ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಥಮ ದರ್ಶನದ ಪ್ರೇಮ

೧೫

ಕೃತಾರ್ಧನಾದೆನು. ನೀವು ಹೇಳಿದಂತೆ ಅನೇಕ ಲೇಖಗಳನ್ನು ಬರೆಯಬಹುದಾದರೂ ಮನಸ್ಸಿಗೇಕೊ ಉತ್ಸಾಹವಿಲ್ಲದಂತಾಗಿದೆ" ಎಂದು ಧ್ರುವರಾಯನು ಧೀನಮುಖವಾಗಿ ನುಡಿದನು.

"ಹಾಗೆ ಕಾಣುತ್ತದೆ. ನಿಮ್ಮ ಮುಖದ ತೇಜಸ್ಸು ಕಡಿಮೆಯಾಗಿದೆ. ಸೊರಗಿಯ ಇರುವಿರಿ ಏನು ಚಿಂತೆಯಾಗಿದೆ ? ಮನೆಯಲ್ಲಿ ಎಲ್ಲರೂ ಕ್ಷೇಮದಿಂದಿರುವರಷ್ಟೆ ?"

ಧ್ರುವರಾಯನು ವಿಷಾದದಿಂದ ನಕ್ಕು “ದೇವರ ಕೃಪೆಯಿಂದ ಮನೆಯಲ್ಲಿ ಎಲ್ಲರೂ ಕ್ಷೇಮದಿಂದಿರುವರು" ಎಂದು ಹೇಳಿದನು

ಹಾಗಾದರೆ ಚಿಂತೆಗೆ ಮುತ್ತಿನ್ನೇನು ಕಾರಣ?"

"ಚಿಂತೆಗೆ ಸಾವಿರ ಕಾರಣಗಳು. ಸೌಖ್ಯದ ಕಲ್ಪ ನೆಯನ್ನು ಏರಿಸಿ ಕಟ್ಟುತ್ತೆ ನಡೆದರೆ ಅಲ್ಲಿಯೇ ಚೆಂತೆಯು. ಮರದ ತುದಿಯಲ್ಲಿರುವ ಹಣ್ಣನ್ನು ಬಯಸಿದರೆ ಅದು ಹೇಗೆ ತಾನೆ ಸುಲಭವಾಗಿ ಸಾಧ್ಯವಾದೀತು ? ” ಎಂದು ಆ ತರುಣನು ರಮಾಸುಂದರಿಯ ಮುಖಾರವಿಂದವನ್ನು ಔತ್ಸುಕ್ಯದಿಂದ ನೋಡುತ್ತ ನುಡಿದನು.

ಚಿಂತೆಯ ಕಾರಣದ ಭಾಸವು ರಮಾಸುಂದರಿಯ ಮನಸ್ಸಿಗೆ ಆಕಸ್ಮಾತ್ತಾಗಿ ಜಗ್ಗನೆ ಹೊಳೆದಂತಾಯಿತು. ಧ್ರುವರಾಯನಿನ್ನು ಏನು ಹೇಳುವನೋ ಏನು ಬಿಡುವನೋ ಹೇಗೆ ಮಾಡಲೆಂದು ಆವಳು ಕಾತರಳಾದಳು

"ರಮಾಸುಂದರಿ, ಕಾತರಳಾಗದೇಡ. ಆವಿಚಾರದ ಮಾತುಗಳನ್ನೇ ನಾನು ಆಡತಕ್ಕವನಲ್ಲ. ನನ್ನ ಚಿಂತೆಯ ಕಾರಣವನ್ನು ನಿನ್ನ ಮುಂದೆ ಹೇಳಿದರೆ ಪ್ರಯೋಜನವಾಗುವದೋ ಇಲ್ಲವೋ ಎಂಬ ಮಾತಿನ ಪೂರ್ವಾಪರವನ್ನು ಚನ್ನಗಿ ತೂಗಿ ನೀಡಿದ ಬಳಿಕ ನಿನಗೆ ತಿಳಿಸಬಹುದಾದರೆ ತಿಳಿಸುವೆನು," ಎಂದು ಮುಗಿಸಿದವನೇ ಆ ಪಂಡಿತನು ಮೂಢನಂತೆ ಓಡಿ ಹೋದನು.

ದೇವರು ಹೇಳುವ ಪೂಜಾರಿಯ ಸಂದಿಗ್ಧವಾದ ನುಡಿಗಳಂತೆ ಧ್ರುವರಾಯನೇನೂ ಮಾತನಾಡಿ ಹೋದಬಳಿಕ ರಮಾಸುಂದರಿಗೆ ಒಳ್ಳೇ ವಿಚಾರ ಉಂಟಾಯಿತು. "ಅವನ ಮನಸ್ಸಿನೊಳಗಿನ ಭಾವವೇನಿರುವದೋ ಇರಲಿ. ಅವನ ಚಿಂತೆಯ ಚಿಂತೆ ನನಗೇಕೆ ?. ಮನೋಜ್ಞನಾದ ತರುಣನ ನಡೆ