ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦ ಜ್ಯೋತಿಶ್ಯಾಸ್ತ್ರ ಅಕ್ಷದ ಸುತ್ತಲೂ ತಿರುಗಲಿಕ್ಕೂ ಇದಕ್ಕೆ ಇಷ್ಟೆ ಅವಧಿ ಹಿಡಿಯುವುದರಿಂದ, ಚಂದ್ರನ ಒಂದೇ ಭಾಗವು ಯಾವಾಗಲೂ ನವ ಕಡೆಗೆ ತಿರುಗಿರುವಂತೆ, ಇದರ ಒಂದೆ ಭಾಗವು ಸೂರ್ಯನ ಕಡೆಗೆ ತಿರುಗಿರುವುದು. ಈ ಭಾಗದ ಮೇಲೆ ಶಾಶ್ವತವಾದ ಹಗಲು, ಉಳಿದ ಭಾಗದಮೇಲೆ ಶಾಶ್ವತವಾದ ರಾತ್ರಿ. ಆದುದರಿಂದ ಬುಧಲೋಕದಲ್ಲಿ ಋತುಮಾನಗಳಿರದೆ, ಒಂದು ಗೋಲಾರ್ಧದಲ್ಲಿ ಪ್ರಚಂಡವಾದ ಶಕೆ; ಇನ್ನೊಂದರಲ್ಲಿ ಕಡುತರವಾದ ತಂಡಿಯಿರುವುದೆಂದು ಹೇಳಬಹುದು. ಬುಧಗ್ರಹವು ಚಂದ್ರನಂತೆ ಸೂರ್ಯಪ್ರಕಾಶದಿಂದಲೇ ಹೊಳೆಯು ವುದರಿಂದ ಅದಕ್ಕೂ ಕಲೆಗಳಿರಬೇಕೆಂಬುದು ಸಹಜವಿದೆ. ಆದರೆ ಚಂದ್ರನ ಕಲೆಗಳಿಗೂ ಬುಧನ ಕಲೆಗಳಿಗೂ ಒಂದು ಅಂತರವಿದೆ. ಚಂದ್ರನು ನಮ್ಮಿಂದ ಯಾವಾಗಲೂ ಅಷ್ಟೆ ಅಂತರದಲ್ಲಿರುವುದರಿಂದ ನಮ್ಮ ಕಣ್ಣಿಗೆ ಕಾಣುವ ಅವನ ಬಿಂಬದ ಆಕಾರದಲ್ಲಿ ಹೆಚ್ಚು ಕಡಿಮೆಯಾಗುವುದಿಲ್ಲ. ಆದರೆ ಬುಧನು ಪೂರ್ಣಬಿಂಬನಾಗಿರುವಾಗ ಸೂರ್ಯನ ಆಚೆ ಇರುವುದರಿಂದ, ನಮ್ಮಿಂದ ೧,೨೮೦ ಲಕ್ಷ ಮೈಲು ದೂರದಲ್ಲಿರುತ್ತಾನೆ. ಆದಕಾರಣ ಆತನ ಆಕಾರವು ನಮ್ಮ ಕಣ್ಣಿಗೆ ತೀರ ಚಿಕ್ಕದಾಗಿ ಕಾಣುತ್ತದೆ. ಅದೇ, ಆತನು ಅಂಶಬಿಂಬ ನಾಗಿರುವಾಗ ಸೂರ್ಯನಿಗೂ ನಮಗೂ ನಡುವೆ ಇರುವುದರಿಂದ, ಈ ಅಂಶಬಿಂಬದ ಆಕಾರವು ನಮ್ಮ ಕಣ್ಣಿಗೆ ದೊಡ್ಡದಾಗಿ ಕಾಣುತ್ತದೆ. ಸಾರಾಂಶ, ಪೂರ್ಣಬಿಂಬನಿದ್ದಾಗ ಆತನ ಕಾಂತಿ ಕಡಿಮೆ, ಅಂಶದಿಂಬನಿದ್ದಾಗ ಆತನ ಕಾಂತಿ ಹೆಚ್ಚು. ಹೀಗೆ ವಿಪರೀತ ಸ್ಥಿತಿಯಿರುತ್ತದೆ. ಸೂರ್ಯ ಚಂದ್ರರ ಗತಿಗೂ ಬುಧನ ಗತಿಗೂ ಇನ್ನೊಂದು ಅಂತರ ವಿರುತ್ತದೆ. ಸೂರ್ಯ ಚಂದ್ರರು ನಕ್ಷತ್ರಗಳೊಳಗಿಂದ ಹೋಗುವಾಗ ಅಶ್ವಿನಿಯಿಂದ ಭರಣಿ, ಮುಂದೆ ಕೃತಿಕೆ, ಹೀಗೆ ಒಂದೇ ದಿಕ್ಕಿನಲ್ಲಿ ಹೋಗು ತಾರೆ. ಬುಧನೂ ಉಳಿದ ಗ್ರಹಗಳೂ ಮಾತ್ರ ಒಮ್ಮೊಮ್ಮೆ ಹಿಂಬರಿಕೆಯಾಗಿ ಚಲಿಸಿದಂತೆ ಕಾಣುತ್ತವೆ. ಇದೊಂದು ಗ್ರೀಕ ಜ್ಯೋತಿಷಿಗಳಿಗೆ ಗೂಢವೆ ಆಗಿತ್ತು. ಆದರೆ ಕೋಪರ್ನಿಕಸನ ಸಿದ್ದಾಂತದ ಪ್ರಕಾರ ನಾವು ಹೀಗಾಗು ವುದನ್ನು ತಿಳಿಸಿಹೇಳಬಹುದು. ಎರಡು ಬಂಡಿಗಳು ಒಂದೇ ಹಾದಿಯಿಂದ ಹೋಗುತ್ತಿದ್ದರೆ ವೇಗವಾಗಿ ಹೋಗುವ ಬಂಡಿಯಿಂದ ಸಾವಕಾಶವಾಗಿ