ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ತಿ ಹಿ ತೃ ಷಿ ಣಿ ಬೃನು, ಇದೇ ದಾರಿಯಲ್ಲಿಯೇ ಅಧೋವದನನಾಗಿ ನಡೆತರುತ್ತಿದ್ದನು. ಆದರೆ, ಮನೆಯಮುಂಗಡೆಗೆ ಬರುವುದರೊಳಗಾಗಿ, ಉಪ್ಪರಿಗೆಯ ಮೇಲಿಂದ ಕೆಳಗೆ ಹಾರಿಬಿದ್ದ ಸುವಾಸನಾಯುಕ್ತವಾದ ಗುಲಾಬಿಯ ಹೂವೊಂದು, ಈತನ ಕಣ್ಮನಂಗಳನ್ನು ವಿಸ್ಮಯ ಮತ್ತು ಕೌತುಕಗಳಿಗೆಡೆಮಾಡಿದುದಲ್ಲದೆ, ಉಪ್ಪರಿಗೆಯ ಕಡೆಗೆಳೆದಿತು. ಯುವಕನು ತಲೆಯೆತ್ತಿ ನೋಡಿದನು , ಬೆರಗಾದನು. ಏಕೆ ? ಮೇಲು ಸ್ಪರಿಗೆಯಲ್ಲಿ ಗಾಳಿಗೆ ಮೈಯೊಡ್ಡಿ ನಿಂತಿದ್ದ ರಮಣೀಮರಿಯನ್ನು ಕಂಡೂ ಬೆರಗಾಗದ ತರುಣರುಂಟೋ ? ಅಷ್ಟೇಅಲ್ಲ ! ಮೇಲಕ್ಕೆತ್ತಿದ ಯು ವಕನ ದೃಷ್ಟಿಯಾದರೂ ಕೆಳಕ್ಕಿಳಿಯಲೊಲ್ಲೆನೆಂದು ರಮಣಿಯ ರೂಪರಾಶಿ ಋಲ್ಲಿಯೇ ಸೇರಿಹೋಯಿತು ! ರಮಣಿಯಾದರೂ ಸುಮ್ಮನಿದ್ದಳೆಂದೋ ? ಅವಳ ವಿಜಾತೀಯವೀಕ್ಷಣವು ಯುವಕನನ್ನು ತಕ್ಕ ಷ್ಟೂ ಪ್ರಹರಿ ಸದೆ ಬಿಡಲಿಲ್ಲವೆಂಬುದೇ ನಮ್ಮ ಭಾವನೆ ! ಹೇಗೂ ಹೆಚ್ಚು ಹೊತ್ತು ಹಾಗೆ ನಿಂತಿರಲಿಲ್ಲ. ಯುವಕನನ್ನು ಮಹಾಶಯನೆಂದು ತಿಳಿದೋ, ಮತ್ತೇತರಿಂ ದೆಯೋ, ರಮಣಿಯು ಸರನೆ ತಿರುಗಿ ಹೊರಟುಹೋದಳು. ರಮಣಿಯ ಪರಾಬ್ಬು ಖತೆಯಿಂದ, ತರುಣನ ಮುಖವು ವಿವರ್ಣ ವಾಯಿತು. ಆಗಲೂ ರಮಣಿಯಲ್ಲಿ ಸೇರಿಹೋಗಿದ್ದ ಈತನ ಮನಸ್ಸು ಮಾತ್ರ ಮತ್ತೆ ತಿರುಗಲಿಲ್ಲ, ದೃಷ್ಟಿಯೇನುಮಾಡಬಲ್ಲುದು ? ಪಾಪ ! ಮಕ ರಂದಕ್ಕಾಗಿ ಹೋದರೆ, ಆ ಸುಗಂಧಪುಷ್ಪವೇ ಕಣ್ಮರೆಯಾಯ್ತಂಬ ಶೋಕ ದಿಂದ, ಕ೦ದಿ ಕುಂದಿ ಹಿಂದಿರುಗಿತು ! ಯುವಕನು ಮತ್ತೇನನ್ನು ಮಾಡ ಬೇಕು ? ಮತ್ತೊಮ್ಮೆ ಆ ದೈವಿಕಮೂರ್ತಿಯನ್ನು ಕಣ್ಣಾರೆ-ಮನವಾರೆ ನೋಡಿ ಹೋಗಬೇಕೆಂದಿದ್ದರೂ, ಹೆಚ್ಚು ಹೊತ್ತು ಅಲ್ಲಿ ನಿಂತಿರುವಂತಿಲ್ಲ ; ಹೊರಟೇಹೋಗಬೇಕು, ಆದರೆ, ಕಾಲೇ ಬಾರದು ! ಇದಲ್ಲವೇ, ವಿಚಿತ್ರ ಘಟನಾವಿಶೇಷ ! ಇದನ್ನೇ ಅಲ್ಲವೆ, ರಮಣಿಯರ ಅದ್ಭುತಶಕ್ತಿಯೆಂದೆನ್ನು ವುದು ? ಹೇಗಾದರೂ ಇರಲಿ; ತರುಣನೇನೋ ಮುಂದಕ್ಕಡಿಯಿಟ್ಟನು.