ಈ ಪುಟವನ್ನು ಪರಿಶೀಲಿಸಲಾಗಿಲ್ಲ.

143 ವರನ್ನು ನಿಯಮಿಸಿ, ಶತ್ರುನಿಗ್ರಹವನ್ನು ಮಾಡಿ, ಯುದ್ಧವು ಪೂರೈಸಿ ಸಮಾಧಾ ನವಾದ ಮೇಲೆ ಜನಗಳಿಗೆ ನೆಮ್ಮದಿಯುಂಟಾಗುವಂತೆ ರಾಜ್ಯಭಾರ ಮಾಡತಕ್ಕೆ ಶಕ್ತಿಯುಳ್ಳವರು ಪ್ರಭುಗಳಾಗಿರುವುದು ಮೇಲು, ಯುದ್ಧದಲ್ಲಿ ಜಯಶೀಲನಾಗಿ, ಕೀರ್ತಿಯನ್ನು ಪಡೆಯಬೇಕೆಂಬ ಆಶಾಪಿಶಾಚವು ಜನಗಳನ್ನು ಹಿಡಿದರೆ, ಯಾವ ಅನರ್ಧ ತಾನೆ ಆಗುವುದಿಲ್ಲ ? { ಆಸೆಗೆ ಎಷ್ಟು ಜನಗಳು ಬಲಿಯಾಗುವುದಿಲ್ಲ ? ಇದರಿಂದ ಎಷ್ಟು ಜನ ಸ್ತ್ರೀಯರು ವಿತಂತುಗಳಾಗುವುದಿಲ್ಲ ? ಇದರಿಂದ ಎಷ್ಟು ಜನಗಳು ಅನಾಧರಾಗುವುದಿಲ್ಲ ? ಈ ದುರಾಸೆಯಿಂದ ಸಂಸದಭಿವೃದ್ಧಿಯ ಕೆಲಸ ಗಳು ಎಷ್ಟು ನಿಲ್ಲುವುದಿಲ್ಲ ? ಭೋಗ್ಯವಸ್ತುಗಳನ್ನು ನಿರ್ಮಾಣ ಮಾಡತಕ್ಕವರೆ ಇರ: ಒಬ್ಬರನ್ನು ಒಬ್ಬರು ಕೊಲ್ಲುವುದಕ್ಕೆ ಸಾಧಕವಾದ ಮದ್ದು, ಗುಂಡು, ಪಿರಂಗಿ, ಬಾಂಬು, ಶಾಸ್ತ್ರಗಳು ಇವುಗಳನ್ನು ನಿರ್ಮಾಣ ಮಾಡುವುದರಲ್ಲಿ ಎಷ್ಟು ಆಸಕ್ತಿಯನ್ನು ತೋರಿಸುವರೋ, ಕವಿ, ಕೈಗಾರಿಕೆ, ವಾಣಿಜ್ಯಗಳು ಹೇಗೆ ಅಷ್ಟು ಹೀನಸ್ಥಿತಿಗೆ ಬರುವುವು ? ದವಸಧಾನ್ಯಗಳ ಉತ್ಪತ್ತಿಯು ಹೇಗೆ ಕಡಮೆ ಯಾಗುವುವು ? ಧಾರಣವಾಸಿಗಳು ಹೇಗೆ ಸತತವಾಗುವುವು ? ಯುದ್ರದಿಂದ ಸಾಯತಕ್ಕವರ ಜೊತೆಗೆ ಅನ್ನೋದಕಗಳಿಗೆ ಅಭಾವ ಉಂಟಾಗಿ, ಎಷ್ಟು ಜನಗಳು ಸಾಯುವರು ? ಪ್ಲೇಗ್, ಕಾಲರ ಲಾದ ರೋಗಗಳಿಗಿಂತಲ ಯುದ್ಧಾ ಪೇ ಕೈಯು ಎಷ್ಟು ಬಲವಾದದ್ದು ? ಹೊನ್ನು, ಹೆಣ್ಣು, ಮಣ್ಣುಗಳ ಆಸೆಯಿಂದ ಎಷ್ಟು ಜನಗಳು ಮಹಾಮಾರಿಗಳಾಗಿ ಪರಿಣಮಿಸುವುದಿಲ್ಲ ? ಈ ಮಹಾಮಾರಿಯ ದೆಸೆ ಯಿಂದ ಎಷ್ಟು ದಿಗೃಲಗಳಾಗಿರುವುದಿಲ್ಲ ? ಈ ಯುದ್ದಗಳಲ್ಲಿ ಸುರಿದ ರಕ್ತವನ್ನು ಕೂಡಿಹಾಕಿದರೆ, ಯೂಫಿಟೀಸ್, ಟೈಗ್ರಿಸ್ ಪ್ರವಾಹಕ್ಕಿಂತಲೂ ಹೆಚ್ಚಾದ ಪ್ರವಾಹವು ಆಗುವುದಿಲ್ಲವೇ ? ಅಟ್ಟಾಂಟಿಕ್ ಸಾಗರಕ್ಕಿಂತಲೂ ಹೆಚ್ಚಾದ ರಕ್ತ ಸಾಗರವಾಗುವುದಿಲ್ಲವೇ ? ಟ್ರಾಯ ದೇತವನ್ನು ಗೆಲ್ಲುವುದಕ್ಕೆ ಆ ದೆಶಿಯರು ಮಾತ್ರವೇ ಅಲ್ಲದೆ, ಗ್ರೀಸ್ ದೇಶದವರೂ ಎಷ್ಟು ಜನಗಳು ಸತ್ತರು ? ಹತ್ತು ವರ್ಷದವರೆಗೂ ಗ್ರೀನ್ ದೇಶವನ್ನು ಆಳತಕ್ಕ ಪ್ರಭುಗ ? ಅರ್ವವಾಗಲಿ ಇವೇ ? ಯುದ್ದದಕಾಲದಲ್ಲಿ ಧರ್ಮಕ್ಕೆ ವನವಾಸವಾಗುವುದಿಲ್ಲವೆ ? ಸಂಸದಭಿ ವೃದ್ಧಿಯು ನಿಂತುಹೋಗುವುದಲ್ಲವೆ ? ಸಕಲ ಕಲೆಗಳೂ ಹೀನಸ್ಥಿತಿಗೆ ಬರುವ ದಿಲ್ಲವೇ ? ಪರಸ್ವತ್ತು ಅವಹರಿಸಲ್ಪಡುವುದಿಲ್ಲವೇ ? ನರಸೀಯರು ಕೆಡಿಸಲ್ಪಡುವು ದಿಲ್ಲವೇ ? ನೀಚರು ಪ್ರಬಲರಾಗುವುದಿಲ್ಲವೇ ? ಸಮಾಧಾನ ಕಾಲದಲ್ಲಿ ಬಲಿಷ್ಠ ರಾದವರಿಗೆ ಇರುವ ಭಯವು ಯುದ್ಧದ ಕಾಲದಲ್ಲಿ ಇರುವುದೇ ? ಕಳ್ಳರೂ, ದರೋಡೆ ಮಾಡತಕ್ಕವರೂ, ಅಧರ್ಮದಿಂದ ಜೀವಿಸತಕ್ಕವರೂ ಇವರೇ ಮೊದ ಲಾದವರು ಯುದ್ಧವು ಉಪಕ್ರಮವಾದ ಮೇಲೆ, ಅಗಾಡಿ, ಪಿಚಾಡಿ, ಲಗಾಮು