ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚಂದ್ರ ದರೂ ಕೂಡ ಆತನಲ್ಲಿರುವ ಕಪ್ಪು ಕಲೆಗಳು ಕಾಣುತ್ತವೆ. ಜನರು ಅದಕ್ಕೆ ಚಂದ್ರನ ಎರಳೆಯೆನ್ನುತ್ತಾರೆ. ಆದರೆ ನಿಜವಾಗಿಯೂ ಅವು ದೊಡ್ಡ ದೊಡ್ಡ ತೆಗ್ಗುಗಳು. ಈ ಭೂಲೋಕದಂತೆಯೆ ಚಂದ್ರಲೋಕವು ಕಲ್ಲು ಮಣ್ಣು ಗಳಿಂದ ಮಾಡಿದುದು. ಆದರೆ ಅಲ್ಲಿಯ ಸಮುದ್ರಗಳೆಲ್ಲವೂ ಬತ್ತಿಹೋಗಿವೆ. ಅಲ್ಲಿ ಹವೆಯಿಲ್ಲ. ಮೋಡಗಳಿಲ್ಲ. ಸಾರಾಂಶ, ಚಂದ್ರಲೋಕವೆಂದರೆ ಹವೆ ಯಿಲ್ಲದ, ನೀರಿಲ್ಲದ, ಮಳೆಯಿಲ್ಲದ, ನಿರ್ಜಿವವಾದುದೊಂದು ಪ್ರದೇಶವು. ಅಲ್ಲಿ ಹಸುರು ಬೆಳೆಯಿಲ್ಲ; ಅಂದವಾದ ಗಿಡಗಳಿಲ್ಲ; ದೊಡ್ಡ ದೊಡ್ಡ ಕಲ್ಲು ಬಂಡೆಗಳು ಮಾತ್ರ ತುಂಬಿವೆ. ಅಲ್ಲಿ ದೊಡ್ಡ ದೊಡ್ಡ ಜ್ವಾಲಾಮುಖಿ ಪರ್ವತಗಳೂ ಉಂಟು. ಇವು ಆರಿ ತಣ್ಣಗಾದವುಗಳು. ಹೀಗೆ ಮೃತಶರೀರ ನಾದ ಚಂದ್ರನಮೇಲೆ ಜ್ಯೋತಿಷಿಗಳ ಪ್ರೀತಿಯಿರುವುದು ಹೇಗೆ ? ಪ್ರೀತಿ ಯಿರದಿದ್ದರೂ ಕರ್ತವ್ಯವೆಂದು ಜ್ಯೋತಿಷಿಗಳು ಆತನ ಜ್ಞಾನವನ್ನು ಮಾಡಿ ಕೊಂಡಿದ್ದಾರೆ. ಆತನು ಸೃದ್ಧಿಯ ಎಲ್ಲಕ್ಕೂ ತೀರ ಸಮೀಪದ ವಸ್ತುವಿರು ವುದರಿಂದ, ಆತನ ಸಂಬಂಧದಿಂದ ನಮಗೆ ಜ್ಞಾನವಾದಷ್ಟು ಮಿಕ್ಕ ಯಾವ ಆಕಾಶ ವಸ್ತುಗಳ ಸಂಬಂಧದಿಂದಲೂ ಆಗಿರುವುದಿಲ್ಲ. ಸೂರ್ಯನ ವಿಷಯ ವಾಗಿ ನಮಗೆ ಎಷ್ಟು ಕಡಿಮೆ ಜ್ಞಾನವೂ ಚಂದ್ರನ ವಿಷಯವಾಗಿ ಅಷ್ಟು ಹೆಚ್ಚು ಜ್ಞಾನವು ಇರುತ್ತದೆ. ಆದುದರಿಂದ ಚಂದ್ರಲೋಕದಲ್ಲಿ ಯಾವ ಪ್ರಾಣಿಯ ವಾಸಿಸುವುದಿಲ್ಲೆಂದು ಖಂಡಿತವಾಗಿ ಹೇಳುತ್ತೇವೆ. ಅಲ್ಲಿ ಹವೆಯ ನೀರೂ ಇಲ್ಲದಿರುವ ಮೂಲಕ, ಪ್ರಾಣಿಗಳು ಬದುಕುವ ಬಗೆ ಹೇಗೆ? ನಮ್ಮ ೨೭ ದಿವಸಗಳೆಂದರೆ ಚಂದ್ರನ ಒಂದು ದಿವಸವು. ಇವುಗಳಲ್ಲಿ ಅರ್ಧ ದಿವಸ ಸೂರ್ಯನ ಬಿಸಿಲು ಚಂದ್ರನಮೇಲೆ ಯಾವಾಗಲೂ ಬಡಿಯುತ್ತಿರುತ್ತದೆ. ಮತ್ತು ಆ ಬಿಸಿಲಿನ ತಾಪದಿಂದ ಅಲ್ಲಿಯ ಪದಾರ್ಧ ಗಳು ಕೂಡ ಸುಟ್ಟು ಹುರಪಳಿಸುತ್ತವೆ. ಮುಂದೆ, ಚಂದ್ರಲೋಕದಮೇಲೆ ಸೂರ್ಯನು ಮುಳುಗಿದೊಡನೆಯೆ ರಾತ್ರಿಯಾಗುತ್ತದೆ. ಆದರೆ ಅಲ್ಲಿ ಹವೆ ಯಿಲ್ಲದ ಮೂಲಕ ಹಗಲಿನ ಉಷ್ಣತೆಯು ಉಳಿಯದೆ ಆಕಾಶದಲ್ಲಿ ಹಾರಿ ಹೋಗುತ್ತದೆ. ಆಗ ಚಂದ್ರಲೋಕವು ಬರ್ಫಿಗಿಂತ ತಣ್ಣಗಾಗಿಹೋಗುತ್ತದೆ. ನಾವು ಚಂದ್ರಲೋಕಕ್ಕೆ ಹೋದೆವೆಂದು ತಿಳಿಯಿರಿ. ಅಲ್ಲಿ ನಮಗೆ ಏನು ಕಾಣುವುದು ? ಅಲ್ಲಿ ಹವೆಯಿಲ್ಲ. ಆದುದರಿಂದ ಸೂರ್ಯನು