ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ 394 ದಿಂದ ವಿವೇಕಹೇಳಿದರು. ಆದರೆ, ಅದೆಲ್ಲವೂ ನಿಷ್ಪಲವಾಗಿಯೇ ಹೋ ಯಿತು. ಹೀಗೆ ನನ್ನ ದುರ್ನಡತೆಯಿಂದುಂಟಾದ ಮನೋರೋಗದಲ್ಲಿಯೆ ನಮ್ಮ ತಂದೆಯ ಮೃತನಾದನು. ಪಿತೃವಿಯೋಗವು ನನಗೆ ಸಂತೋ ಷಕರವೇ ಆಗಿದ್ದಿತಲ್ಲದೆ ವಿಷಾದವನ್ನುಂಟುಮಾಡಲಿಲ್ಲ. ಆದರೆ, ಹೀಗೆಯೇ ಬಿಟ್ಟರೆ ಕೆಟ್ಟು ಹೋಗುವನೆಂದು ನಮ್ಮ ತಾಯಿಯು, ತನ್ನ ಬಂಧುವರ್ಗಕ್ಕೆ ಸೇರಿದ-ಸಲ್ಲಕ್ಷಣಸಂಪನ್ನೆ ಯಾದ ಕನ್ನೆಯನ್ನೇ ಕರೆತಂದು, ನನಗೆ ವಿವಾಹ ಮಾಡಿದಳು. ಆ ನನ್ನ ಪತ್ನಿ ಯಾದರೂ ಸಾಮಾನ್ಯ ಸ್ತ್ರೀಯಲ್ಲ, ಸಾನ್ನೀ ಮಣಿಯೆಂದರೆ ಅವಳನ್ನೇ ಮೊದಲು ಹೇಳಬೇಕು, ಅಂತಹ ಸತೀಮಣಿ ಯಲ್ಲಿ ಕೂಡ, ನಾನು ಕ್ರೂರವಾಗಿ ನಡೆದುಕೊಳ್ಳುತ್ತಿದ್ದೆನಲ್ಲದೆ, ನನ್ನ ದುರಾಚಾರಕ್ಕೆ ಸಹಕರಿಸಬೇಕೆಂದು ಬಗೆಬಗೆಯಾಗಿ ಹೊಡೆದು, ಬಯ್ಯು ಕೊರಗಿಸುತ್ತಿದ್ದೆನು, ಸೊಸೆಯು ಪಡುವ ಕಷ್ಟ ಕ್ರೂ, ನನ್ನ ದುರ್ನಡ ತೆಗೂ ಪರಿತಪಿಸುತ್ತ ನಮ್ಮ ತಾಯಿಯ ಅತ್ಯಲ್ಪ ಕಾಲದಲ್ಲಿಯೇ ಸತ್ತಳು. ತಾಯಿ ಸತ್ತ ಬಳಿಕಂತೂ ನನಗೆ ಇದ್ದ ಒಂದು ಕಂಟಕವೂ ಕಳೆ ದಂತಾಯಿತು, ಆ ಮುಂದೆ ನನ್ನ ದುಂದುವೆಚ್ಚಕ್ಕೂ, ಆಡಂಬರಗಳಿಗೂ ಎಲ್ಲೆಯೇ ಇಲ್ಲದಂತಾಯಿತು, ನನ್ನ ಸಂಗಡಿಗರೆಲ್ಲರನ್ನೂ ಮನೆಗೇ ಕರೆ ತರಲು ಮೊದಲು ಮಾಡಿದೆನು, ಅವರ ಸಂತೋಷ ಮತ್ತು ಮುಖೋಲ್ಲಾ ಸಗಳಿಗಾಗಿ ಮಾಡಬೇಕಾದ ಆಹಾರಪಾನೀಯಗಳೆಲ್ಲಕ್ಕೂ ನನ್ನ ಪತ್ನಿಯನ್ನೇ ನಿಲ್ಲಿಸಿದೆನು. ಕ್ಷಮಾವಲಂಬಿನಿಯಾದ ನನ್ನ ಪತ್ನಿ ಯು, ನನ್ನ ಕೋಟಲೆ ಗಳನ್ನು ಸಂತೋಷದಿಂದಲೇ ಸಹಿಸಿ, ನನ್ನ ಮನೋನುಕೂಲೆಯಾಗಿ ಸೇ' ಸುತ್ತ ಬಂದಳು. ಇದರಿಂದ ಅವಳಲ್ಲಿ ನನಗೆ ಪ್ರೇಮವೂ ಹುಟ್ಟಿ ಅವಳನ್ನು ತಕ್ಕ ಮಟ್ಟಿಗೂ ಸುಖಪಡಿಸಬೇಕೆಂದು ನಿಶ್ಚಯಿಸಿದೆನು. ನಿಂದ ನನ್ನ ತೃಷ್ಣಯು ಮನೆಯಲ್ಲಿ ಮಾತ್ರವೇ ನಿಂತಿತು. ಆದ ದುಂದುಗಾರಿಕೆಯು ಮಾತ್ರ ಹೋಗಲಿಲ್ಲ, ಅದಕ್ಕೆ ಅದ್ರ್ರ ಯವಾಗಬೇಕಲ್ಲವೆ ! ಅದಿರಲಿ.