ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ್ಷ-ಕ ನ್ಯಾ ೨೫೧ ವನ್ನೂ ಸಾವಧಾನದಿಂದ ಸಮಾಲೋಚಿಸಿ, ಸಾರವನ್ನು ಸಂಗ್ರಹಿಸುವುದೇ ನಿಮ್ಮ ಕರ್ತವ್ಯವು, ಅಷ್ಟಲ್ಲದೆ ಮತ್ತಿನ್ನೇನು ? ಪ್ರಸ್ತಾವನವು ಇಷ್ಟು ಸಾಕು. ನ್ಯಾಯತೀರ್ಮಾನದಲ್ಲಿ, ಬಲವಂತ-ಸುಸಂಧರಿಗೆ, ಅವರ ಕುಶ್ಚಿತ ವ್ಯಾಪಾರದ ಫಲಕ್ಕಾಗಿ ಯಾವಜೀವವೂ ಕಾರಾಗೃಹವಾಸದ ಕಠಿಣ ಶಿಕ್ಷೆಯ, ಯಶವಂತ-ವಾಸುದೇವರಿಗೆ ಸ್ವಾಮಿದ್ರೋಹ ಮತ್ತು ದೇಶ ಕೈಭೆಗಳ ಫಲರೂಪವಾಗಿ ಮರಣಾವಧಿ ದ್ವೀಪಾಂತವಾಸದ ಶಿಕ್ಷೆಯೂ, -ಕೊಲೆಗೇಡಿಯಾದ ಗೋಪಾಲನಿಗೆ ಮರಾದೋಲ್ಲಂಘನದ ಮತ್ತು ದೈವ ದ್ರೋಹದ ಮಹತ್ಸಲರೂಪವಾದ ಮರಣಶಿಕ್ಷೆಯೂ, ವಿಧಿಸಲ್ಪಟ್ಟುವು. ಅವರಿಗೆ ಅನುಯಾಯಿಗಳಾಗಿದ್ದ ಗೊಲ್ಲರಪಾಳ್ಯದವರೆಲ್ಲ ಮಾಸಾವಧಿ ಮಾತ್ರವೇ ಕಾರಾಗೃಹದಲ್ಲಿದ್ದು, ಆ ಬಳಿಕ ಧರ್ಮಪಾಲರ ಅಧೀನರಾಗಿರ ತಕ್ಕುದೆಂಬ ವಿಧಾಯಕವಾಯಿತು, ಉಳಿದ ಚೌಕದ ಕಳ್ಳರಿಗೂ ವರ್ಷಗ ಟೆಯ ಕಾರಾಗೃಹವಾಸ ಶಿಕ್ಷೆಯಾಯಿತು, ಹೇಗೂ ಬಹು ದೀರ್ಘಕಾಲದ ದುಷ್ಕರ್ಮಕ್ಕೆ ಇಷ್ಟು ಕಾಲಾನಂತರದಲ್ಲಿಯಾದರೂ ಇಷ್ಟರ ಫಲವು ದೊರೆ 'ಯದೆ ಬಿಡಲಿಲ್ಲ, ಇನ್ನು ಗಂಗೆಯತಪ್ಪಿತಕ್ಕೆ ಅನುತಾಪವೇ ಶಿಕ್ಷೆಯಾಯಿತು. ಹಾಗೂ ಆ ಅನುತಾಪವೇ ದಕ್ಷತೆಯನ್ನುಂಟುಮಾಡಿ, ಜಮೀನ್ದಾರರ ಪ್ರಾಣಸಂರಕ್ಷಣೆಗೂ, ಬಹು ದೀರ್ಘಕಾಲದ ದುರಭಿಸಂಧಿಯ ಉದ್ಘಾಟಿ ನೆಗೂ ಕಾರಣವಾಯ್ದೆಂಬ ಕೀರ್ತಿಯೂ, ಪ್ರಾಪ್ತವಾಯಿತು, ಸುನಂದೆಯ ಸಹನ ಶೀಲತೆಯೂ, ಯಮುನೆಯ ವಸ್ತು ವಿಚಾರಪರತೆಯ ಶ್ಲಾಘಿಸಲ್ಪ ಟ್ಟುವು, ವಿಷಕಂರಾದಿ ಪ್ರಹರಿಗಳು ಸ್ವಾಮಿಭಕ್ತರೆಂದು ಬಹುಮಾನಿಸಲ್ಪ ಟೈರು, ದಳವಾಯಿಸಿಂಗನ ಕಾರನಿರ್ವಾಹಶಕ್ತಿಗಾಗಿ ವೇತನವೂ ಹೆಚ್ಚಿತು. ಮತ್ತೇನಾಗಬೇಕು ? ವಿಂದೆಯೆಂದರೆ-ಸಾಕ್ಷಾದ್ದಾಕ್ಷಾಯಿನಿಯ ಅಪರಾವತಾರವೆಂದೂ, ಅವಳ ಅದ್ಭುತಮಹಿಮಾಪ್ರದರ್ಶನವೇ, ಮುಂದಿನ ನಮ್ಮ ಸೋದರೀವರಕ್ಕೆ ಪರಮಾದರ್ಶಜೀವನಪ್ರದವಾಗಿರಬೇಕೆಂದೂ, ಇದಕ್ಕಾಗಿ ಇವಳಿಗೆ ದಕ್ಕೆ