ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತು, ಈ ವಿಚಿತ್ರವಾದ ಸ್ವಪ್ನವು ದೇವರ ಅನುಗ್ರಹದಿಂದ ಉಂಟಾದದ್ದೆಂದು ನಾನು ತಿಳಿದುಕೊಂಡೆನು, ವಿಷಯಾಸಕ್ತನಾಗಬಾರದೆಂಬದಾಗಿಯೂ, ಸತ್ಯವ್ರತ ನಾಗಿರಬೇಕೆಂಬದಾಗಿಯೂ, ವಿಷಯ ಸುಖಗಳಲ್ಲಿ ಪರಾಣ್ಮುಖನಾಗಬೇಕೆಂಬದಾಗಿ ಯೂ ನಾನು ಸಂಕಲ್ಪವನ್ನು ಮಾಡಿದೆನು, ಅಷ್ಟರಲ್ಲಿಯೇ ಮೆಂಟರನು ಸತ್ತ ನೆಂಬದಾಗಿಯೂ, ಅವನು ಸ್ವರ್ಗವನ್ನು ಪ್ರವೇಶಿಸಿರುವನೆಂಬದಾಗಿಯೂ ತೋ ರಿತು, ಬಿಕ್ಕಿ ಬಿಕ್ಕಿ ಅಳುವುದಕ್ಕೆ ನಾನು ಪ್ರಾರಂಭಿಸಿದೆನು. ಇದನ್ನು ನೋಡಿದ ಸೈಪ್ರಸ್ ದ್ವೀಪ ನಿವಾಸಿಗಳು ಏತಕ್ಕೆ ಅಳುತ್ತಿ ಎಂಬದಾಗಿ ಕೇಳಿದರು. ಅನೇ ಕರು ನನ್ನನ್ನು ನೋಡಿ, ಪರಿಹಾನ ಮಾಡುವುದಕ್ಕೆ ಉಪಕ್ರಮಿಸಿದರು, ಹಡ ಗನ್ನು ನಡೆಸತಕ್ಕವರು ದ್ರಾಕ್ಷಾರಸವನ್ನು ವಿಶೇಷವಾಗಿ ಪಾನಮಾಡಿ, ಉನ್ನತ ರಾಗಿ ಮನಸ್ವಿ ಕೂಗಿಕೊಳ್ಳುತ್ತಿದ್ದರು, ಆ ಜನರೆಲ್ಲರೂ ಬೇಕಾದ ಹಾಗೆ ಪಾನಮಾಡಿ, ತಮ್ಮ ಕೆಲಸಗಳನ್ನು ಬಿಟ್ಟು, ನಿದ್ರೆ ಮಾಡುವುದಕ್ಕೆ ಉಪಕ್ರಮಿಸಿ ದರು, ಅಷ್ಟರಲ್ಲಿಯೇ ಈ ಕುಡುಕರ ಸಂಗೀತವೂ, ಉನ್ನತ ಪ್ರಲಾಪವೂ ಗಗನ ವನ್ನು ಮುಟ್ಟುವುದಕ್ಕೂ ಉಪಕ್ರಮವಾಯಿತು. ಆಗ ಹರಾತ್ತಾಗಿ ಬಹಳ ನಿಬಿಡ ವಾದ ಮೇಘವು ಆಕಾಶವನ್ನು ಆವರಿಸಿತು, ಪ್ರಳಯಕಾಲದ ಮಾರುತದಂತೆ ಗಾಳಿಯು ಬೀಸುವುದಕ್ಕೆ ಉಪಕ್ರಮವಾಯಿತು, ಅಲೆಗಳು ಪರ್ವತಾಕಾರವಾಗಿ ನಮ್ಮ ಹಡುಗುಗಳಿಗೆ ತಗಲುವುದಕ್ಕೆ ಉಪಕ್ರಮವಾದವು. ಈ ಅಲೆಗಳಿಂದ ಎಳೆ ಯಲ್ಪಟ್ಟು, ನಮ್ಮ ಹಡಗು ಕೆಲವು ಭಾರಿ ಬಂಡೆಗಳ ಕಡೆಗೆ ಬಹಳ ಜೋರಾಗಿ ಹೋಗುವುದಕ್ಕೆ ಉಪಕ್ರಮವಡಿತು, ವಿತೆಯಾಸಕ್ತರಾಗಿಯೂ, ಭೋಗಪರ ಯಣರಾಗಿಯೂ ಇರತಕ್ಕವರು ಕಷ್ಟ ಕಾಲದಲ್ಲಿ ಭಯದಿಂದ ಸಾಯುವುದೂ ಕೂಡ ಉಂಟೆಂದು ಮೆಂಟರನು ಹೇಳುತ್ತಿದ್ದನು. ಈಗ•ಅದು ಅನುಭವಸಿದ್ಧವಾಯಿತು. ನನಗೆ ಬಂದ ವಿಪತ್ತನ್ನು ನೋಡಿ, ಈ ಹಡಗಿನಲ್ಲಿ ಇದ್ದ ಸೈಪ್ರಸ್ ದ್ವೀಪನಿವಾಸಿ ಗಳೆಲ್ಲಾ ಹೆಂಗಸರಂತೆ ಅಳುವುದಕ್ಕೆ ಉವಕ್ರಮಿಸಿದರು, ಎಲ್ಲಿ ನೋಡಿದರೂ ರೋದನವು ಕೇಳಲ್ಪಟ್ಟಿತು, ಧೈರಶಾಲಿಗಳಾದವರು ಒಬ್ಬರೂ ಆ ಹಡಗಿನಲ್ಲಿ ಇರಲಿಲ್ಲ. ತಮ್ಮ ಅವತಾರವು ಪೂರ್ತಿಯಾಯಿತೆಂದು ಕೆಲವರು ದುಃಖಿಸಿದರು. ಈ ವಿಪತ್ತಿನಿಂದ ರಕ್ಷಿಸಲ್ಪಟ್ಟರೆ, ನಾನಾವಿಧವಾದ ಬಲಿಗಳನ್ನು ಕೊಡುವು ದಾಗಿ ದೇವತೆಗಳಿಗೆ ಅನೇಕರು ಹರಕೆಯನ್ನು ಕಟ್ಟುವುದಕ್ಕೆ ಉಪಕ್ರಮಿಸಿ ದರು. ಸನ್ನಿಹಿತವಾದ ವಿಪತ್ತನ್ನು ತಪ್ಪಿಸುವುದಕ್ಕೆ ಯಾರೂ ಪ್ರಯತ್ನ ಮಾಡಲಿಲ್ಲ, ಈ ಅವಸ್ಥೆಯಲ್ಲಿ ಎಲ್ಲರನ್ನೂ ರಕ್ಷಿಸಿ, ನನ್ನನ್ನು ನಾನೂ ರಕ್ಷಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುವುದು ನನ್ನ ಕರ್ತವ್ಯವೆಂದು ನನಗೆ ತೋರಿತು. ಸಾರಾಯನ್ನು ಕುಡಿದು ಮೈಮೇಲೆ ಪ್ರಜ್ಞೆಯನ್ನು ಕಳೆದುಕೊಂಡಿರತಕ್ಕ ಹಡಗು ನಡೆಸತಕ್ಕವನ