ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಾ? ದ ಕ ಕ ನ್ಯಾ ೭೫ ರಕ್ಷಕರಾಗಿ ಬಂದಿದ್ದ ಭಟರು ಸರಿದು ಕೈಕಟ್ಟಿ ನಿಂತರು. ಬಂಡಿಯನ್ನೇ ಇದಿರುನೋಡುತ್ತಿದ್ದ ಯಮುನೆಯು, ಬೀಳುವುದನ್ನೂ ತಿಳಿಯದೆ, ಎಡವಿ ಮುಗ್ಗರಿಸುತ್ತ ಓಡಿಬಂದು, ಬಂಡಿಯ ಕದವನ್ನು ತೆರೆದು, ಕಣ್ಣೀರು ಸುರಿ ಸುತ್ತ ಗದ್ಧ ದಸ್ವರದಿಂದ ಬಂದಿರಾ, ಭಾಗ್ಯಲಕ್ಷ್ಮಿ ಎಂದು ಹೇಳಿ ಕೈನೀಡಿದಳು, ಹತ್ತು ವರ್ಷದ ಸುಕುಮಾರನಾದ ಬಾಲಕನೊಡನೆ, ಇಪ್ಪ ತೆಂಟು ವರ್ಷದ ತೇಜಸ್ವಿನಿಯಾದ ನಾರೀಮಣಿಯು ಬಂಡಿಯಿಂದ ಕೆಳ ಗಿಳಿದು, ಅಧಿಕವಾದ ಆಯಾಸದಿಂದ ಯಮುನೆಯ ಭುಜದಮೇಲೆ ತನ್ನ ಮೈಭಾರವನ್ನೂರಿ, ಮೆಲ್ಲಗೆ ನಡೆತಂದು ಮೊದಲ ಅಂಗಳದಲ್ಲಿಯೇ ಕುಳಿತು ಬಿಟ್ಟಳು. ಯಮುನೆಯು ಕುಮಾರನನ್ನು ಕಂಕುಳಲ್ಲಿಟ್ಟು, ಚಂದ್ರಮತಿಗೆ ಶುಭವರ್ತಮಾನವನ್ನು ಹೇಳಲು ಓಡಿದಳು. ಪತ್ನಿ ಯ ಆಗಮನ ಚಿಂತೆಯಲ್ಲಿಯೇ ಕುಳಿತಿದ್ದ ತಾರಾ ಪತಿರಾ ಯನು ಪತ್ನಿ ಯು ಬಂದು ಮುಂದಿನ ಅಂಗಳದಲ್ಲಿ ಕುಳಿತುದನ್ನು ಕಂಡು, ಒಂದೇ ನೆಗೆತಕ್ಕೆ ಹಾರಿಬಂದು, ಪತ್ನಿ ಯ ಮುಂದೆ ನಿಂತನು, ಮಲಿನವ ದಿಂದ ಮರೆಯಾಗಿದ್ದ ಪತ್ನಿಯ ಕೃಶಾಂಗವನ್ನು ನೋಡಿ, ಹುಚ್ಚನಂತೆ ವಿಕೃತಸ್ವರದಿಂದ- ಸುನಂದಾ ! ಸುನಂದಾ !! ' ಎಂದು ಕೂಗಿ ಮುಂದೆ ಏನನ್ನೂ ಹೇಳಲಾರದೆ ಸುಮ್ಮನಾದನು, ಸುನಂದೆಗೂ ಪತಿಯನ್ನು ನೋಡಿ, ಹೃತ್ತಾಪವು ಹೊರಹೊಮ್ಮಿತು ; ಕಣ್ಣುಗಳಿಂದ ಧಾರೆಯಾಗಿ ನೀರು ಸುರಿದುಹೋಯಿತು ; ಪ್ರಜ್ಞೆಯೂ ತಪ್ಪಿತು ; ಕುಳಿತಂತೆಯೇ ಕಣ್ಣೆ ವೆಗಳನ್ನು ಮುಚ್ಚಿದಳು ನಾಲ್ಕಾರು ನಿಮಿಷಗಳಾದ ಬಳಿಕ, ತಾರಾಪತಿರಾಯನು ಪ್ರಜ್ಞೆ ಹೊಂದಿ, ಪತ್ನಿ ಯ ಅವಸ್ಥೆಯನ್ನು ನೋಡಿ ತಡೆಯಲಾರದೆ ಬಳಿಗೆ ಬಂದು, ಕರವಸ್ತ್ರದಿಂದ ಗಾಳಿಹಾಕು, ಕಂಪಿತಸ್ವರದಿಂದ ಕೇಳಿದನು-ಪ್ರಾಣಾ ಧಿಕೆ ! ದುಃಖವನ್ನು ತಡೆಗಟ್ಟು, ಕಣ್ಣೆರೆದು ನನ್ನನ್ನು ನೋಡು ; ಮಾತ ನಾಡು.'