ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೯೮ ]ಸ್ಥಳಕ್ಕೆ ಹೋಗಲಿಕ್ಕೆ ಅದಕ್ಕೆ ಅವಕಾಶ ಹಿಡಿಯುವದಿಲ್ಲ. ಜಳಿಜ್ವರದಲ್ಲಿ ಕಾಲ ಭೇದದಿಂದ ೪ ಭೇದಗಳಿರುತ್ತವೆ. ದಿನಾಲು ಎರಡು ಸಾರೆ ಇಲ್ಲವೆ ಒಮ್ಮೆ ಬರುವ ಜ್ವರ, ದಿನಾಲು ಒಮ್ಮೆಯೇ ಬರುವ ಜ್ವರ, ಜಿನಬಿಟ್ಟು ದಿನ ಬರುವ ಜ್ವರ (ಅಂದರೆ ೩ನೇ ದಿವಸ ವರರ ಚಳಿ ಬರುವ ಜ್ವರ), ನಡುವೆ ೨ ದಿನ ಬಿಟ್ಟು ಬರುವ(೪ರ ಚಳಿಜ್ವರ) ಜ್ವರ, ಈ ನಾಲ್ಕರ ಸ್ಥಾನಗಳ ಬೇರೆ ಬೇರೆ ಯಾಗಿರಬೇಕು, ೧ ಆಮಾಶ, ೨ ಹೃದಯ, 4 ಕಂಠ, ೪ ತಲೆ ಎಂದು ಆ ಸ್ಥಾನಗಳನ್ನು ಕಲ್ಪಿಸಬಹುದು. ದೋಷಗಳು ಕೋಪಗೊಳ್ಳುವ ಕಾಲವು ವಾಗೃಟನ ವಾಕ್ಯದಂತೆ ಹಗಲು ೧ ಸಾರೆ, ರಾತ್ರಿ ೧ ಸಾರೆ ಎಂದು ೨ ಸಾರೆ ಇರುವದರಿಂದ ಆಮಾಶಯದಲ್ಲಿ ದೋಷವಿರುವವರೆಗೆ ದಿನಾಲು ೨ ಸಾರೆ ಜ್ವರ ಬರುತ್ತವೆ. ದೇಹವು ಹೃದಯದಲ್ಲಿದ್ದು, ಅದು ಆಮಾಶಯಕ್ಕೆ ಬಂದು ತಲುಪಲಿಕ್ಕೆ ಒಂದು ದಿನದ ಅವಕಾಶ ಬೇಕಾಗುವದೆಂದು ಕಲ್ಪಿಸಿದರೆ ಹೃದಯ ದೊಳಗಿನ ದೋಷಗಳಿಂದ ಬರುವ ಜ್ವರವು ೨ನೇ ದಿವಸ ಬರುತ್ತವೆ, ಕಂಠ ದೊಳಗಿನ ದೋಷವು ಆಮಾಶಯಕ್ಕೆ ಬರಲಿಕ್ಕೆ ೨ ದಿವಸ ಬೇಕಾಗುವವು. ಅಂದರೆ ಕಂಠದಲ್ಲಿ ದೋಷವಿದ್ದ ರೋಗಿಗೆ ಮಕರ ಚಳಿಜ್ವರ ಬರುತ್ತವೆ. ತಲೆಯೊಳ ಗಿನ ದೋಷವು ಆಮಾಶಯಕ್ಕೆ ಇಳಿಯುವದಕ್ಕೆ ಮೂರು ದಿವಸ ಬೇಕಾಗುವವು; ಆದುದರಿಂದ ತಲೆಯೊಳಗೆ ದೋಷವಿದ್ದ ರೋಗಿಗೆ ನಾಲ್ಕರ ಚಳಿಜ್ವರಗಳು ಬರು ತಿರುತ್ತವೆಯಾವ ದಿವಸ ಜ್ವರ ಬರುತ್ತವೆ. ಆ ದಿನವನ್ನು ಮೊದಲನೇ ದೆಂದು ಎಣಿಸಿದರೆ ಮೇಲಿನ ವಿವರಣವೆಲ್ಲವೂ ಮನಗಂಡು ಬರುತ್ತದೆ, ದಿನಾಲು ಬರುವ ಜ್ವರಕ್ಕೆ ಉಪಾಯಗಳು:೧ ಕಹಿಪಡುವಲು, ತ್ರಿಫಳ, ಬೇವಿನ ಎಲೆ, ದೀಪದ್ರಾಕ್ಷಿ, ಕಕ್ಕಿಕಾಯಿ ತಿಳಲು ಮತ್ತು ಅಡಸಾಲ ಇವುಗಳ ಆಪಾಯದಲ್ಲಿ ಜೇನಪ್ಪ ಕಲ್ಲುಸಕ್ಕರಿಗ ಳನ್ನು ಹಾಕಿ ಕೊಟ್ಟರೆ ದಿನಾಲು ಬರುವ ಜ್ವರ ನಿಲ್ಲುತ್ತವೆ. 3 ಲಗ್ನವಾಗದ ಹುಡಿಗಿಯು ನಂತ ನಲಿನಿಂದ ಉತ್ತರಾಣಿಯ ಬೇರಿಗೆ ಕಟ್ಟಿ ಅದನ್ನು ಚೆಂಡಿಕೆಗೆ ಇಲ್ಲವೆ ಹೆಲಿಗೆ ಕಟ್ಟಬೇಕು. ಇದರಿಂದಲು ಪ್ರತಿ ದಿನ ಬರುವ ಜ್ವರಗಳು ನಿಲ್ಲುತ್ತವೆ. ೩ ಗಂಗಿಯ ಒಲಭಾಗದ ರೆಕ್ಕೆಯನ್ನು ಬಿಳೇ ನೂಲಿನಿಂದ ರೋಗಿಯ ಎಡಗಿವಿಗೆ ಕಟ್ಟಿದರೆ ದಿನಾಲು ಬರುವ ಜ್ವರಗಳು ನಿಲ್ಲುತ್ತವೆ. ೪ ಗೋರಖ ಕಾಕಡೆ, ಗಾಯದ ತಪ್ಪಲು, ಕಲ್ಲುಕಡಲೆ, ಹಕ್ಕರಿಕೆ, ಭಂಗಿ ಇವುಗಳಲ್ಲಿ ಯಾವುದೆಂದರ ಬೇರನ್ನು ಕೊರಳಲ್ಲಿ ಕಟ್ಟಿದರೆ ದಿನಾಲು ಬರುವ ಜ್ವರ Yಾತ್ಸವ.