸ್ವರೂಪವನ್ನು ಕುರಿತು ವಿಚಾರಮಾಡುವ, ನೂರು ವರುಷಗಳ ಹಿಂದೆ ಸೂರ್ಯನ ವಿಷಯವಾಗಿ ನಮಗೆ ವಿಶೇಷ ಜ್ಞಾನವಿಲ್ಲ ದಿರುವಾಗ, ಪೃಥ್ವಿಯ ಮೇಲಿನಂತೆ ಸೂರ್ಯನ ಮೇಲೆಯೂ ಪ್ರಾಣಿಗಳು ವಾಸಿಸಿರುವವೊ ಹೇಗೆ ? ಎಂಬ ಪ್ರಶ್ನೆಯನ್ನು ಯಾರಾದರೂ ಕೇಳಿದರೆ ಆಶ್ಚರ್ಯವೆನಿಸುತ್ತಿದ್ದಿಲ್ಲ. ಈಗ ಹಾಗೆ ಕೇಳಿದರೆ ಖೆಳ್ಳನೆ ನಗಬಹುದು. ಏಕೆಂದರೆ ಆತನು ಧಗಧಗಿಸುವ ಕೆಂಡದಂತಿರುವುದರಿಂದ ಅಲ್ಲಿಯ ಪ್ರಾಣಿ ಗಳೆಲ್ಲವೂ ಸುಟ್ಟು ಬೂದಿಯಾಗುವುದು ಮಾತ್ರವಲ್ಲದೆ, ಹೊಗೆಗಿಂತಲೂ ಹೊಗೆಯಾಗಿ ಹೋಗುವವು. ಸೂರ್ಯನ ಹೊಟ್ಟೆಯೊಳಗೆ ಎಂತಹ ಭಯಂ ಕರ ವ್ಯಾಪಾರವು ನಡೆದಿರುತ್ತದೆಂಬ ಬಗ್ಗೆ ನಮಗೆ ಕಿಂಚಿತ್ತಾದರೂ ಜ್ಞಾನ ವಿರುವುದಿಲ್ಲ. ಮೇಲಿಗಿಂತಲೂ ಆತನ ಹೊಟ್ಟೆಯಲ್ಲಿ ಕೋಟ್ಯವಧಿ ಪಟ್ಟು ಉಷ್ಣತೆಯಿರಬೇಕೆಂದು ಮಾತ್ರ ಊಹಿಸಬೇಕಾಗಿದೆ. ಆದರೆ ಇಷ್ಟೆಲ್ಲ ಉಷ್ಣತೆಗೆ ಕಾರಣವೇನಿರಬೇಕು ? ಒಲೆಯಲ್ಲಿ ಕಟ್ಟಿಗೆ ಗಳು ಉರಿಯುವಂತೆ, ಸೂರ್ಯನ ಹೊಟ್ಟೆಯಲ್ಲಿ ಕಟ್ಟಿಗೆಗಳಾಗಲಿ ಮತ್ತಾವ ಪದಾರ್ಥಗಳಾಗಲಿ ಉರಿಯುತ್ತಿರುವವೊ ? ಹಾಗೆ ಊಹಿಸಲು ಅವಕಾಶ ವಿಲ್ಲ. ಏಕೆಂದರೆ ಹಾಗೆ ಸುಡುವ ಪದಾರ್ಥಗಳಿದ್ದರೆ, ಹಾಗೆ ಅವು ಎಷ್ಟು ದಿವಸ ಒಂದೇಸವನೆ ಉರಿದಾವು? ಒಮ್ಮೆಯಿಲ್ಲೊಮ್ಮೆ ಅವು ಸುಟ್ಟು ಬೂದಿಯಾಗಿ ಸೂರ್ಯನು ತಣ್ಣಗಾಗಬೇಕಲ್ಲವೆ ? ಸೂರ್ಯನ ಇಡಿಯ ಶರೀರವು ಕಲ್ಲಿದ್ದಲಿಯಿಂದ ಮಾಡಲ್ಪಟ್ಟಿದೆಯೆಂದು ತಿಳಿದರೆ, ಅಷ್ಟೆಲ್ಲವೂ