ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೩ ದ ಕ ಕ ನ್ಯಾ ಗಂಗೆ ಏನು ! ಸತ್ತಿಲ್ಲವೇ ? ನಿಜವೇ ? ಮಕ್ಕಳೊಡನೆ ಬದುಕಿರುವಳೇ ? ತಾರಾಪತಿ-ನಿಜವಾಗಿಯೂ ಸತ್ತಿಲ್ಲ, ಮಕ್ಕಳೂ ಸುಖವಾಗಿವೆ. ಗಂಗೆ--ಹಾಗಾದರೆ, ಇಂದಿನವರೆಗೂ ಕರೆಯಿಸಿಕೊಳ್ಳದಿದ್ದುದೇಕೆ ? ನನ್ನ ನ್ನು ನಿಷ್ಟುರಕ್ಕೆ ಗುರಿಪಡಿಸಬೇಕೆಂದೋ ? ಹಗಲೂ, ಇರಳ ನೀವು ಹೀಗೆ ಕೊರಗುತ್ತಿರುವುದು ನನಗೆ ಸಮಾಧಾನವೆಂದೋ ? ಇನ್ನಾದರೂ ನಿಮ್ಮ ಪ್ರಿಯಪತ್ನಿ ಯನ್ನು ಕರೆಯಿಸಿಕೊಂಡು ಸುಪಿ ಸಬಹುದು, ನನ್ನ ಆತಂಕವೇನೂ ಇರುವುದಿಲ್ಲ. ತಾರಾಪತಿ-ಆನಂದೋತ್ಸಾಹಗಳಿಂದ ಪತ್ನಿ ಯ ಗಲ್ಲವನ್ನೆತ್ತಿ, ಮುಖವನ್ನೇ ನೋಡುತ್ತ ಹೇಳಿದನು. ' ಗಂಗೆ ! ನಿನ್ನೀವಾ ಕಲ್ಯದಿಂದ ನನ್ನ ಮನಸ್ಸು ಸೋತುಹೋಗಿದೆ. ಇನ್ನಾದರೂ ಕ್ಷಮಿಸು. ಸುನಂ ದೆಯು, ಈ ದಿನವೇ, ಬರುವಳೆಂಬ ವರ್ತಮಾನವಿತ್ತು ; ಇನ್ನೂ ಬಂದಿಲ್ಲ, ಇದಕ್ಕಾಗಿಯೇ ನಾನು ನಿರೀಕ್ಷಿಸುತ್ತಿರುವುದು.' ಗಂಗೆ--ನನಗೆ ಇದೊಂದನ್ನೂ ಹೇಳಲಿಲ್ಲವೇಕೆ ? ಅಪಾತ್ರಳೆಂದೋ ? ಅಸೂಯಾಪರಳೆಂದೋ ? ತಾರಾಪತಿ-ಅಂತಹದೇನೂ ಇಲ್ಲ, ಆದರೂ, ಬೇರೆ ಕೆಲವು ಪ್ರಬಲಕಾರ ಣಗಳಿವೆ. ಗಂಗೆ--ನಾನೂ ತಮ್ಮನ್ನು ಬಲಾತ್ಕರಿಸಬೇಕೆಂದಿಲ್ಲ. ಹೇಗೂ, ಸುಖ ಸಂತೋಷದಿಂದಿರುವುದೇ ಬೇಕು. ಈಗಲಾದರೂ ಏಳಿರಿ ; ಸುಪಿ ಸುವಕಾಲದಲ್ಲಿ ದುಗುಡದಿಂದಿರಬಾರದು. ತಾರಾಪತಿ-ಏಳಲಾರೆನೆಂದು ಮೊದಲೇ ಹೇಳಿದೆನಲ್ಲವೆ ? ಗಂಗೆ-ಇಷ್ಟಾದರೂ ಹಟವೇನು ? ಸತಿಪತಿಯರ ಸಂವಾದದ ಮಧ್ಯದಲ್ಲಿಯೇ ಚಂದ್ರಮತಿಯ ಬಂದು ಹೇಳಿದಳು,-' ಮಗು, ತಾರಾಪತಿ ! ಮೈ ಒಡವೆಂದು ಊಟವನ್ನೇ ಬಿಡಬೇಕೇ ? ನಿನಗಾಗಿ ನಾವೆಲ್ಲರೂ ಕಾದಿರುವೆ. ಇನ್ನು ಹಟಮಾಡದೆ ಏಳು.'