ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಪ್ರದೇಶದಿಂದ ನೀರನ್ನು ತರುವುದಂತೂ ದೂರವೆ ಉಳಿಯಿತು. ಮಂಗಳನ ಮೇಲಿನ ಜನರು ಈ ಕೃತ್ರಿಮ ಕಾಲುವೆಗಳನ್ನು ತೆಗೆಯುವುದಕ್ಕೆ ಎಷ್ಟು ತಾನೆ ಶ್ರಮಪಟ್ಟಿರಬಹುದು ? ಕೆಲವು ಕಾಲುವೆಗಳು ಸುಮಾರು ೧೫-೨೦ ಮೈಲು ಅಗಲವಿದ್ದು ೨,೦೦೦ ಮೈಲು ಉದ್ದವಿರುತ್ತವೆ. ಒಂದು ಕಾಲುವೆಯಂತೂ ೩೫೪೦ ಮೈಲು ಉದ್ದವಿದೆಯಂತೆ! ನಿಜವಾಗಿಯೆ ಮಂಗಳ ಗ್ರಹವು ಅತ್ಯಂತ ಆಶ್ಚರ್ಯಕರವಾದುದು. ಅದಕ್ಕೂ ಸೃದ್ಧಿಗೂ ಸಾಮ್ಯವಿದೆ. ಆದರೆ ಮಂಗಳನಲ್ಲಿ ಜನರು ಇರಲಿಕ್ಕಿಲ್ಲವೆಂದೂ ಅನೇಕರ ಊಹೆ. ಮಂಗಳನ ಮೇಲಿನ ಜನರಿಗೆ (ಅವರು ಇದ್ದುದೆ ಆದರೆ) ಆಕಾಶವು ಇಲ್ಲಿಯ ಜನರಿಗೆ ಕಾಣುವಂತೆಯೆ ಕಾಣುವುದು. ನಕ್ಷತ್ರಗಳು ಇಲ್ಲಿ ಯಂತೆಯೆ ಕಾಣುವವ, ಗ್ರಹಗಳು ಮಾತ್ರ ತುಸು ಚಿಕ್ಕದೊಡ್ಡವಾಗಿ ಕಾಣುವವು. ಮಂಗಳನ ಕಕ್ಷೆಯ ಹೊರಗೆ ಹೋದೆವೆಂದರೆ ಕ್ಷುದ್ರಗ್ರಹಗಳ ದೊಡ್ಡ ಗುಂಪು ಬರುತ್ತದೆ. ಈ ಗುಂಪು ದುರ್ಬಿನಿನ ಸಹಾಯವಿಲ್ಲದೆ ಕಾಣಲಾರದು. ಇವುಗಳಲ್ಲಿ ಎಲ್ಲಕ್ಕೂ ದೊಡ್ಡದರ ವ್ಯಾಸವು ೪೮೦ ಮೈಲು ಗಳು. ಒಂದೆರಡು ಮೈಲು ವ್ಯಾಸವುಳ್ಳವುಗಳೂ ಇವುಗಳಲ್ಲಿವೆ. ಇವುಗಳ ಉತ್ಪತ್ತಿಯ ವಿಷಯವು ಬಹಳ ಬೋಧಪ್ರದವಿದೆ. ಶನಿಯ ಸುತ್ತಲೂ ವಲಯವಿರುವಂತೆ (ವ ಎಂದೆ ನೋಡಿರಿ) ಸೂರ್ಯನ ಸುತ್ತಲೂ ವಿರಲವಾದ ವಲಯವಿತ್ತೆಂದೂ, ಅದರ ಅವಶೇಷವೇ ಈ ಕ್ಷುದ್ರ ಗ್ರಹಗಳೆಂದೂ ಈಗ ತಿಳಿಯಲ್ಪಟ್ಟಿದೆ. ಗ್ರಹೋಪಗ್ರಹಗಳೆಲ್ಲ ಇಂತಹ ವಲಯಗಳಿಂದಲೆ ಆಗಿರಬೇಕೆಂದೂ ನೆರೆಯಲ್ಲಿಯೇ ಇರುವ ಗುರುವಿನ ಆಕರ್ಷಣದ ಆಘಾತದಿಂದ ಈ ಕ್ಷುದ್ರ ಉಪಗ್ರಹಗಳು ಒಟ್ಟಾಗಿ ಗ್ರಹವೊಂದನ್ನು ಮಾಡ ಲಾರವೆಂದೂ ಹೇಳಬೇಕಾಗಿದೆ. ಇವುಗಳನ್ನು ದಾಟಿದರೆ ಬೃಹದ್ಧಹಗಳ ಕ್ಷೇತ್ರದಲ್ಲಿ ಕಾಲಿಡುವೆವು. ಇವುಗಳಲ್ಲಿ ಮೊದಲನೆಯದೂ ಎಲ್ಲಕ್ಕೂ ದೊಡ್ಡದೂ ಆದುದು ಗುರುಗ್ರಹವು. ಈ ಗ್ರಹವು ಭೂಮಿಯ ಸಾವಿರಪಟ್ಟು ದೊಡ್ಡದ , ಇದರ ವ್ಯಾಸವು ಸುಮಾರು ೯೨,೦೦೦ ಮೈಲುಗಳ , ಸೂರ್ಯನಿಂದ ಇದರ ಅಂತರವು ೫೨ ಕೋಟಿ ಮೈಲಿಗಳು. ಇದು ನಿಮಿಷಕ್ಕೆ ಎಂಟು ಮೈಲುಗಳಂತೆ ಸೂರ್ಯನ