24 ತದೆ. ಈ ದೇಶದ ಜನಗಳ ಸ್ಥಿತಿಯನ್ನು ನೋಡಿ, ನಿನ್ನ ಕರ್ತವ್ಯವನ್ನು ಗೊತ್ತು ಮಾಡಿಕೊಳ್ಳುವುದರಲ್ಲಿ ಆಸಕ್ತನಾಗು. ಇದು ನಿನಗೆ ತುಂಬಾ ಶ್ರೇಯಸ್ಕರವಾ ದದ್ದು' ಎಂದು ಮೆಂಟರನು ಹೇಳಿದನು. - (ಆತ್ಮಗತ) ಇವನು ಹೇಳಿದ್ದು ನಿಜ, ಜನ್ಮಾಂತರ ಸುಕೃತದಿಂದ ವಿವೇಕ ವುಳ್ಳ ಪ್ರಭುಗಳು ಪ್ರಜೆಗಳಿಗೆ ದೊರಯುವರು. ಜನ್ಮಾಂತರ ಸುಕೃತದಿಂದ ಪ್ರಭುಗಳಿಗೂ ಕೂಡ ಸುರುಷರ ಸೇವೆಯು ಲಭಿಸುವುದು, ಪ್ರಾಯಕವಾಗಿ ಪ್ರಭುಗಳು ಅಪ್ರತಿಹತವಾದ ಅಧಿಕಾರವನ್ನೂ, ಅಪರಿಮಿತವಾದ ಐಶ್ವರ್ಯ ನನ್ನೂ, ಅಕ್ಷತಿಮವಾದ ಭಕ್ತಿಯುಳ್ಳ ಬಂಧುಮಿತ್ರರನ್ನೂ, ಅನುಕೂಲರಾದ ಪತ್ನಿ ಪುತ್ರರನ್ನೂ ಅಪೇಕ್ಷಿಸುತ್ತಾರೆ. ಈ ಸಂಪತ್ತುಗಳಲ್ಲಿ ಯಾವುವೂ ಜನ್ಮತಃ ನಮ್ಮ ಜತೆಯಲ್ಲಿ ಬಂದವುಗಳಲ್ಲ, ದೆ 'ಹವನ್ನು ಬಿಟ್ಟು ಹೋಗುವಾಗ್ಗೆ, ಇವುಗ ಇಲ್ಲಿ ಯಾವುದೂ ನಮ್ಮ ಜತೆಯಲ್ಲಿ ಬರುವುದಿಲ್ಲ, ತಿರಸ್ಟಂತುಗಳೂ ಕೂಡ ಪುತ್ರ ಮಿತ್ರ ಕಳತಾದಿಗಳಲ್ಲಿ ಅನುರಕ್ಕಾಗಿರು ವುವು, ಈ ಭಾಗದಲ್ಲಿ ಅವುಗಳಿಗೂ, ನಮಗೂ ಯಾವ ವಿಧವಾದ ವಿಶೆಷ ವೂ ಇರುವು , ಈಶ್ವರನಿಗೂ ಮನುಷ್ಯ ನಿಗೂ ವ್ಯತ್ಯಾಸವೇನು ? ಮನುಷನು ತನಗೆ ಸಂಬಂಧಪಟ್ಟ ವಿಷಯಗಳಲ್ಲಿ ವಿಶೇಷ ಅನುರಕ್ತನಾಗಿರುವನು. ಎತರ ವಿಷಯಗಳಲ್ಲಿ ಅವನಿಗೆ ಅನ್ನು ಅನುರಾಗ ವಿರುವುದಿಲ್ಲ. ಈಶ್ವರನಿಗಾದರೋ ೨, ಸರ್ವ ಸಮದ: ಇರುವುದು, ಅಣು ಸ್ವರೂ ಪವಾದ ಪ್ರಾಣಿಗಳು ಮೊದಲುಗೊಂಡು ಮಹಾಭೂತಗಳ ವರೆಗೂ ಎಲ್ಲಾ ಪ್ರಾಣಿಗಳ ಯೋಗಕ್ಷೇಮಚಿಂತನೆಯಲ್ಲಿ ಅವನು ಒಂದೇ ವಿಧವಾಗಿರುವನು. ಎಲ್ಲಾ ಪ್ರಾಣಿಗಳ ಕರ್ಮಕ್ಕೆ ಅನುಸಾರವಾಗಿ ಅವಳಿಗೆ ಫಲವು ಉಂಟಾಗು ವಂತೆ ಅವನು ಮಾಡಿರುವನು ಕರ್ಮಗಗೆ ಅನುಸಾರವಾದ ಫಲಗಳು ಬರು ವಂತೆಯೂ, ಫಲಗಳಿಗೆ ಅನುಸಾರವಾದ ಕರ್ಮಗಳ ನರ್ವಜಂತುಗಳಿಗೂ ಅಭಿ ಸುವಂತೆಯೂ ಮಾಡಿ, ಅದಕ್ಕೆ ತಾನೆ: ಸಾಕ್ಷಿಯಾಗಿರುವನು. ಸೊಳ್ಳೆಯ, ಆನೆಯ ಎರಡೂ ಅವನಿಗೆ ಒಂದೇ ಒಂದು ಪಕ್ಷಪಾತವೂ, ಮತ್ತೊಂದ ಗಲ್ಲಿ ದ್ವೇಷವೂ ಅವನಿಗೆ ಇರುವುದಿಲ್ಲ. ಇದು ದೇವರ ಅನಂತ ಗುಣಗಳಲ್ಲಿ ಪ್ರಧಾನವಾದ ಒಂದು ಗುಣವಾಗಿರುವುದು, ಮನುಷ್ಯನು ತಾನು ಜನ್ನಿಸಿದಾಗ ತನ್ನೊಡನೆ ಹುಟ್ಟಿ ಪ್ರವೃದ್ಧ ವಾಗತಕ್ಕೆ ಇಂದ್ರಿಯಗಳಿಗೂ, ಅರಿಷಡ್ವರ್ಗಗಳಿಗೂ ಅಧೀನನಾಗದೆ ದೇವರಂತೆ ಸಹಜವಾದ ಸರ್ವ ಸಮದೃಷ್ಟಿಯನ್ನು ಹೊಂದು ವುದು ಅಪೂರ್ವ, ಆದರೆ, ದೇವತ್ವವನ್ನು ಹೊಂದುವುದು ಅಸಾಧ್ಯವಲ್ಲ, ಇದಕ್ಕೆ ಮೆಂಟರೇ ದೃಷ್ಟಾಂತ, ನನಗೂ ಇವನಿಗೆ ಇರತಕ್ಕ ವೈಲಕ್ಷಣ್ಯವನ್ನು ನೋ ಡಿದರೆ, ಸುನುಷ್ಯನಿಗೂ, ದೇವರಿಗೆ 'ಜರರಕ್ಕೆ ವ್ಯತ್ಯಾಸದ ಮಹಿಮೆಯು
ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.