ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ತಿಲೋತ್ತಮೆ. ಕುರಿತು-ಹೇ, ದಯಾಮಯ ಪ್ರಭುವೇ, ಪರಮೇಶ್ವರಾ, ನಿನ್ನ ಲೀಲೆಯು ಅಗಾಧವಾದದ್ದು, ನಿನ್ನ ಸರ್ವಶಕ್ತಿಯನ್ನು ಮನುಷ್ಯನು ಕಲ್ಪಿಸಲಾರನು; ಆದರೆ ದೀನಬಂಧುವೇ, ನೀನು ಉಸ್ಮಾನನ ಕೈಯಿಂದ ನನ್ನ ಪ್ರಾಣವನ್ನು ಏಕೆ ಬದುಕಿಸಿದೆ? ನನ್ನಿ೦ದ ಯಾವ ಮಹತ್ತ್ಯವು ಜಗತ್ತಿನಲ್ಲಿ ಆಗಬೇಕಾ ಗಿದೆ? ಅದಿರಲಿ, ಉಸ್ಮಾನನ ಸಂಕಟನಿವಾರಣವಾದದ್ದು ಬಹಳ ನೆಟ್ಟಗಾಯಿತು, ಎಂದು ನುಡಿಯುವಾಗ ಆಯೇಷೆಯ ಕಣೋಳಗಿಂದ ನೀರುಗಳು ಸುರಿಯ ಹತ್ತಿದವು. ಆಕೆಯು ಉಸ್ಮಾನನ ಬಳಿಗೆ ಬಂದು ಆತನ ಕೈಯನ್ನು ಹಿಡಿದು ಕೊಂಡು-ಅಣ್ಣಾ, ಉಸ್ಮಾನ, ಈ ಕ್ಷುದ್ರ ಸ್ತ್ರೀಯ ಸಲುವಾಗಿ ನಿನ್ನ ಪ್ರಾಣ ನನ್ನು ಸಂಕಟಕ್ಕೆ ಗುರಿಮಾಡಿದ್ದು ಯೋಗ್ಯವಲ್ಲ. ನನ್ನ ಮೈಮೇಲೆ ಆ ಸರ್ಪವು ಮಲಗಿಕೊಂಡದ್ದರಿಂದ ನನಗೆ ತಣ್ಣಗೆ ಹತ್ತಿತೆಂದು ಈಗ ನನಗೆ ಗೊತ್ತಾಯಿತು; ಆದರೆ ನಿದ್ದೆಗಣ್ಣಿನಲ್ಲಿ ಯಾರೋ ನನ್ನ ಮೈಮೇಲೆ ಕೈಯಿಟ್ಟಿರೆಂದು ನಾನು ತಿಳಕೊಂಡೆನು. ಅಣ್ಣಾ, ಉಸ್ಮಾನ, ನಾನು ಹಿಂದುಮುಂದಿನ ವಿಚಾರವಿ ಲ್ಲದೆ ನಿನಗೆ ಬಾಯಿಗೆ ಬಂದಹಾಗೆ ಮಾತಾಡಿದ್ದು ಅಪರಾಧವಾಯಿತು. ನನ್ನನ್ನು ಕ್ಷಮಿಸಬೇಕು. ನನ್ನ ಮೇಲೆ ನಿನ್ನ ಪ್ರೇಮವು ನಿಸ್ಸಿಮವಾಗಿ ರುತ್ತದೆ. ಅದನ್ನು ವರ್ಣಿಸುವ ಯೋಗ್ಯತೆಯು ನನಗಿಲ್ಲ; ಆದರೆ, ಅಣ್ಣಾ ಉಸ್ಮಾನ, ನನ್ನ ಮಹಾಪರಾಧವನ್ನು ಕ್ಷಮಿಸುವೆಯಷ್ಟೆ? ಎಂದು ನುಡಿದು, ಉಸ್ಮಾನನ ಪಾದಗಳನ್ನು ಹಿಡಕೊಳ್ಳಲು, ಉಸ್ಮಾನನು ಆಯೇಷೆಯನ್ನು ಪ್ರೇಮದಿಂದ ಹಿಡಿದೆತ್ತಿ~ (( ಇದರಲ್ಲಿ ಅಪರಾಧವೇ ತರದು, ಕ್ಷಮೆಯೇತ ರದು? ಆಯೇಷೆ, ಹೀಗೆ ಯಾಕೆ ಮಾಡುತ್ತೀ? ಕಾಗೆ ಕೂಡಲಿಕ್ಕೂ ಟೊಂಗೆ ಮುರಿಯಲಿಕ್ಕೂ ಗಂಟುಬಿದ್ದಂತೆ, ಅಕಸ್ಮಾತ್ತಾಗಿ ಒದಗಿದ ಪ್ರಸಂಗಕ್ಕಾಗಿ ಇಷ್ಟು ಹೇಳಿಕೊಳ್ಳುವದೇಕೆ? ನಿನಗೆ ನಾನೇನು ಪರಕೀಯನೇ? ನಿನ್ನ ಕತೋ ರ ಶಬ್ದಗಳು ಕೂಡ ನನ್ನ ಕಿವಿಗಳಲ್ಲಿ ಅಮ್ಮ ತವನ್ನು ಸ್ರವಿಸುತ್ತಿದ್ದವು, ನಿನ್ನ ಮಾತಿನಿಂದ ನನಗೆ ಸಿಟ್ಟು ಬಂದಿರುವದಿಲ್ಲ. ಆಯೇ ಷೇ, ನೀನು ನನ್ನನ್ನು ಹೀನಕೃತ್ಯಮಾಡುವವನೆಂದು ತಿರಸ್ಕರಿಸಿದ್ದರಿಂದ ಮಾತ್ರ ನನಗೆ ಸ್ವಲ್ಪ ಅಸ ಮಾಧಾನವಾಗಿದೆ. ಆಯೇಷೆಯು ಮೋರೆಯನ್ನು ತಗ್ಗಿಸಿಕೊಂಡು ಖಾನನ ಮಾತುಗಳನ್ನು ಸುಮ್ಮನೆ ಕೇಳುತ್ತಿದ್ದಳು. ಮತ್ತೆ ಉಸ್ಮಾನನು ಆಯೇಷೆಯನ್ನು ಕುರಿತು