ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೩ ಪ ಕ ಕ ನಾ ನರಸಿಂಗ(ದಾರಿಗ) --ಸ್ವಾಮಿಾ ! ನಾನು ಹೋಗಿ ನೋಡಿದೆ ; ಮನೆಯಲ್ಲಿ ಎಲ್ಲರೂ ಸಡಗರದಲ್ಲಿದ್ದರು. ಪುಟ್ಟಮ್ಮಣ್ಣಿಯವರಿಗೆ ತಮ್ಮ ಕಾಗ ದವನ್ನು ಕೊಟ್ಟೆ; ಅವರದನ್ನು ಓದಿಕೊಂಡು, ಬಾಯಿಮಾತಿನಿಂದಲೇ ನಿಮಗೂ, ಮಗಳಿಗೂ ಹೀಗೆ ಹೇಳೆಂದು ಹೇಳಿದರು. ಕರಾಳ-ನಮಗೆ ಹೇಗೆ ಹೇಳಿದರು ? ನರಸಿಂಗ_' ಈಗ ನನಗೆ ಕಾಟವು ಹೆಚ್ಚಾಗುತ್ತಿದೆ ; ಕಾವಲು ಬಲವಾ - ಗಿದೆ ; ಅಧಿಕಾರವೇ ಇಲ್ಲದಂತಾಗಿಹೋಗಿದೆ. ನಿನ್ನ ಬಳಿಯಲ್ಲಿ ಮಾತನಾಡಲಿಕ್ಕೆ ನನಗೆ ಅವಕಾಶವಿಲ್ಲ ; ನಿಲ್ಲದೆ ಹೊರಟುಹೋಗು. ಇನ್ನು ಮುಂದೆ ನನ್ನ ಹಂಬಲೇ ಬೇಡವೆಂದು ಹೇಳಿಬಿಡು.' ಹೀಗೆ ಹೇಳಿದರು. ಕರಾಳ-ನಿಟ್ಟುಸಿರಿಟ್ಟು,- ಇರಲಿ , ಮಗಳಿಗೆ ಹೇಳಿರುವುದೇನು ?' ನರಸಿಂಗ-ಅದನ್ನು ಮತ್ತಾರಮುಂದೆಯೂ ಹೇಳಕೂಡದಂತೆ ! ಕರಾಳ-ಅದೂ ಸರಿಯೆ ; ದಿವಾನ ಯಶವಂತರಿಗೆ ಕಾಗದ ಕೊಟ್ಟೆಯಾ? ಏನೆಂದರು ? ನರಸಿಂಗ -- ಕಾಗದವನ್ನು ತೆಗೆದುನೋಡಿ, ಹಿತ್ತಲಕಡೆಗೆ ನನ್ನನ್ನು ಕರೆದು ಕೊಂಡುಹೋದರು. ಅಲ್ಲಿ ಸ್ವಲ್ಪ ಹೊತ್ತು ನನ್ನೊಡನೆ ಮಾತನಾಡು ತಿದ್ದು, ಹೇಳಬೇಕಾದುದನ್ನು ಬಾಯಿಂದಲೇ ಹೇಳಿ ಹೋದರು. ಕರಾಳ-ಅದೇನು ? ನರಸಿಂಗ_' ಕಾಗದ ಬರೆಯಲಿಕ್ಕೆ ಸಮಯವಿಲ್ಲ. ಈಗ ಮನೆ ಯಜ ಮಾನರಿಗೆ ನನ್ನ ಮೇಲೆ ಅನುಮಾನವುಂಟಾಗಿ, ಪ್ರತಿಕ್ಷಣದಲ್ಲಿ ಯ ತಪ್ಪುಗಳನ್ನು ಕಂಡುಹಿಡಿಯುತ್ತಿರುವರು, ಸರ್ಕಾರದವರ ಗಲಭೆಯೂ ಹೆಚ್ಚಿ ಹೋಗಿದೆ. ನಿರ್ವಹಿಸುವುದೆಂದರೆ ಕಷ್ಟವಾಗಿ ಕಾಣುತ್ತದೆ. ಇದನ್ನು ತಪ್ಪಿಸಿಕೊಳ್ಳಬೇಕಾದರೆ, ನಾವು ಕೆಲವು ದಿನಗಳವರೆಗಾದರೂ ತಡೆದಿದ್ದು ಎಚ್ಚರದಲ್ಲಿರಬೇಕು, ಇಲ್ಲದಿದ್ದರೆ,