________________
ಜ್ಯೋತಿಶ್ಯಾಸ್ತ್ರ ಭೂಮಿಯಮೇಲೆ ಹಗಲಿರುಳುಗಳಾಗುವಂತೆ ಋತುಗಳೂ ಆಗು ವವು. ಬೇಸಿಗೆಯ ಉರಿ, ಚಳಿಗಾಲದ ತಂಡಿ ಇವೆಲ್ಲ ಹೇಗೆ ಆಗುವವು? ಇಲ್ಲಿಗಿಂತ ಕಾಶಿಯಲ್ಲಿ ಚಳಿಗಾಲದಲ್ಲಿ ಚಳಿಯು ಏಕೆ ಹೆಚ್ಚಿರುವುದು ? ವಿಲಾಯತಿಯಲ್ಲಿಯಂತೂ ಚಳಿಗಾಲದಲ್ಲಿ ನೀರು ಹೆಪ್ಪುಗಟ್ಟುವುದು. ಅಲ್ಲಿ ಬೇಸಿಗೆಯು ಹೆಸರಿಗೆ ಬೇಸಿಗೆಯಾಗಿರುವುದು. ಅದೇ, ಸಹರಾರಣ್ಯದಲ್ಲಿ ಬೇಸಿಗೆಯಲ್ಲಿ ಬೆಂಕಿಯ ಮಳೆಗರೆದಂತಾಗುವುದು. ಸಾಧಾರಣವಾಗಿ ಬೇಸಿಗೆಯಲ್ಲಿ ಹಗಲುಗಳೂ ಚಳಿಗಾಲದಲ್ಲಿ ರಾತ್ರಿಗಳೂ ದೊಡ್ಡವಿರುವವು. ನಮ್ಮ ದೇಶದಲ್ಲಿ ಇದು ಅಷ್ಟು ಒಡೆದುಕಾಣುವುದಿಲ್ಲ. ಆದರೆ ವಿಲಾಯತಿ ಯಲ್ಲಿ ಬೇಸಿಗೆಯ ಹಗಲು ೧೮ ಗಂಟೆಗಳದು ; ರಾತ್ರಿಯು ಆರೇ ಗಂಟೆ. ಚಳಿಗಾಲದಲ್ಲಿ ಇದರ ವಿಪರೀತವಾಗುವುದು. ನಾರ್ವೆದೇಶದಲ್ಲಿಯಂತೂ ಎರಡೆರಡು ತಿಂಗಳು ಸೂರ್ಯನು ಬೇಸಿಗೆಯಲ್ಲಿ ಮುಳುಗುವುದೇ ಇಲ್ಲ; ಚಳಿಗಾಲದಲ್ಲಿ ಎರಡೆರಡು ತಿಂಗಳು ರಾತ್ರಿಯಿರುವುದು. ಭೂಮಿಯು ತನ್ನ ಸುತ್ತಲೂ ತಿರುಗುತ್ತ ಸೂರ್ಯನ ಸುತ್ತಲ ತಿರುಗುತ್ತದೆಂದು ಮೇಲೆ ಹೇಳಿದೆಯಷ್ಟೆ, ಹೀಗೆ ತಿರುಗುವ ಭೂಮಿಯು ನೆಟ್ಟಗೆ ನಿಂತಿದ್ದರೆ ಎಲ್ಲ ಕಡೆಯಲ್ಲಿಯೂ ಹಗಲಿರುಳುಗಳು ಸರಿಯಾಗಿರು ತಿದ್ದವು. ಆದರೆ ಭೂಮಿಯು ಒಂದೇ ನಿಟ್ಟಿಗೆ ಒರಗಿದ ಬೊಗರೆಯಂತೆ ಡೊಂಕಾಗಿ ನಿಂತು ತಿರುಗುತ್ತದೆ. ಬೇಸಿಗೆಯಲ್ಲಿ ಉತ್ತರಧ್ರುವವೂ ಅದರ ಸುತ್ತಲಿನ ಕೆಲಭಾಗವೂ ಸೂರ್ಯನ ಕಡೆಗೆ ಒಲೆದಿರುವುದರಿಂದ ಅಲ್ಲಿ ಸದೈವ ಹಗಲಾಗುವುದು. ಅಲ್ಲಿಂದ ಕೆಲವು ದೂರದವರೆಗೆ ಹಗಲುಗಳು ದೊಡ್ಡವರು ವವು. ಆದರೆ ಅದೇ ಕಾಲಕ್ಕೆ ದಕ್ಷಿಣಧ್ರುವದ ಹತ್ತಿರದ ಪ್ರದೇಶದಲ್ಲಿ ದೊಡ್ಡ ದೊಡ್ಡ ರಾತ್ರಿಗಳಿರ ವವು. ಆದುದರಿಂದ ಅಲ್ಲಿ ಚಳಿಗಾಲವಿರುವುದು. ಮುಂದೆ ಉತ್ತರದಲ್ಲಿ ಚಳಿಗಾಲವಿರುವಾಗ ಅಲ್ಲಿಯ ಜನರಿಗೆ ಬೇಸಿಗೆಯಿರು ವುದು. ಎರಡೂ ಧ್ರುವಗಳಿಂದ ಸರಿಯಾದ ಅಂತರದಮೇಲಿರುವ ಭೂಭಾಗಕ್ಕೆ ವಿಷುವತೃತ್ಯವೆನ್ನುವರು. ನಾವಿರುವ ಪ್ರದೇಶವು ಈ ಭಾಗದ ಸ್ವಲ್ಪ ಉತ್ತರಕ್ಕಿರುವುದು. ಇಲ್ಲಿ ಫಾಲ್ಗುಣದಿಂದ ಆಶ್ವಿನದವರೆಗೆ ಹಗಲು ಗಳು ರಾತ್ರಿಗಿಂತ ದೊಡ್ಡವು; ಆಶ್ವಿನದಿಂದ ಫಾಲ್ಗುಣದವರೆಗೆ ರಾತ್ರಿಗಳು ದೊಡ್ಡವು. ಹಗಲು ಸೂರ್ಯನಿಂದ ಬಂದ ಉಷ್ಣತೆಯು ರಾತ್ರಿಯಲ್ಲಿ