ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 ಸ ತಿ ಹಿ ತ್ಯ ಷಿ ಣಿ ತಾ ತಾರಾಪತಿ-ವಿಕೃತಸ್ವರದಿಂದ “ ಕುಮಾರ! ಮಾಡುವುದೇನು ? ಹೀಗೇಕೆ ನಿಂತಿರುವೆ ?? ಶ್ರೀದತ್ತ ತಲೆಯೆತ್ತಿ 'ತಾರಾಪತಿರಾವ್! ಇಷ್ಟು ಕೃತ್ಯಗಳು ನಡೆದಿದ್ದ ರೂ, ಹೀಗೆ ಮೈಮರೆತು ಮಲಗಿರುವುದು ಅತ್ಯಾಶ್ಚರೈಕರವಾಗಿದೆ.' ತಾರಾಪತಿ-ನಿರಾತಂಕವೂ, ವಯಪ್ರಾಬಲ್ಯವೂ ಸೇರಿದ್ದರೆ, ನಿದ್ದೆಗೆ ಕೊರತೆಯೇನು ? ಹಾಗೂ ನಿನಗೇನಾದರೂ ಸಂಶಯವಿದ್ದರೆ, ಎಚ್ಚರಿಸಿ ಕೇಳುವೆನು. ಶ್ರೀದತ್ತ-ಆಗುವುದೇನೋ ಆಯಿತು, ಇನ್ನು ಸುಮ್ಮನೆ ಗಲಭೆಮಾಡು ವದರಿಂದ ಕೆಲಸವೇ ಕೆಡುವುದಲ್ಲದೆ ಮತ್ತೇನೂ ಆಗಲಾರದು. ಹಾಗೂ ಈಗಲೇ ಎಚ್ಚರಿಸುವುದರಿಂದ ಸ್ತ್ರೀ ಸ್ವಭಾವಕ್ಕೆ ತಕ್ಕಂತೆ ಅಳುವೂ ತಲೆದೋರಬಹುದು. ಈಗ ಸಮಾಧಾನದಲ್ಲಿದ್ದು, ಇವ - ರಾಗಿ ಬಂದು ಅಳುವ ಸಂದರ್ಭದಲ್ಲಿ, ಕಾಲಕ್ಕೆ ತಕ್ಕಂತೆ ಒಂದೆರಡು ಸವಿಮಾತುಗಳಿಂದ ಸಂತಯಿಸುವುದು ಯುಕ್ತವಾಗಿದೆ. ತಾರಾಪತಿ-ಅದೇ ಯುಕ್ತವಾದ ಸಲಹೆಯಾಗಿದೆ. ಶ್ರೀದತ್ತ-ಹೊತ್ತು ಕಳೆದುಹೋಗುತ್ತಿದೆ ಮನೆಯೆಲ್ಲವನ್ನೂ ನೋಡಿ, ತಕ್ಕ ಷ್ಯ ವಿಷಯಸಂಗ್ರಹಮಾಡಲಾಗಿದೆ. ಇನ್ನು ನಾನು ಇಲ್ಲಿ ನಿಲ್ಲುವಂತಿಲ್ಲ ; ಬೇಗಹೋಗಬೇಕು. ತಾರಾಪತಿ-ಕುಮಾರ ! ನಿನ್ನ ಕೆಲಸಕ್ಕೆ ನಾನು ತಡೆಯಾಗಲಾರೆನು ; ನಡೆ, ಇಂದಿನ ಕೌತುಕವ್ಯಾಪಾರದಿಂದ, ಮನಸ್ಸು ಚಾಂಚಲ್ಯಕ್ಕೆ ಗುರಿಯಾಗಿದೆ, ಇದರ ಪರಿಣಾಮವೇನೋ ತಿಳಿಯದು. ಆದು ದಾಗಲಿ ! ದೇವರಿರುವನಲ್ಲವೇ ? ಎಂದು ಕುಮಾರನೊಡನೆ ಹೊರ ಟು, ತನ್ನ ಓಲಗಶಾಲೆ (Office) ಯ ಬಾಗಿಲನ್ನು ತೆರೆದು ಒಳ ಹೊಕ್ಕನು. ಶ್ರೀದತ್ತನು, ತಾರಾಪತಿರಾಯನಿಗೆ ಬಾಗಿಲನ್ನು ಭದ್ರಪಡಿಸಿ ಮಲಗುವಂತೆ ಬಾರಿಬಾರಿಗೂ ಎಚ್ಚರಿಸಿ, ಅನುಮತಿ ಹೊಂದಿ ಹೊರಟುಹೋದನು. ಹೈನು. ಶ್ರೀರ(Offce) ಕುಮಾರನೊಡನೆ ಅದು ಇಹ