ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಒಂದು ಚಿತಿಯನ್ನು ಮಾಡಿ, ಅದಕ್ಕೆ ಬೆಂಕಿಯನ್ನು ಹತ್ತಿಸಿದರು, ನನ್ನನ್ನು ಕತ್ತರಿಸುವುದಕ್ಕೆ ಕತ್ತಿಯು ಸಿದ್ದ ಮಾಡಲ್ಪಟ್ಟಿತು. ನನಗೆ ಅಲಂಕಾರವನ್ನು ಮಾಡಿ, ಪುಷ್ಪಮಾಲಿಕೆಗಳನ್ನು ಹಾಕಿದರು. ನಮ್ಮಲ್ಲಿ ಕೃವೆಯನ್ನು ಇಟ್ಟು ರಕ್ಷಿ ಸಬೇಕೆಂದು ನಾವೆಷ್ಟೇ ಕೇಳಿಕೊಂಡೆವು, ಅವರಿಗೆ ಕರುಣವು ಹುಟ್ಟಲಿಲ್ಲ. ಇಂಧಾ ವಿಪತ್ಕಾಲದಲ್ಲಿಯೂ ಕೂಡ ಮೆಂಟರು ಧೈರ್ಯವುಳ್ಳವನಾಗಿದ್ದನು. ನಮ್ಮನ್ನು ಬಲಿಕೊಡುವುದನ್ನು ನೋಡುವುದಕ್ಕೆ ಅಸ್ಸನೂ ಬಂದನು. ಅವ ನನ್ನು ನೋಡಿ ಮೆಂಟರು “ ಎಲೈ ಅಸೆಸೀಸನೆ,-ಈ ಟೆಲಿಮಾಕಸ್ಸನು ನಿಮ್ಮ ಮೇಲೆ ಯುದ್ಧ ಮಾಡಿ ದವನಲ್ಲ. ಇವನು ಹುಡುಗನು, ಅವನಲ್ಲಿ ನಿನಗೆ ದಯಬರದೆ ಇದ್ದಾಗ್ಯೂ, ನಿನಗೆ ಉಂಟಾಗಿರತಕ್ಕ ವಿಪತ್ತಿನಿಂದ ನಿನ್ನನ್ನು ರಕ್ಷಿಸಿಕೊ, ನಾನು ದೈವಜ್ಞನು. ಮುಂದೆ ಬರತಕ್ಕದ್ದನ್ನು ಹೇಳುವುದರಲ್ಲಿ ನಾನು ದಕ್ಷನು. ಇನ್ನು ಮೂರು ದಿನ ಸದೊಳಗಾಗಿ ಕಿರಾತರ ಸೆನ್ನವೊಂದು ಇಲ್ಲಿಗೆ ಬರುವುದು, ಅವರಿಂದ ನಿನಗೆ ವಿಪತ್ತು ಉಂಟಾಗುವುದು. ಈ ವಿಸತ್ತನ್ನು ನೀನು ತಪ್ಪಿಸಿಕೊಳ್ಳಬೇಕಾದರೆ, ನಿನಗೆ ನಮ್ಮ ಸಹಾಯವು ಬೇಕು, ನಿನ್ನ ಜನಗಳನ್ನು ಸಿದ್ದಪಡಿಸಿಕೊ, ನಾವು ನಿನ್ನನ್ನು ರಕ್ಷಿಸುತ್ತೇವೆ, ನಿನ್ನ ಶತ್ರುಗಳನ್ನು ಜಯಿಸುತ್ತೇವೆ. ನಿನಗೆ ಸನ್ನಿಹಿತ ವಾಗಿರತಕ್ಕ ವಿಪತ್ತನ್ನು ತಪ್ಪಿಸುತ್ತೇವೆ. ಮೂರು ದಿವಸದ ವರೆಗೂ ನೋಡು. ನಾನು ಹೇಳುವುದು ನಿಜವಾದರೆ, ನಮ್ಮಿಂದ ನಿನಗೆ ಶತ್ರುಗಳ ಬಾಧೆಯು ತಪ್ಪಿದರೆ, ನಿನ್ನ ರಕ್ಷಣೆಗೆ ನಾವು ಕಾರಣಭೂತರಾದರೆ, ನಮ್ಮನ್ನು ಯಜ್ಞ ಮಾಡಬೇಡ, ನಾನು ಹೇಳಿರುವುದು ಸುಳ್ಳಾದರೆ, ಆಗ್ಗೆ ನನ್ನನ್ನು ವಧಿಸು, ಈಗ ದುಡುಕ ಬೇಡ ?” ಎಂದು ಹೇಳಿದನು. ಈ ಮಾತನ್ನು ಕೇಳಿದ ಕೂಡಲೆ, ಅಸೆಸ್ಬಿ ಸಸಿಗೆ ಆಶ್ಚರ್ಯವುಂಟಾಯಿತು. ನೀನು ಹೇಳುವುದು ನಿಜವೋ ಸುಳ್ಳೋ ಅದನ್ನು ನರಿಕ್ಷಿಸುತ್ತೇನೆ, ಮೂರು ದಿವಸಗಳ ವರೆಗೂ ನಿಮಗೆ ಅವಧಿಯನ್ನು ಕೊಡುತ್ತೇನೆ, ಇದು ನಿಜವಾದ ಪಕ್ಷ ದಲ್ಲಿ, ನೀವು ನನಗೆ ಸಹಾಯ ಮಾಡಿ, ನಿಮ್ಮ ಸಹಾಯಕ್ಕೆ ಪ್ರತಿಫಲವನ್ನುಂಟು ಮಾಡುತ್ತೇನೆ, ನೀನು ಹೇಳುವುದು ಸುಳ್ಳಾದ ಪಕ್ಷದಲ್ಲಿ, ನಿಮ್ಮಿಬ್ಬರನ್ನೂ ಬಲಿ ಕೊಡುತ್ತೇನೆ ಎಂದು ಹೇಳಿದನು. ಮೆಂಟರನ ಮಾತನ್ನು ಕೇಳಿ, ಅಲ್ಲಿದ್ದವರೆಲ್ಲರಣ ಬಹಳ ಆತ್ಮೀರ್ಯ ಪಟ್ಟರು. (• ಬೀಸುವ ದೊಣ್ಣೆಯ ಏಟು ತಪ್ಪಿದರೆ, ಸಾವಿರ ವರ್ಷ ಆಯಸ್ಸು ಎಂಬ ಗಾಧೆಗನುಸಾರವಾಗಿ ಈ ಮೆಂಟರನು ಇದೊಂದು ಕುಯುಕ್ತಿಯನ್ನು ಮಾಡಿರುವ ಸೆಂದು ಅಂದುಕೊಂಡರು, ಇವನ ಮುಖಭಾವದಿಂದಲೂ, ಇವನ ವಾಗೈಖರಿ