ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಇಂಗ್ಲಂಡದಲ್ಲಿ ೫೧ ಅಂಶ ; ಗ್ರೀನಲಂಡವೆಂಬ ಬರ್ವಾಚ್ಛಾದಿತ ಪ್ರದೇಶದಲ್ಲಿ ೮೦ ಅಂಶ; ನಾವು ಪೃಥ್ವಿಯ ಉತ್ತರಧ್ರುವಕ್ಕೆ ಹೋದರೆ ಅಲ್ಲಿ ಈ ಧ್ರುವ ನಕ್ಷತ್ರವು ನಮ್ಮ ತಲೆಯಮೇಲೆಯೆ ಕಾಣುತ್ತದೆ. ಭೂಮಿಯು ಗೋಲಾಕಾರವಾಗಿರುವುದರಿಂದಲೆ ಹೀಗೆ ಭಿನ್ನ ಭಿನ್ನವಾಗಿ ಕಾಣುತ್ತದೆ. ಭೂಮಿಯು ಗೋಲಾಕಾರವಾಗಿದ್ದರೂ ಚಂಡಿನಂತೆ ದುಂಡಗಿಲ್ಲ. ಕಿತ್ತಳೆಯ ಹಣ್ಣು ಅಥವಾ ಕುಂಬಳಕಾಯಿಯಂತೆ ಮೇಲ್ಬಾಗದಲ್ಲಿ ತುಸು ಚಪ್ಪಟೆಯಾಗಿರುತ್ತದೆ. ಮೇಲ್ತುದಿಯಿಂದ ಕೆಳತುದಿಯವರೆಗಿನ ಅಂತರವು ೭,೯೦೦ ಮೈಲುಗಳಾದರೆ, ಧಾರವಾಡದಲ್ಲಿ ಹಾಯುವ ವ್ಯಾಸವು ೭,೯೦೮ ಮೈಲುಗಳು. ಇದಕ್ಕೊಂದು ಕಾರಣವಿದೆ. ವೇಗದಿಂದ ತಿರುಗುವುದೊಂದು ತಿಗರಿಯ ದಂಡಿಯಮೇಲೆ ನಾವು ಏನನ್ನಾದರೂ ಇಟ್ಟರೆ, ಅದು ಹೊರಗೆ ಚಿಮ್ಮಲ್ಪಡುತ್ತದೆ. ಈ ಶಕ್ತಿಗೆ ಕೇಂದ್ರ ಸನ್ನಿ ಕೃಷ್ಣ (Centrifugal force) ಶಕ್ತಿಯನ್ನು ವರು. ಭೂಮಿಯು ಗೋಲವಿರುವುದೆಂಬುದಷ್ಟೇ ಅಲ್ಲ; ಆದರೆ ತನ್ನ ಸುತ್ತಲು ನಿಮಿಷಕ್ಕೆ ೧೮ ಮೈಲಿನಂತೆ ಅತ್ಯಂತ ವೇಗವಾಗಿ ತಿರುಗು ಇದೆ. ಆದುದರಿಂದ ಅದರ ತುದಿಯಲ್ಲಿರುವ ದ್ರವ್ಯಗಳು ಹೊರಗೆ ಹೋಗಲು ಹವಣಿಸುತ್ತವೆ. ಭೂಮಿಯಲ್ಲಿರುವ ಗುರುತ್ವಾಕರ್ಷಣಶಕ್ತಿಯು ಅವು ಗಳನ್ನು ಹೋಗಗೊಡುವುದಿಲ್ಲ. ಹೀಗಾಗಿ ಅವು ಹೊರಗೆ ನಿಲ್ಲುವುದರಿಂದ ನಡುವಿನ ಭಾಗವು ಉಬ್ಬಿದಂತಾಗಿ ಅದರ ಅಡ್ಡಗಲವು ಉದ್ದಗಲಕ್ಕಿಂತ ಹೆಚ್ಚಿಗಿರುತ್ತದೆ. ವೇಗದಿಂದ ತಿರುಗುವ ಎಲ್ಲ ಪದಾರ್ಥಗಳ ಸ್ಥಿತಿಯೂ ಹೀಗೆಯೇ ಆಗುತ್ತದೆ. ಗುರು ಗ್ರಹವು ಭೂಮಿಗಿಂತ ಸಾವಿರ ಪಟ್ಟು ದೊಡ್ಡದಿದ್ದರೂ ಅದು ಹತ್ತು ಗಂಟೆಗಳಲ್ಲಿಯೇ ತನ್ನ ಸುತ್ತಲೂ ತಾನು ಅತ್ಯಂತ ವೇಗದಿಂದ ತಿರುಗುತ್ತದೆ. ಆದುದರಿಂದ ಅದರ ಮೇಲ್ಬಾಗವು ಭೂಮಿಗಿಂತ ಚಪ್ಪಟೆ ಯಾಗಿರುತ್ತದೆ. ವಿಶ್ವದೊಳಗಿನ ಎಲ್ಲ ನಕ್ಷತ್ರಗಳೂ ಗ್ರಹಗಳೂ ಈ ಬಗೆ ಯಾಗಿ ತಮ್ಮ ಸುತ್ತಲೂ ತಾವು ತಿರುಗುತ್ತಲೆ ಇರುವುದರಿಂದ ಅವೆಲ್ಲವೂ ಹೆಚ್ಚು ಕಡಿಮೆಯಾಗಿ ಚಪ್ಪಟೆಯಾಗಿರುವ ಗೋಲಗಳೇ ಆಗಿರುವವು. ಭೂಮಿಯು ಹೀಗೆ ಚಪ್ಪಟೆಯಾಗಿರುವುದರ ಮೇಲಿಂದ ನಾವು ಮತ್ತೊಂದು ಅನುಮಾನವನ್ನು ತೆಗೆಯಬಹುದು. ಅದೇನೆಂದರೆ,