________________
[ ೧೫೦ ] ಹಚ್ಚಬೇಕು. ಬೆವರು ಬಂದ ಬಂದಂಕಿ ಆರಿಸಬೇಕು. ಹವೆಯ ಸುದ್ದಿಗೆ ರೋಗಿಯ ಕಡೆಯಲ್ಲಿ ಧರ ಹಾಕಬೇಕು. ಬಳಿಕ ಶಸ ಹತ್ತಿನ ಮೇಲೆ ಲಘು ಅನ್ನದ ಊಟ ಮಾಡಿಸಬೇಕು. ಜ್ವರ ನಿಂತ ಮೇಲೆ ೧೬ದಿನಗಳ ಪರ್ಯಂ ಶವಾದರೂ ಬಿಸಿ ನೀರು ಕುಡಿಸಬೇಕು. ಜ್ವರಮುಕ್ತವಾದ ಬಳಿಕ ಅವನಿಗೆ ಹೆಚ್ಚು ಹಸಿವೆಯಾಗುವದರಿಂದ ಅವನು ಆಗಾಗ್ಗೆ ತಿನ್ನಲಿಕ್ಕೆ ಬೇಡುತ್ತಾನೆ. ಇ೦ಥ ಕಾಲದಲ್ಲಿ ಉಂಡಿ ಮುಂತಾದ ಜಡಪದಾರ್ಥಗಳನ್ನು ಸರ್ವಥಾ ಕಂಡದೆ, ಹಗುರು ಹಾಗು ಸಹಜ ಪಚನವಾಗುವಂಥ ಪದಾರ್ಥಗಳನ್ನು ತಿನಗೊಡಬೇಕು. ಬದಾಮು, ಸಂಡಿಗುಂಬಳ ಪಾಕಗಳನ್ನು ಕಂಡುವದು ಯುಕ್ತವು, ಕಿತ್ತಳೆ, ದಾಳಿಂಬ ಮುಂತಾದ ಪಥ್ಯಕರವಾದ ಹಣ್ಣುಗಳನ್ನು ಕೊಡಬೇಕು. ಬೈಲು ಹವೆಯಲ್ಲಿ ತುಸ ತುಸ ಅಡ್ಡಾಡಲಿಕ್ಕೆ ಒಯ್ಯಬೇಕು. ಈ ಬಗೆಯಾಗಿ ಮೊದಲಿ ನಂತೆ ಶಕ್ತಿ ಬರುವ ವರೆಗೆ ಅವನ ಶುಕ್ರೂಷೆ ಹಾಡತಕ್ಕದ್ದು, ಆ ಮೇಲೆ ಅವನ್ನು ಯಥೇಚ್ಛ ವರ್ತಿಸತಕ್ಕದ್ದು. (೫೦) ಜ್ವರ ನಿಂತಮೇಲೆ ಅಶಕ್ತತೆಗುಪಾಯ. ೧ ಜ್ವರ ನಿಂತ ಬಳಿಕ ಒಂದು ಸಪ್ತಕ (ಏಳು ದಿನಗಳ ವರೆಗೆ ಬಜಿ, ಮತ್ತು ನೆಲಬೇವುಗಳ ಕಷಾಯವನ್ನು ಬೆಲ್ಲ ಹಾಕಿ ಕೊಡುತ್ತಿರಬೇಕು. ೨ ೨ ಶಲಿ ಬಜಿಯನ್ನು ಅಬಡ-ಬಬಡ ಜಜ್ಜಿ ಅದರಲ್ಲಿ ನಾವು ಸೇರು (೧೦ ತೊಲಿ) ಎಸರುನೀರು ಹಾಕಿಡಬೇಕು. ಆರಿದ ಮೇಲೆ ಆ ನೀರು ಸೋಸಿ ಇಟ್ಟು ಪ್ರತಿ ಸಾರ ೨.೨|| ತೊಲಿಯಂತೆ ದಿನದಲ್ಲಿ 3 ಸಾರೆ ಕೊಡುತ್ತಿರಬೇಕು. ೩ ಲಘುಮಾಲಿನೀ ವಸಂತ:- ಜೇನುತುಪ್ಪ ಹಿಪ್ಪಲಿಯ ಚAರ್ಣ ಇವನ್ನು ಕೂಡಿಸಿ ೨-೩ಗುಂಜಿ ತೂಕದಂತ ಎರಡೂ ಹಂಶ ಕಡತಕ್ಕದ್ದು, ಅದರಿಂದ ಶಿಲ್ಕು ಇದ್ದ ಜ್ವರಗಳು ವಿಶೇಷವಾಗಿ, ಅಗ್ನಿ ಪ್ರದೀಪ್ಪವಾಗುತ್ತದೆ. - ೫೧ ಗುದ್ದವ್ವನ ಬೇನೆ. ಲಕ್ಷಣ:- ಜ್ವರಗಳು ೩ ದಿನ ಬರುತ್ತವೆ. ಜ್ವರದ ವೇಗವು ಹೆಚ್ಚಾ ಗಿರುತ್ತದೆ; ಆದರೆ ಈ ಬೇನೆಯಿಂದ ಸಹಸಾ ಯಾರೂ ಸಾಯುವದಿಲ್ಲ, ಮೊದಲು ಯಾವ ಬಗೆಯ ಸಂಚನೆ ಕಂಡ ಇಲ್ಲದೆ, ಈ ಜ್ವರಗಳು ಆಕಸ್ಮಿಕ ವಾಗಿ ಬರುತ್ತವೆ; ಮತ್ತು ರೋಗಿಯು ಬಹಳ ಹೈರಾಣಾಗುತ್ತಾನೆ. ಈ ಬೇನೆಯಲ್ಲಿ ಅಸಮಾಧಾನ, ಕೈ-ಕಾಲು ಹರಿಯುವದು, ನೀರಡಿಕೆ, ತಲೆಶೂಲಿ, ಅರುಚಿ ಈ ಲಕ್ಷಣಗಳಾಗುತ್ತಿರುತ್ತವೆ. ಈ ಬೇನೆಯ ಕೆಲವು ರೋಗಿಗಳ