ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

+{ ೬೪ ] ೨೩ ಕಥೋಲ್ಬಣ ಸನ್ನಿಪಾತ. ಲಕ್ಷ ಣೆ:- ಇದರಲ್ಲಿ ಕಫದೋಷವು ಹೆಚ್ಚಾಗಿದ್ದು ಆಲಸ್ಯತನ, ಅರುಚಿ, ಓಕರಿ, ದಾಹ, ತಲೆ ತಿರುಗುವದು ಮನಸ್ಸಿಗೆ ಸಂಗಸಿಲ್ಲದಿರುವದು, ಭ್ರಮೆ, ಮಬ್ಬು ಮತ್ತು ಕವು ಈ ಲಕ್ಷಣಗಳಿರುತ್ತವೆ, ಕ ಫೋಲ್ಬಣ, ಸನ್ನಿಪಾತಕ್ಕ ಉಪಾಯಗಳು:೧ ನೆಲಗುಳ ಬೇರು, ಗುಕ್ಕ, ತಾವರೆಗಡ್ಡೆ, ಗಂಟುಭಾರಂಗಿ, ಕಳಶ, ದುಷ್ಟಪುಚೆಟ್ಟು, ನೆಲtಂಗಳ, ಕೆಡುಮುರುಕನ ಬೀಜ, ಕಹಿ ಪಡುವಲ, ಕಟುಕರಣಿ, (ಇದಕ್ಕೆ ಬೃಹತ್ತಾದ ಗಣವೆನ್ನುತ್ತಾರೆ) ಇವುಗಳ ಕಾಥೆ-ನಿಕಾಥೆ ಮಾಡಿ ಕೊಡಬೇಕು. ಈ ಕಷಾಯದಿಂದ ಕಫೆಲ್ಬಣ ಸನ್ನಿಪಾತ, ದವು ಮೊದಲಾದ ಎಲ್ಲ ಉಪದ್ರವಗಳ ನಾಶವಾಗುವದು, ೨ ಹಿಪ್ಪಲಿಬೇರು, ದೇವದಾರು, ಕಡವಾರಕನಬೀಜ, ವಾಯವ ಡಂಗ, ಒಂದೆಲಗ, ಕಾಡಿಗ್ಗರುಗು, ಚಿತ್ರ ಮುಲ, ಕಟು, ಕಿರಿಶಿಣ, ತಾವರ ಗಡ್ಡೆ ಇವುಗಳ ಕಷಾಯದಲ್ಲಿ ೧ ಮಾಸಿ ತೂಕ ಗುಗುಳದ ಪುಡಿಹಾಕಿ ಕಂಡು ವದು. ೩ ಶಾಸನೆ, ಅರಳಿಕಾಯಿ, ಗುಕ್ಕೆ ದಬೇರು, ನೆಲಗುಳ್ಳ ಬೇರು, ಅಕ್ಕಿ, ಅಗಳಶುಂಠಿ, ಬಜಿ, ಕಾಡುಮೆಣಸಿನಬೇಕು ಇವುಗಳ ಕಷಾಯದಲ್ಲಿ ವಾಸಿ ತೂಕ ಗುಗ್ಗುಳದ ಪುಡಿ ಹಾಕಿ ಕೊಡಬೇಕು. ಇದರಿಂದ ಸನ್ನಿ ಪಾತ್ರ, ಬೆವರು, ಶೀತ, ಬಡಬಡಿಕೆ, ಶಲಿ, ದನ, ಕಫಗಳ ನಾಶವಾಗುತ್ತದೆ. ೨೪ ತ್ರಿಯುಣ ಸನ್ನಿಪಾತ. ಲಕ್ಷಣ:-ಇದು ಎಲ್ಲ ಲಕ್ಷಣಗಳಿಂದ ಕೂಡಿರುತ್ತದೆ. ಜ್ವರ, ಮೈ ನೋವು, ನೆತ್ತಿ ಯಶೋಷ, ಇಂದ್ರಿಯಗಳ ಬಲಹೀನತೆ, ಹೊಟ್ಟೆಯುಬ್ಬಿಣ, ಕಣ್ಣಿಗೆ ಹಬ್ಬು, ಅರುಚಿ, ಶ್ವಾಸ, ಒಣಕವು, ಶ್ರಮ, ಭ್ರಮೆ ಇತ್ಯಾದಿ ಲಕ್ಷಣಗಳಾಗುವೆ. ತ್ರಿಯುಣ ಸನ್ನಿಪಾತಕ್ಕೆ ಉಪಾಯಗಳು, ೧ ಶುಂತಿ, ಮೆಣಸು, ಹಿಪ್ಪಲಿ, ಜೇಕಿನಗಡ್ಡಿ, ತ್ರಿಫಳ, ಬೇವು, ಕಹಿ ಪಡುವಲ, ಕಟುಕರಣಿ, ಕೊಡುವುಕುಕನಬೀಜ, ನೆಲಬೇವು, ಅಮೃತ ಬಳಿ, ಅಗಳಶುಂಠಿ ಇವುಗಳ ಕಷಾಯದಿಂದ ತ್ರಿದೋಷಗಳ ನಾಶವಾಗುತ್ತದೆ. ೨ ಶುಂಠಿ, ಹವೀಜ, ಗಂಟುಭಾರಂಗಿ, ಪದ್ಮಕಾಷ್ಠ, ಶಕ್ತಚಂದನ, ಬೇವು, ಕಹಿಪಡುವಲ, ತ್ರಿಫಳ, ಜೇಷ್ಠಮಧು, ಕಲ್ಲ ಕಡಲೇಬೇಕು, ಸಕ್ಕರೆ,