ಈ ಪುಟವನ್ನು ಪರಿಶೀಲಿಸಲಾಗಿಲ್ಲ.

129 ಇರುವನೇ ಹೊರತು, ಪ್ರಭುವಿಗೊಸ್ಕರ ಪ್ರಜೆಗಳು ಇರುವುದಿಲ್ಲವೆಂದು ಈ ಧರ ಶಾಸ್ತ್ರಗಳ ಸಿದ್ಧಾಂತವಾಗಿರುವುದು, ಇವನ ವಿವೇಕದಿಂದಲೂ, ಧರ್ಮಬುದ್ದಿ ಯಿಂದ ಮಹಾಜನಗಳೆಲ್ಲರೂ ನಿರುಪಾಧಿಕವಾದ ನ.... :: ೨ನುಭಎಸ ಬೇಕು, ಇವನ ವಿಜೃಂಭಣೆಗೂ, ಸೌಖ್ಯಕ್ಕೂ ಅವರು ಅಹೋರಾತ್ರಿಗಳಲ್ಲಿಯೂ ದುಡಿದು, ದಾಸಾನುದಾಸರಾಗಿರಬೇಕು” ಎಂದು ಈ ಧರ್ಮಶಾಸ್ತ್ರವು ಹೇಳುವು ದಿಲ್ಲ, ಪ್ರಜೆಗಳ ಸಂಪತ್ತಿಗಿಂತಲೂ ಪ್ರಭುವಿನ ಸಂಪತ್ತು ಹೆಚ್ಚಾಗಿ ಇರಕೂ ಡದು, ಆದರೆ, ಎಲ್ಲಾ ಪ್ರಜೆಗಳ ಕ್ಷೇಮಾರ್ಥವಾಗಿ ಪ್ರಭುವು ಅಹೋರಾತ್ರಿಗ ಇಲ್ಲಿಯೂ ಕೆಲಸ ಮಾಡಬೇಕು, ದುಷ್ಟನಿಗ್ರಹ, ಶಿಷ್ಯ ಪರಿಪಾಲನಕ್ಕೆ ಸಾಧಕ ವಾದ ಹುಕುಂಗಳನ್ನು ಜಾರಿಗೆ ತರಬೇಕು, ಈ ಎರಡು ಕೆಲಸಗಳೂ ಸಮರ್ಪಕ ವಾಗಿ ನಡೆಯಬೇಕಾದರೆ, ಅಧಿಕಾರ ದರ್ಪವನ್ನು ರಕ್ಷಿಸಿಕೊಳ್ಳುವುದಕ್ಕೆ ಬೇಕಾದ ಏರ್ಪಾಡು ಇರಬೇಕು, ಆ ಏರ್ಪಾಡುಗಳೆಲ್ಲಾ ಪ್ರಜೆಗಳ ಕ್ಷೇಮಾರ್ಥವಾದ ಏರ್ಪಾಡುಗಳಾಗಿರಬೇಕು ಅದಕ್ಕೆ ಬೇಕಾದ ಖರ್ಚು ವಿನಾ ಆತ್ಯಾರ್ಧವಾದ ಖರ್ಚು ಪ್ರಜೆಗಳಿಗೆ ಎಷ್ಟು ಬೇಕೋ, ಪ್ರಭುವಿಗೆ ಅದಕ್ಕಿಂತಲೂ ಹೆಚ್ಚಾಗಿ ಇರ ಕೂಡದು. ಪ್ರಭುವಿನ ಮೇಲ್ಪಂಕ್ತಿಯು ಪ್ರಜೆಗಳ ಅನುಷ್ಠಾನಕ್ಕೆ ಬರುವುದು. ಹಿರಿಯರು ನಡದಂತೆ ಕಿರಿಯರು ನಡೆಯುವುದು ವಾಡಿಕೆಯಾಗಿರುವುದು. ಆದು ದರಿಂದ ಪ್ರಜೆಗಳೆಲ್ಲರ ಹೇಗಿದ್ದರೆ ದೇಶವು ಸುಭಿಕ್ಷವಾಗಿರುವುದೊ ಅದನ್ನು ಪರಾಲೋಚಿಸಿ, ಅದಕ್ಕೆ ಅನುಸಾರವಾದ ಮೇಲ್ಪಂಕ್ತಿಯಾಗಿ, ತನ್ನ ನಡೆನುಡಿ ಗಳು ಇರುವಂತೆ ಪ್ರಭುವು ಮಾಡಿಕೊಳ್ಳಬೇಕು. ಸರಿಣಾಮಫಲವನ್ನು ಸರಾ ಲೋಚಿಸದೆ, ಯಾವ ಕೆಲಸವನ್ನೂ ಮಾಡಬಾರದು, ಕೆಟ್ಟ ಮೇಲ್ಪಂಕ್ತಿಯನ್ನು ಹಾಕಿದರೆ, ದೇಶವೇ ನಾಶವಾಗುವುದು, ಪ್ರಜೆಗಳಿಗೋಸ್ಕರವಾದರೂ ಪ್ರಭು ಏನ ನಡೆನುಡಿಗಳು ಸಾಚೀನವಾಗಿರುವಂತೆ ಮಾಡಿಕೊಳ್ಳಲ್ಪಡಬೇಕು, ತನ್ನ ಪ್ರಜೆಗಳ ಭಕ್ತಿಗೆ ಇವನು ಎಷಯನಾಗಿರಬೇಕು. ಎಂಥಾ ಕಷ್ಟಗಳು ಬಂದಾ ಗೂ, ಇವನು ಧರ್ಮವನ್ನು ಬಿಡತಕ್ಕವನಲ್ಲವೆ೦ಬ ಯಶಸ್ಸನ್ನು ಇವನು ಸಂಪಾ ದಿಸಿಕೊಳ್ಳಬೇಕು, ಸಕಲ ವಿಷಯಗಲ್ಲಿಯೂ ಇವನ ನಡೆನುಡಿಗಳು ಪ್ರಜೆಗಳಿಗೆ ಸವಿತಾಚೀನವಾದ ಮೇಲ್ಪಂಕ್ತಿಯಾಗಿರಬೇಕು, ಪ್ರಭುತ್ವವು ಇವನಿಗೆ ಆತ್ಯಾರ್ಥ ವಾಗಿ ಬಂದಿರುವುದಿಲ್ಲ, ಪ್ರಜೆಗಳ ಸೇವೆಯನ್ನು ಮಾಡುವುದರಲ್ಲಿ ಇವನ ಶಕ್ತಿಯು ಅಪ್ರತಿಹತವಾಗಿರಲೆಂದು ಪ್ರಭುತ್ವವು ಇವನಿಗೆ ವಹಿಸಲ್ಪಟ್ಟಿರುವುದು, ಇವನ ಕಾಲವೆಲ್ಲಾ ಪ್ರಜೆಗಳದಾಗಿರಬೇಕು, ಇವನ ಮನೋ ವ್ಯಾಪಾರಗಳಿಗೆ ಪ್ರಜೆ ಗಳ ಕ್ಷೇಮವು ಸದಾ ವಿಷಯವಾಗಿಬೇಕು, ಪ್ರಜೆಗಳ ಕಷ್ಟ ನಿಷ್ಟುರಗಳನ್ನು 17