ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಬೆಳ್ಳಿ -ಚಿಕ್ಕೆ ವನ್ನು ಹಚ್ಚಿಕೊಂಡು ಹೇಳಿದ್ದಿರಿ” ಎಂದು ರಾಸಬಿಹಾರಿಯು ಸಕಲಾಕ್ಷನ ಉಪಮುರ್ದನವನ್ನು ಮಾಡಿ ನುಡಿದನು. ಸರಳಾಕ್ಷನು ಒಳಿತಾಗಿ ನಕ್ಕು ಸುಭೇದಾರರೆ, ನಿಮ್ಮ ಕುದುರೆಯ ಗುರುತು ನಿಮಗಿಲ್ಲದಾಯಿತೆ ? ಈ ಬಂಟನಾರು ?” ಎಂದು ಆ ಕರಿಗುದುರಿ ಯನ್ನು ತೋರಿಸಿ ಕೇಳಿದನು, ಇದು ನನ್ನ ಕುದುರೆಯೆ ? ಇದು ಬೆಳ್ಳಿಚಿಕ್ಕೆ ಯೇ ? ಇದರ ಹಣೆಯ ಮೇಲೆ ಒಂದಾದರೂ ಬಿಳಿಕೂದಲಿಲ್ಲ. ನನ್ನ ಕುದುರೆಯ ಹಣೆಯ ಮೇಲೆ ಚಂದ್ರಮನಷ್ಟು ಢಾಳವಾದ ಹಣೆಚಿಕ್ಕೆಯಿದೆ ! ?” ಎಂದು ಸುಭೇದಾರನು ಶಂಕಾಯುತನಾಗಿ ನುಡಿದನು, << ಹೀಗೆ ಆ ಕುದುರೆಯನ್ನು ತೆಗೆದುಕೊಂಡು ಒಟ್ಟಿಗೆ ಬನ್ನಿರಿ” ಎಂದು ಹೇಳಿ ಹುಲಿಖಾನೆಯ ಸುಭೇದಾರನನ ಕುದುರೆಯನ್ನೂ ಕಟ್ಟಿ ಕೊಂಡು ತಂಬುವಿಗೆ ಬಂದನು. ಅಲ್ಲಿ ಆ ಮಹಾಶೋಧಕನು ಟರ್ವೆಂಟ ಎಣ್ಣೆಯಿಂದ ಕುದುರೆಯ ಹಣೆ ಹೊಳಿಸಲಾಗಿ ನಿಜವಾಗಿಯೇ ಚಂದ್ರಮನಂತೆ ಢಾಳವಾದ ಹಣೆಚಿಕ್ಕಿಯು ಸುವ್ಯಕ್ತವಾಗಿ ತೋರಿತು. ಸುಭೇದಾರನು ಸಂತೋಷದ ಭರದಲ್ಲಿ ಕುದುರೆಯು ಕೆರಳಿಗೆ ಬಿದ್ದು ಅದನ್ನು ಅಪ್ಪಿ ಕೊಂಡನು. (ಸರಳಾಕ್ಷರಾವ್, ಇಂದು ನನಗೆ ಸಿಕ್ಕ ತಕ್ಕ ಬಹುಮಾನದ ಹಣವೆಲ್ಲ ನಿಮ್ಮದೆ. ಹಾಗೆ ನಗಬೇಡಿರಿ, ನಾನು ಸುಳ್ಳಾಡಿದವನಲ್ಲ, ಇಕೊ ಈ ಪಂಡಿತ ವಾತಾತ್ಮಜರೇ ನನ್ನ ವಚವಕ್ಕೆ ಸಾಕ್ಷಿಗಳಾಗಿದ್ದಾರೆ. ** 4 ಆಗಲಿ, ನಿಮ್ಮ ಮನಸ್ಸಿಗೆ ತಿಳಿದಂತೆ ಮಾಡಿರಿ. ಇಷ್ಟೇ ಹಣ ಬೇಕೆಂದು ನಾನು ಆಗ್ರಹ ತೊಡುವದಿಲ್ಲ. ಎಂದು ಹುಳಿಮಾತೆಯು, ಹೇಳಿದನು. 1 ಚತುರರಾದ ನನ್ನ ಮಹಾರಾಯರೆ, ನಿಮ್ಮ ಕೃಪೆಯಿಂದ ನನ್ನ ಅಶ್ವರತ್ನವನ್ನು ನಾನು ಮತ್ತೆ ಕಂಡೆನು ಆದರೆ ನಮ್ಮ ರಾಕರಸಿಂಗನ ಕೊಲೆ ಮಾಡಿದವನ ಶೋಧವು ಮಾತ್ರ ಇನ್ನೂ ಆಗಲಿಲ್ಲವಾಗಿ ತೋರುತ್ತದೆ” ಎಂದು ಸುಭೇದಾರನು ಕೇಳಿದನು, 46 ಶೋಧವಾಗಿದೆ, ಆದರೆ ಆ ಶೋಧದಿಂದ ನಿಮಗೆ ಸಾಕಷ್ಟು