ಈ ಪುಟವನ್ನು ಪರಿಶೀಲಿಸಲಾಗಿಲ್ಲ.

106 ಸಿಸಿಲಿ ದೇಶದಲ್ಲಿ ನೀನು ಹೇಗೆ ಬೈದಿನಲ್ಲಿ ಇಡಲ್ಪಟ್ಟಿದ್ದೆಯೋ, ಈಜಿಪ್ಟ್ ದೇಶದಲ್ಲಿ ಹೇಗೆ ವಿಕ್ರಯಿಸಲ್ಪಟ್ಟೆಯೊ, ಬಂದ ಕಷ್ಟಗಳನ್ನು ಹೇಗೆ ಸಹಿಸಿದೆಯೋ, ಅವು ಗಳನ್ನೆಲ್ಲಾ ಅವಳಿಗೆ ನಿನ್ನಲ್ಲಿ ಕನಿಕರ ಉಂಟಾಗುವಂತೆ ಹೇಳಿದ್ದರೆ ಸಾಕಾಗಿತ್ತು. ನೀನು ಜಗದೇಕವೀರನೆಂಬದಾಗಿಯೂ, ನಿಮ್ಮ ತಂದೆಗಿಂತಲೂ ನೀನು ದೊಡ್ಡವ ನೆಂಬದಾಗಿಯೂ, ನಿನ್ನ ದೇಹಬಲವು ಹರ್ಕುಲೀಸನ ಬಲಕ್ಕೆ ಸಮಾನವಾದ ದ್ದೆಂದು ತೋರುವಂತೆಯೂ, ನಿನ್ನ ಬುದ್ಧಿ ಬಲವು ಜೂಪಿಟರನ ಬಲಕ್ಕೆ ಸಮಾನ ವಾದದ್ದೆಂದು ತೋರುವಂತೆಯ, ನಿನ್ನ ಪರಾಕ್ರಮವು ಮಾರ್ಸ್‌ನ ಪರಾಕ್ರ ಮಕ್ಕೆ ಸಮಾನವಾದದ್ದೆಂಬದಾಗಿಯ ತೋರುವಂತೆ ನೀನು ವಿಜೃಂಭಿಸಿ, ನಿನ್ನಲ್ಲಿ ಅವಳು ಅನುರಕ್ತಳಾಗುವಂತೆ ಮಾಡಿಕೊಂಡದ್ದು ತಪ್ಪು.” ಈ ಮಾತುಗಳನ್ನು ಕೇಳಿ ಟೆಲಿಮಾಕಸ್ಸನು ಹೇಳಿದ್ದೇನೆಂದರೆ :- ( ಈಗ ಮಾಡತಕ್ಕದ್ದೇನು ? ಅಪರಾಧವು ಮಾಡಲ್ಪಟ್ಟಿತು, ಅದರ ಸರಿ ಣಾಮ ಫಲವು ನನಗೆ ತೋರಲಿಲ್ಲ, ನಾನು ಮಾಡಿದ ತಪ್ಪುಗಳನ್ನು ಹೇಗೆ ತಿದ್ದಿ ಕೊಳ್ಳಲಿ ? ಅದನ್ನು ನನ್ನಲ್ಲಿ ಕೃಪೆಯಿಟ್ಟು ಹೇಳಬೇಕು.” ಈ ರೀತಿಯಲ್ಲಿ ಪ್ರಾರ್ಥಿಸಲು, ಮೆಂಟರನು ಹೇಳಿದ್ದೇನೆಂದರೆ :- “ ಎಲೈ ಟೆಲಿಮಾಕಸ್ಸನೇ, ಇದುವರೆಗೂ ನಡೆದ ವಿದ್ಯಮಾನಗಳನ್ನು ಇವಳಿಗೆ ಶೃತಪಡಿಸುವುದರಲ್ಲಿ ನೀನು ತಪ್ಪುಗಳನ್ನು ಮಾಡಿರುವಿ. ಇವಳಿಗೆ ನಿನ್ನಲ್ಲಿ ಅಪ್ರತಿಹತವಾದ ಅನುರಾಗವನ್ನು ಹುಟ್ಟಿಸಿರುವಿ. ಇದನ್ನು ಮೂಲೋ ತ್ಪಾಟನ ಮಾಡುವುದು ಬಹಳ ಕಷ್ಟ, ನಿನ್ನ ವೃತ್ತಾಂತವನ್ನು ಪೂರಾ ಕೇಳಬೇ ಕೆಂಬ ಕುತೂಹಲವು ಅವಳಿಗೆ ಬಲವಾಗಿರುವುದು, ನಿನ್ನ ಕಥೆಯನ್ನು ಇಲ್ಲಿಗೆ ಉಪಸಂಹರಿಸುವುದು ಅಸಾಧ್ಯ, ಆದರೆ, ನಿನ್ನ ವೃತ್ತಾಂತವನ್ನು ಹೇಳುವುದರಲ್ಲಿ, ನೀನು ಎಚ್ಚರಿಕೆಯುಳ್ಳವನಾಗಿರಬೇಕು, ನಿನಗೆ ಬಂದ ವಿಪರಂಪರೆಗಳು ಪರಿ ಹಾರವಾಗುವುದಕ್ಕೆ ನೀನು ಕಾರಣಭೂತನಲ್ಲ. ನಿನ್ನ ಪರಾಕ್ರಮವೂ, ಸಾಹ ಸವೂ, ವಿವೇಕವೂ ಕಾರಣಗಳಲ್ಲ, ಜಗದೀಶ್ವರನ ಪ್ರಸನ್ನತೆಯೇ ಇದಕ್ಕೆ ಮುಖ್ಯ ಕಾರಣ, ಮುಂದಿನ ಕಥೆಯನ್ನು ಹೇಳುವುದರಲ್ಲಿ, ಸತ್ಯವೂ, ಧರ್ಮವೂ ಉದ್ಧರಿ ಸಲ್ಪಡಬೇಕೆಂಬದಾಗಿಯೂ, ಇಹಪರಗಳಲ್ಲಿ ಆಸಕ್ತರಾದವರು ದುರ್ವಿಷಯಗಳಲ್ಲಿ ಮನಸ್ಸನ್ನು ಬಿಡಕೂಡದೆಂಬದಾಗಿಯೂ, ದುಷ್ಟ ಸಂಕಲ್ಪಗಳಿಗೆ ಅಧೀನರಾಗಬಾರ ದೆಂಬದಾಗಿಯೂ, ಎಂಥಾ ಕಷ್ಟಗಳು ಬಂದಾಗ್ಯೂ, ಧರ್ಮದಿಂದ ನಡೆಯಬೇ ಕಂಬದಾಗಿಯೂ, ಧರ್ಮಕ್ಕೆ ಲೋಪವು ಬರುವುದಾದರೆ, ದೇಹವನ್ನು ಬಿಡುವು ದಕ್ಕೂ ಸಿದ್ಧರಾಗಿರಬೇಕೆಂಬದಾಗಿಯೂ, ಹಾಗೆ ಮಾಡತಕ್ಕವರಲ್ಲಿ ದೇವರು ಪ್ರಸನ್ನನಾಗುವನೆಂಬದಾಗಿಯ, ಅದರಿಂದ ಸಕಲ ಇಷ್ಟಾರ್ಧಸಿದ್ಧಿಗಳೂ ಆಗು