ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರುವುದಕ್ಕಾಗಿ, ಇದೇ ವಾತ್ಸಲ್ಯವೇ ಅವಿಚ್ಛಿನ್ನವಾಗಿ ಬೆಳೆದು ಬರುವಂತೆ ಆ ನಮ್ಮ ಸನ್ಮಾನಿತ ಭಗಿನಿಯರೆಲ್ಲರಲ್ಲಿಯೂ ಮಾತೃಕಟಾಕ್ಷವು ಪೂರ್ಣ ವಾಗಿದ್ದು, ದೇಶಮಾತೆಯ ಅಭ್ಯುದಯ ಕಾರವು ಸಿದ್ಧಿ ಹೊಂದುವಂತೆ ಅನುಗ್ರಹಿಸುತ್ತಿರಲೆಂದೂ ಪ್ರಾರ್ಧಿಸುವೆವು. ಮತ್ತೇನು ? ಸಂತೋಷಭರದಿಂದಲೂ, ಸೌದಯ್ಯಭಾವದ ಸಲಿಗೆ ಯಿಂದಲೂ, ಇಷ್ಟು ದೂರ ಹೇಳಿದ ನಮ್ಮ ಭಾಷಣದಲ್ಲಿ, ಆತ್ಮ ಪ್ರಶಂಸೆ ಯಾಗಲೀ, ಅತ್ಯುಕ್ತಿಯಾಗಲೀ ಮಲ್ಯಾ ದಾತಿಕ್ರಮಣ ದೋಷಗಳಾಗಲೀ ಕಂಡುಬರಬಹುದಾಗಿದ್ದರೆ, ಅದನ್ನು ಬಾಲ್ಯ ಬುದ್ದಿಯಿಂದ ಮಾಡಲ್ಪಟ್ಟು ದೆಂದು ಮನ್ನಿಸಿ, ಈ ವರೆಗೂ ಪ್ರೋತ್ಸಾಹಿಸುತ್ತಿದ್ದಂತೆಯೇ ಮುಂದೆಯಾ ದರೂ ಪ್ರೋತ್ಸಾಹಿಸುತ್ತಿರಬೇಕೆಂದೂ, ಪಂಡಿತರನ್ನೂ, ಪತ್ರಕರ್ತರನ್ನೂ ದೇಶಬಾಂಧವರನ್ನೂ, ದೇಶೋದ್ಧಾರಕರನ್ನೂ ಮತ್ತೆ ಮತ್ತೆ ಪ್ರಾರ್ಥಿ ಸುತ್ತ ಕ್ಷಮಾಪಣವನ್ನು ಕುರಿತ ಇಂದಿನ ಲೇಖನವನ್ನು ಇಲ್ಲಿಗೆ ವಿರಮಿಸಿ ರುವೆವು. ಇತಿ; 15.10.1915, ನಂಜನಗೂಡು. ಹಿತೈಷಿಣೀ. \+ಳದ