ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ || ತೃತೀಯ ಪರಿಚ್ಛೇದ. > '2002 0•KK o೦ 0002 XX000 Xbooo೧೦ XOM0000 ತೆ < (ಯಮುನೆಯ ಹೇಳಿಕೆ ) ಸ-ಚನಾಕರ್ತರ ಅಭಿಪ್ರಾಯದಂತೆ ಈ ಬಾರಿ ಯಮುನೆ - ಯು ಕರೆಯಿಸಲ್ಪಟ್ಟಳು. * ರಾಧಾನಾಧ - ಅಮ್ಮ ' ನಿಮ್ಮ ತಿಳಿವಿಗೆ ಒಳಪಟ್ಟಂತೆ ಈ ರಾಧಾನಾಧ | ** - ವ್ಯಾಜ್ಯಮೂಲವೆಷ್ಟೋ ಅಷ್ಟನ್ನೂ ನಿಜವಾಗಿಹೇಳಿಕೆ. ಯಮುನಾ-ವಿನೀತೆಯಾಗಿ-- ನನ್ನಲ್ಲಿ ಅನೃತಕ್ಕೆ ಅವಕಾಶವಿಲ್ಲ. ನಾನು ಕಂಡು ಕೇಳಿದುದನ್ನು ಮರೆಮಾಚದೆ ಹೇಳುವೆನಲ್ಲದೆ, ನಿಷ್ಟುರ ಕ್ರಾಗಲೀ-ಜನವಾರ್ತೆಗಾಗಲೀ ಹಿಂದೆಗೆದು ಅಸಲಪಿಸುವುದು ನನ್ನ ಶೀಲವಾಗಿಲ್ಲ. ಅದಿರಲಿ , ಸುನಂದಾದೇವಿಯನ್ನು ಪ್ರಸುವಕ್ಕಾಗಿ ಅವರ ತಂದೆಯೇ ಬಂದು ಕರೆದೊಯ್ದ ಬಳಿಕ, ನಾಲ್ಕಾರು ತಿಂಗಳ ಲ್ಲಿಯೇ ಜಮಾನ್ದಾರರಿಗೆ ಪುತ್ರೋತ್ಸವವಾದ ಸಂತೋಷವಾರ್ತೆ ಯು ಮುಟ್ಟಿ, ವಿಷಹರಪುರದಲ್ಲೆಲ್ಲಾ ಆನಂದವೇ ಆನಂದವೆಂಬಂತೆ ಜಮಾನ್ದಾರರು ದೊಡ್ಡ ಸಂತರ್ಪಣೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿಯೇ ನಮ್ಮ ಜಮಾನ್ದಾರರ ದ್ವಿತೀಯಪತ್ನಿ-ಗಂಗಾ ಬಾಯಿಯು, ತಮ್ಮ ಅಜ್ಜಿಯೊಡನೆ ಮನೆಗೆ ಬಂದಿದ್ದಳು. ಆಗ ಈಕೆಗೆ ಇನ್ನೂ ವಿವಾಹವಾಗಿರಲಿಲ್ಲ, ಆಗಲೇ ಇವರ ವಿದ್ಯಾ ಪ್ರೌಢಿಮೆ, ಕುಶಲಕಲಾಪ್ರಶಂಸೆಗಳಾದುವು. ಇದಾದ ತಿಂಗಳೊಳ ಗಾಗಿಯೇ ದುರ್ಗಾಪುರದಿಂದ ಸುನಂದಾ ಬಾಯಿಯು ಆಕಸ್ಮಿಕ ವಾಗಿ ಬಂದೊದಗಿದ ಸನ್ನಿ ಪಾತದಿಂದ ಕಾಲವಶರಾದರೆಂಬ ತಂತಿ ಯು, ಜಮೀನ್ದಾರರ ಕೈಸೇರಿತು. ಆಗ ಜಾನ್ದಾರರಿಗೂ