ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

{ ೭೮ ]=ma ಆರಿದ ನೀರು ಕುಡಿಯಲಿಕ್ಕೆ ಕೊಡಬೇಕು, ಹಳೇ ಅಕ್ಕಿಯ ಗಂಜಿಯನ್ನು ಸೈಂಧಲವಣದೊಡನೆ ಕುಡಿಯಲಿಕ್ಕೆ ಕೊಡಬೇಕು, ಪಿತ್ತಾಧಿಕ್ಯವಿದ್ದರೆ, ಕಲ್ಲುಸಕ್ಕರೆ ಹಾಕಿ ಕೊಡಬಹುದು. ತೊಗರಿ, ಹೆಸರು, ಹುರುಳಿ ಇವುಗಳ ಅಚ್ಚ ಮಾಂಶ ಕಷಾಯದ ಕಾಟಿಯಲ್ಲಿ ಭತ್ತದ ಅರಳಲ್ಲಿ, ೧೬ ಪಾಲು ನೀರು ಹಾಕಿ, ಕುದಿಸಿ, ೪ ಪಾಲು ಉಳಿಯಿತಂದರೆ ಆ ಕಾಟೆಯನ್ನು ರೋಗಿಗೆ ಕೊಡಬೇಕು, ಇದಕ್ಕೆ ಅಪಥ್ಯ:- ತಣ್ಣೀರು, ಮದ್ಯ, ಮಾಂಸ, 77ಾಳಿ, ಅರಳೆಯ nಾದಿ (ಹಾಸಿಗೆ), ಜಡಾನ್ನ, ಬಹಳ ಮಾತು, ದೊಡ್ಡ ಸಪ್ಪಳ ಇಲ್ಲವೆ ಗಲಾಟೆಗಳು ವರ್ಜ್ಯ, (೧೫) ಸಮತ್ರಿದೋಷ ಲಕ್ಷಣ. ವಾತ, ಪಿತ್ತ, ಕಫ ಇವು ಒಂದೇ ಕಾಲಕ್ಕೆ ಸಮಬಲದಿಂದ ಪ್ರಕೋಪ ಗಳಾಗಿ, ಅವುಗಳ ಪೂರ್ವೋಕ್ತ ಸಂಪೂರ್ಣ ಅಕ್ಷಣಗಳು ಆಗುತ್ತವೆ; ಮತ್ತು ಅದರಿಂದ ಇಂದ್ರಿಯಗಳ ಎಲ್ಲ ವ್ಯಾಪಾರಗಳು ಕಪ್ಪಾಗುತ್ತವೆ, ಏನನ್ನೂ ತಿನ್ನುವದಾಗುವದಿಲ್ಲ. ಅತಿ ಶ್ವಾಸ, ಮೈ ಸೆಟೆಯುವದು, ನೆಟ್ಟಿಗ್ಗಣ್ಣಿಗೆ ಬೀಳು ವದು ಈ ಲಕ್ಷಣಗಳಾಗುತ್ತವೆ. ಈ ಲಕ್ಷಣಗಳಿಂದ ಯುಕ್ತ ನಾದ ರೋಗಿಯು ೩-೪ ದಿನಗಳಲ್ಲಿ ಸಾಯುತ್ತಾನೆ, ಯಾವ ದೋಷವು ಹೆಚ್ಚಾಗಿದೆ. ಆದನ್ನು ಕಡಿಮೆ ಮಾಡಬೇಕು; ಮತ್ತು ಯಾವದು ಕಡಿಮೆಯಾಗಿದೆ. ಅದನ್ನು ಯೋಗ್ಯ ಮರ್ಯಾದೆಯ ವರೆಗೆ ಹೆಚ್ಚಿಸಬೇಕು. ಅಂದರೆ ವೈದ್ಯನು ಅವುಗಳನ್ನು ತನ್ನ ಹಿಡಿತದಲ್ಲಿ ತಂದು ಕಳ್ಳಬೇಕು. ಬೆಳೆದ ದೋಷವನ್ನು ಕಡಿಮೆ ಮಾಡಿದರೆ ಮಧ್ಯಮವಾದ ದೋಷವು ತನ್ನಷ್ಟಕ್ಕೆ ತಾನೇ ಶಾಂತವಾಗುತ್ತದೆ. ೨೭ ಆಗಂತುಕ ಜ್ವರಗಳು. [ಇದರಲ್ಲಿ ೧೫ ಪ್ರಕಾರಗಳಿರುತ್ತವೆ.] ಕಾರಣಗಳು:-ಈ ಜ್ವರಗಳು ಅತಿಸಿಟ್ಟು, ಶೋಕ, ಭಯ, ಚಿಂತೆ, ಅತಿ ಲಾಭ, ಹಾನಿ, ಸಂತಾನ, ಶ್ರಮ, ಆಘಾತ, ಶಸ್ತ್ರಾಘಾತ, ಭೂತಬಾಧೆ, ಶಲಿ, ಪೀಡೆಯನ್ನುಂಟು ಮಾಡುವ ರೋಗ, (ನಾರಹುಣ್ಣು, ಕುರ, ಮೊಂಡೆಬೇನೆ ಇತ್ಯಾದಿ) ಮುಂತಾದ ಕಾರಣಗಳಿಂದ ಬರುತ್ತವೆ. ವೈದ್ಯರು ಆಯಾ ಕಾರಣ ಗಳನ್ನ ಚೆನ್ನಾಗಿ ವಿಚಾರ ಮಾಡಿ ಔಷಧಗಳನ್ನು ಯೋಜಿಸಬೇಕು. ಇವುಗಳ