ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೧೨೯ ದಿನವೂ ಒಬ್ಬೊಬ್ಬರಂತೆ ಸೇವಕರು ನೂಕಲ್ಪಡುತ್ತಿರುವರು. ಆದ ರೂ, ಅವರೆಲ್ಲರನ್ನೂ ನಾನು ಪ್ರತ್ಯೇಕವಾದುದೊಂದು ಗುಪ್ತಸ್ಥಳ ದಲ್ಲಿರಿಸಿರುವೆನು, ಸುನಂದೆಯು ಬಂದಂದಿನಿಂದ ನಮ್ಮ ಗಂಗೆ ಯನ್ನು ಮರುದಿನಕ್ಕೊಂದುಬಾರಿಯಂತೆ ನೋಡಲಿಕ್ಕಾದರೂ ಅವಕಾಶವಿಲ್ಲ. ಗಂಗೆಯನ್ನು ಯಾವಾಗಲೂ ತನ್ನ ಬಳಿಯೇ ಇರಿ ಸಿಕೊಂಡಿರುವಳು. ಈಚೆಗೆ ನಮ್ಮ ಅಧಿಕಾರದ ಸೊಕ್ಕೇ ಅಡಗಿ ಹೋಗಿರುವುದು, ಸಾಲದುದಕ್ಕೆ ಈಗ ಒಂದೆರಡು ವಾರಗಳಿಂದ ನಿಮ್ಮ ಕಡೆಯ ಸಮಾಚಾರಗಳೇ ಇತ್ತ ಬಾರದಿರುವುದರಿಂದ, ನಮಗೆ ದಿಕ್ಕೇ ತೋರದೆ, ಹುಚ್ಚು ಹಿಡಿದಂತಾಗಿ ಹೋಗಿರುವುದು. ವಾಸುದೇವರಾಯರಿಗೆ ನಾವು ಮಾಡಿಕೊಟ್ಟಿದ್ದ ವಾಗ್ದಾನವನ್ನು ನಡೆಯಿಸಿಕೊಡುವ ಪಕ್ಷದಲ್ಲಿ, ಅವರು ಈ ನಮ್ಮ ಕೆಲಸ ಗಳಿಗೆಲ್ಲಾ ಸಹಾಯಕೊಡುತ್ತೇವೆಂದು ಹೇಳಿ, ತ್ವರೆಪಡಿಸುತ್ತಿರು ವರು, ಯಾವುದಕ್ಕೂ ನಿಮ್ಮ ಅಭಿಪ್ರಾಯ-ಅಲ್ಲಿಯ ಅನುಕೂ ಅತೆಗಳು ತಿಳಿದುಬಂದಲ್ಲದೆ, ನಮ್ಮ ಪ್ರಯತ್ನ ವಾವುದೂ ನಡೆಯು ವಂತಿಲ್ಲ. ವಿಳಂಬಿಸದೆ ಈ ಆಳಿನ ಮೂಲಕವೇ ಉತ್ತರವನ್ನು ಖಂಡಿತವಾಗಿಯೂ ಕಳಿಸಿಕೊಡುವಿರೆಂದು ನಿರೀಕ್ಷಿಸುತ್ತಿದ್ದೇವೆ.' ಹೀಗೆಂದು ಅಣ್ಣನು ಕಾಗದವನ್ನು ಬರೆದು ಕಳಿಸಿರುವನು. ಅಲ್ಲಿಯ ಅವಸ್ಥೆಯು ಹೀಗಾಗಿರುವುದು, ಇಲ್ಲೆಂದರೆ, ಕಪಟನರಸಿಂಗನಿಂದ ಇನ್ನೂ ಅನರ್ಧಗಳು ನಡೆದುಹೋಗಿರುವುವು. ಬಲವಂತ-ಮಗು ! ನನಗೆ ಬುದ್ಧಿಶಕ್ತಿಯೇ ಲೋಪವಾಗಿಹೋಗಿದೆ. ಹನ್ನೆರಡು ವರ್ಷಗಳಿಂದ ಮಾಡಿದ ಪ್ರಯತ್ನಗಳಲ್ಲಿ, ಈ ವರೆಗೂ ನಮಗೆ ಒಂದಾದರೂ ವಿರೋಧವಾಗಿ ನಡೆದಿರುವುದೆಂಬುದನ್ನು ನಾವು ನೋಡಿರುವುದಿಲ್ಲ, ನಮ್ಮ ಉದ್ದೇಶಸಿದ್ದಿಗೆ ಕಾಲವಿದೆಂದು ನಂಬಿ ನಿರೀಕ್ಷಿಸಿದ್ದರೆ, ಈಗ ಹೀಗೆ ಪ್ರತಿಯೊಂದೂ ವಿಸಯ್ಯಾಸ ವಾಗಿಯೇ ತೋರುತ್ತಿದೆ, ಏನುಮಾಡಬಹುದು ?