ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L೪ ಸ ತಿ ಹಿತ್ಯ ಷಿ ಣಿ ಹಾಳೆಗಳನ್ನು ಮಗುಚಿಹಾಕಿದನು, ಪುಸ್ತಕದೊಳಗೆ ಅ೦ಟುಹಾಕಿದ್ದ ಲಕೋಟೆಯೊಂದು ಸಿಕ್ಕಿತು. ಬಹದ್ದುರನು ಕುತೂಹಲದಿಂದ ತೆಗೆದುನೋ ಡಿದನು, ವಿಳಾಸವಾದರೂ-' ರಾವಬಹದ್ಗುರ ರಾಧಾನಾಧ ರಾಕೂರರಿಗೆ ? ಎಂದೇ ವಿಲಿಬಿತವಾಗಿದ್ದಿತು. ಬಹದ್ದು ರನು, ವಿಸ್ಮಯಾಧಿಕ್ಯದಿಂದ, ಲಕೋ ಟೆಯನ್ನೊ ಡೆದು, ಒಳಗಿದ್ದ ವಿಕೃತಾಕ್ಷರಪತ್ರವನ್ನು ಓದಲಾರಂಭಿಸಿದನು. ಪತ್ರಾಲೋಕನಾರಂಭದಲ್ಲಿಯೇ ಬಹದ್ದುರನ ಮುಖವು ರಕ್ತವರ್ಣಕ್ಕೆ ತಿರುಗಿದ್ದು, ಬರಬರುತ್ತೆ ವಿವಿಧವರ್ಣಗಳಿಂದ ಭಯಂಕರವಾಗಿ ತೋರು ತಿದ್ದಿತು. ಪತ್ರದ ಸಾರಾಂಶವೇನೆಂಬುದನ್ನು ನಮ್ಮ ವಾಚಕರ ಅವಗಾ ಹನಕ್ಕೆ ತರಬೇಕಲ್ಲವೇ ? (ಪತ್ರು.) ' ಸರ್ಕಾರದವರ ಮಹತ್ರ ಯತ್ನ ಭಂಗೋದ್ದಿಶ್ಯವಾಗಿ, ನಾವು ಗುರಿಕಟ್ಟಿರುವ ಸುಖಮಯಸ್ವರೂಪಿಯಾದ ಶ್ರೀಯನ್ನು ಅಪಹರಿಸಿ, ಇಷ್ಟ ಸಿದ್ಧಿ ಹೊಂದುವುದರ ಮೂಲಕ, ಲೋಕಹಿತೈಷಿಗಳಿಗೆ ಅಪ್ರಿಯವನ್ನು ಮಾಡುವ ನಾ ಪ್ರಯತ್ನವು, ಹೇಗೂ ಭಂಗಹೊಂದಲಾರದೆಂಬುದಕ್ಕೆ, ಈ ದುರ್ಗಮಸ್ಥಾನವನ್ನು ಕೂಡ, ಸುಗಮವನ್ನಾಗಿ ಮಾಡಿ ಬಂದಿರುವ ಈ ಪತ್ರವೇ ಸಾಕಾಗಿದೆ, ತಿಳಿದಿರಲಿ. ಇತಿ ಎಚ್ಚರಿಕೆ.' - ರಾವಬಹದ್ದುರನು ಪತ್ರವನ್ನು ಮಡಿಸಿ, ಅಂಗಿಯ ಕಿಸೆಯಲ್ಲಿಟ್ಟು, ಕಾಲಕ್ಷೇಪದ ಮನೆಯ ಬಾಗಿಲನ್ನು ಭದ್ರಪಡಿಸಿ ಬಂದು, ಓಲಗಶಾಲೆ ಯಲ್ಲಿ ಕುಳಿತು ಯೋಚಿಸಿದನು ; ಯಾವುದೂ ತೋರಲಿಲ್ಲ, ಕಳವಳಗೊ೦ ಡಂತಾಗಿ, ಹೊರಗಡೆ ಕುಳಿತಿದ್ದ ಸೇವಕನನ್ನು- ರೈರ್ಮ ! ಇತ್ತ ಬಾ ? ಎಂದು ಕೂಗಿದನು. ರೈರ್ಮ-ಬಂದು ಕೈಮುಗಿದು-' ಏನಪ್ಪಣೆ ?' ರಾವಬಹದ್ಗುರ-ಆಫೀಸು, ರೀಡಿಂಗ್ ರೂಮ್ ಇವುಗಳಿಗೆ ಬಂದಿದ್ದವ ರಾರು ?