ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨44 ದ ಕ ಕ ನ್ಯಾ ವಾಸುದೇವ-ಮತ್ತೆ ನಿಟ್ಟುಸಿರಿಟ್ಟು ತಲೆಯೆತ್ತಿ-' ಗಂಗೆಯನ್ನು ನಾನು ಹಿಂದೆ ಯಾವಾಗಲೂ ನೋಡಿರಲಿಲ್ಲ ; ನೋಡಬೇಕಾದ ಪ್ರಕೃ ತವೂ ಇರಲಿಲ್ಲ, ಯಶವಂತನನ್ನು ನೋಡಿದ್ದೆನಾದರೂ ಈಗಾಗಿ ರುವಷ್ಟರ ಬಳಿಕೆಯುಂಟಾಗಿರಲಿಲ್ಲ, ಆದರೆ, ಜಮಾನ್ದಾರರ ಮನೆಯಲ್ಲಿ ಮೊದಲನೆಯ ಕಳುವಾದ ದಿನವೇ ನಾನು, ಬೀದಿ ಯಲ್ಲಿ ಬರುತ್ತಿದ್ದ ವೇಳೆಯಲ್ಲಿ ಗಂಗಾಬಾಯಿಯು ಮುಡಿದಿದ್ದ ಹೂವ, ಮೇಲಿಂದ ಬಿದ್ದುದನ್ನು ನೋಡಿದುದೇ, ನನ್ನ ಇಷ್ಟರ ಸ್ವರೂಪನಾಶಕ್ಕೂ ಹೇತುರೂಪವಾಗಿ ಪರಿಣಮಿಸಿತು. ಆ ಪ್ರಪ್ಪ ಪರಿಗ್ರಹಣವೇ ನನ್ನ ಬುದ್ಧಿಭ್ರಮಣಕ್ಕೂ, ಇತರ ದುರಾ ಚಾರಕ್ಕೂ ಕಾರ್ ಕಾರಿಯಾಗಿ ತಿರುಗಿಸಿತು. ಆ ವರೆಗೂ ನನ್ನ ಲ್ಲಿದ್ದ ಭಕ್ತಿ, ಶ್ರದ್ಧೆ, ಉತ್ಸಾಹಗಳೇ ಮೊದಲಾದ ಗುಣ-ಸ್ವಭಾವ ಗಳು ಅದುಮೊದಲು ವಿಕಲ್ಪವನ್ನು ಹೊಂದಿದುವು, ಗಂಗಾಬಾ ಯಿನ್ನು ಹೊಂದಬೇಕೆಂಬ ಚಿಂತೆಯೊಂದೇ ನನ್ನ ಚಿತ್ರವನ್ನು ಆಕ್ರ ಮಿಸಿ, ಪರದಾರಾಪಹರಣದ ಘೋರಪಾತಕವನ್ನೂ ಗಣಿಸದೆ, ಅದಕ್ಕಾಗಿ ಎಷ್ಟರ ಅತ್ಯಾಚಾರವನ್ನಾದರೂ ಮಾಡಲು ಸಿದ್ಧವಾ ಯಿತು. ಸಾಲದುದಕ್ಕೆ ಯಶವಂತನೂ ಸೇರಿ, ನನ್ನ ಈ ಆಶೆ ಯನ್ನು ಪೂರ್ಣಮಾಡುವೆನೆಂದೂ, ಇದು ತನಗೆ ಕಷ್ಟವಾಗಿರುವು ದಿಲ್ಲವೆಂದೂ, ಇದಕ್ಕಾಗಿ ನಮ್ಮ ಉದ್ದೇಶಸಾಫಲ್ಯಕ್ಕೆ ಬೇಕಾಗುವ ಸಹಾಯ ಸಂಪತ್ತಿಯನ್ನೊದಗಿಸಿಕೊಡುವುದೇ, ನಾನು ಇವರಿಗೆ ಮಾಡಬೇಕಾದ ಪ್ರತ್ಯುಪಕಾರವಾಗಿರಬೇಕೆಂದೂ ನನ್ನಲ್ಲಿ ಪ್ರಮಾ ಣಪೂರ್ವಕವಾದ ವಾಗ್ದಾನಮಾಡಿ, ನನ್ನಿಂದಲೂ ವಾಗ್ದಾನ ಹೊಂದಿದನು, ಮತ್ತು ಇವನು ತನ್ನ ಬಹು ದೀರ್ಘಕಾಲದ ಪ್ರಯತ್ನ ವನ್ನೂ, ತನ್ನ ತಂದೆ-ತಮ್ಮಂದಿರು ಗೊಲ್ಲರಪಾಳ್ಯದಲ್ಲಿ ಯ, ತಾನು ಜಮೀನ್ದಾರರ ಮನೆಯಲ್ಲಿಯೂ ನೆಲಸಿರುವುದರ