ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ೧೮೭ ದ ಕ ಕ ನ್ಯಾ ವಾಸುದೇವ' ಈ ಹಣ್ಣುಗಳನ್ನು ತಿಂದು, ಹಾಲನ್ನು ಕುಡಿಯಿರಿ. ದೇಹಾಯಾಸವು ಕಡಿಮೆಯಾಗಿ, ಪಯಣಕ್ಕೆ ಅನುಕೂಲವಾಗು ವುದು.' ಎಂದು ಹೇಳುತ್ತ ಹಣ್ಣನ್ನು ಸುಲಿದು, ಜಮೀನ್ದಾರನ ಕೈಯಲ್ಲಿರಿಸುತ್ತಿದ್ದನು. ಜಮೀನ್ದಾರನು ಮೆಲ್ಲಗೆ ತೆಗೆದು ಬಾಯೊ ಳಗಿಟ್ಟು, ಕಷ್ಟದಿಂದ ಹಣ್ಣುಗಳನ್ನು ನುಂಗಿದನು, ಯಶವಂತನು ಕೈಯೊಳಗಿದ್ದ ಹಾಲಿನ ಪಾತ್ರೆಯನ್ನು ಮುಂದಿರಿಸಿ,-' ಇದೇ ಹಾಲು ; ಬಹು ಪ್ರಯಾಸಪಟ್ಟು ಪರಿಮಳವನ್ನು ಸೇರಿಸಿ, ಹದ ವಾಗಿ ಕಾಯಿಸಿದೆ. ಕುಡಿಯಬಹುದು.' ಎಂದು ಹೇಳಿ ಬಾಯಿಗೆ ಹತ್ತಿರದಲ್ಲಿರಿಸಿದನು. ಜಮಾನಾರನು ಮಲಗಿದಂತೆಯೇ ಮೆಲ್ಲನೆ ತಲೆಯೆತ್ತಿ ಅರೆಬಾಗಿ ಹಾಲನ್ನು ಕುಡಿಯಹೋದನು. ಒಂದೆ ರಡು ಸೊಲಿಗೆಗಳಷ್ಟು ಹಾಲು, ಹೊಟ್ಟೆಗೆ ಹೋಗುವುದರೊಳಗಾ ಗಿಯೇ ಕಾಲುಗಳನ್ನೂ ದರು ಆರ್ತಸ್ವರದಿಂದ ಕೂಗಿ ಮೈಮರೆತು ಮಲಗಿದನು, ಹಾಲಿನ ಪಾತ್ರೆಯು ಕೆಳಗುರುಳಿಹೋಯಿತು. ಹಾಲು ನಷ್ಟವಾಯಿತೆಂದು ನಿಂತಿದ್ದವರು ಖತಿಗೊಂಡು ತಾರಾ ಪತಿರಾಯನನ್ನು ಹಿಡಿದು ಸರಿಯಾಗಿ ಮಲಗಿಸಿ ಕೇಳಿದರು, ಇ ದೇಕೆ ಹೀಗಾಯಿತು ? ಹಾಲನ್ನೇಕೆ ಸುರಿದುಬಿಟ್ಟಿಲ್ಲ ?? ತಾರಾಪತಿ -ಕಾಲವ್ರಣದಲ್ಲಿ ಅಧಿಕವಾದ ಯಾತನೆಯುಂಟಾಗಿ ಹೀಗೆ ಮಾಡಿತು, ಹಾಲು ಹೋದುದು ಹೋಗಲಿ. ನನಗೆ ಇಷ್ಟೇ ಸಾಕಾಗಿದೆ. - ಅಷ್ಟರಲ್ಲಿಯೇ ಅಲ್ಲಿಗೆ ಸುಪಂಧ-ಬಲವಂತರೂ ಬಂದು ಸೇರಿ ದರು, ತಾರಾಪತಿರಾಯನು ಕುತೂಹಲದಿಂದ ಚೆನ್ನಾಗಿ ನೋಡಿದನು. ಬಲವಂತನು ಎಡಗೈಯಲ್ಲಿ ಒಂದು ಅಖಂಡಪತ್ರವನ್ನೂ, ಬಲಗೈಯಲ್ಲಿ ಕತ್ತಿಯನ್ನೂ ಹಿಡಿದು ಮಂಚದ ಬಳಿಯಲ್ಲಿ ನಿಂತಿದ್ದುದನ್ನೂ, ಸುಪಂ ಧನು ಲೇಬಿನಿಯನ್ನು ಹಿಡಿದು ತನ್ನನ್ನೇ ನೋಡುತ್ತಿದ್ದುದನ್ನೂ ಕಂಡು, ಚಕಿತನಾಗಿ- ನೀವಾರು ? ಏಕೆ ಬಂದಿರಿ ?” ಎಂದು ಕೇಳಿದನು.