ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಆ ಕ ನಾ ೧೮೩ ಬೇಡಿಗಳನ್ನು ಹಾಕಿಸಿ, ಕರೆತಂದು ಬಂಡಿಯಬಳಿಯಲ್ಲಿ ನಿಲ್ಲಿಸಿದುದದೆಲ್ಲ, ಮನೆಯ ಪ್ರತಿಯೊಂದು ಬಾಗಿಲುಗಳಿಗೂ ಬೀಗಮುದ್ರೆಗಳಿಂದ ಭದ್ರ ಪಡಿಸಿ ಬಂದು, ಬಂಡಿಯ ಬಳಿಯಲ್ಲಿ ನಿಂತನು. ಚಂದ್ರಮತಿ-ಭಯದಿಂದ ನಡುಗುತ್ತ-' ಅಪ್ಪ ! ಇದೇನಿದು ? ಇವರಿಗೆ ಬೇಡಿ ?' ಕೃತಾಂತ-ಅಮ್ಮಾಯಿಾ ! ಹೀಗೇಕೆ ನಡುಗುವಿರಿ ? ಇವರು ಸ್ವಾಮಿ ದ್ರೋಹಪಾತಕಕ್ಕೆ ಅನುಭವವೇನೆಂಬುದನ್ನು ಇನ್ನು ಮುಂದೆ ನೋಡಬೇಕು, ಅದಕ್ಕಿದೇ ತಳಪಾಯವಾಗಿದೆ. ಚಂದ್ರಮತಿ --ನಾನೂ ಸೆರೆಯಾಗಿರುತ್ತೇನೆಯೇ ? ಕೃತಾಂತ-ಹಾಗೆಂದಿಗೂ ಯೋಚಿಸಬಾರದು, ತಾವು ನಮಗೆ ಪೂಜ್ಯ ರಾಗಿರುವಿರಿ. ಚಂದ್ರಮತಿ-ಅಪ್ಪ ! ಹೇಗಾದರೂ ಮಾಡು ; ಏನನ್ನಾದರೂ ಹೇಳು. ನಾನು ಈವರೆಗೂ ಯಾರಿಗೂ ಸೋತಿರಲಿಲ್ಲ, ಈಗ ನಿನ್ನ ಪ್ರತಿ ಯೊಂದು ನಡೆ-ನುಡಿ-ಕೆಲಸಗಳಿಗೂ ನಡುಗುತ್ತಿರುವೆನು. ನನಗೆ ದಿಕ್ಕೇ ತೋರದಂತಿದೆ. ನಮ್ಮವರ ವಿಚಾರವೇನಾಗಿದೆಯೋ ? ಕೃತಾಂತ-ಅಮ್ಮಾ ಯಾ ! ಸತ್ಯವಾಗಿಯೂ ಹೇಳುವೆನು, ನಿಮ್ಮವರೆ ಲ್ಲರೂ ಸುರಕ್ಷಿತರಾಗಿರುತ್ತಾರೆ. ನೀವೂ ಕೆಲದಿನಗಳವರೆಗೆ ಸುಕನ್ಯಾದೇವಿಯ ಬಳಿಯಲ್ಲಿರಬೇಕಾಗಿದೆ. ಈಗ ವಿಶೇಷ ವಿವರ ಣೆಗೆ ವೇಳೆಯಿಲ್ಲ, ಮುಂದೆ ತಿಳಿಯಲಾದೀತು, ಧೈದ್ಯವಾಗಿರಿ.. - ಚಂದ್ರಮತಿಯು ಸುಮ್ಮನಾದಳು, ಕೃತಾಂತನು ಮೊದಲಿನಂ ತೆಯೇ ಎರಡು ಚಕ್ರದ ಬಂಡಿ (ದ್ವಿಚಕ್ರ-Cycle) ಯನ್ನೇರಿ ಮನೆಯ ಕಾವಲಿಗಾಗಿ ಇಬ್ಬರು ಪೊಲೀಸರನ್ನು ನಿಲ್ಲಿಸಿ, ಉಳಿದವರೊಡನೆ ಹೊರ ಹೊರಟನು. (ಕೃತಾಂತನು ಮನೆಗೆ ಮಾಡಿದ ದಿಗೈಂಧನದಿಂದ ಮನೆಯ ಇದ್ದವರ ವಾಗ್ವಾದಕ್ಕೂ ಪ್ರಬಲ ಬಂಧನವೇ ಆದಂತೆ ತೋರುವುದಲ್ಲವೆ ! ಇರಲಿ.)