ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತಿ ಹಿತ್ಯ ಷಿ ಣಿ ಹವನ್ನು ಮಾಡಿಟ್ಟು, ಮರುದಿನದ ಉದಯದಲ್ಲಿಯೇ ನನ್ನನ್ನು ಮಕ್ಕಳೊಡನೆ, ಮನೆಯಲ್ಲಿ ನಂಬಿಕೆಯವರಾಗಿದ್ದ ಆಳುಗಳನ್ನು ಜತೆಮಾಡಿ ಬೀಳ್ಕೊಟ್ಟರು. ನಾವು ಒಂದೇ ರಭಸದಿಂದ ದಾರಿ ಯಲ್ಲಿ ಎಲ್ಲಿಯೂ ನಿಲ್ಲದೆ ಪ್ರಯಾಣಮಾಡಿದರೂ, ಗೊಲ್ಲರ ಪಾಳ್ಯಕ್ಕೆ ಬರುವ ವೇಳೆಗೆ ಕತ್ತಲೆಯಾಯಿತು, ಗೊಲ್ಲರಪಾಳ್ಯದ ಉಕ್ಕಡದಲ್ಲಿಯೇ ಕಾದಿದ್ದ ಗ್ರಾಮದ ಹೆಗ್ಗಡೆಯೂ, ಸತ್ರದ ಪಾರುಪತ್ಯಗಾರನೂ ನಮ್ಮನ್ನು ಅಲ್ಲಿ ತಂಗಿದ್ದು, ಬೆಳಗಾದ ಬಳಿಕ ಹೋಗಬೇಕೆಂದು ಹಿಂಸಿಸಿದರು. ಆದರೆ, ನಾವದಕ್ಕೆ ಒಪ್ಪಲಿಲ್ಲ ವಾದುದರಿಂದ, ಊಟವನ್ನಾದರೂ ಮಾಡಿ ಹೋಗಬೇಕೆಂದು ಬಹುವಾಗಿ ಬೇಡಿದರು. ಹುಡುಗರೂ, ಆಳುಗಳೂ ಹಸಿದು ಬಳಲಿ ದ್ದುದರಿಂದ ಸಮ್ಮತಿಸಿ, ಅಲ್ಲಿ ಸ್ವಲ್ಪ ಹೊತ್ತು ನಿಂತೆವು, ಅವರಿಗೆ ಊಟವಾದ ಬಳಿಕ, ನಾನೂ ಅವರ ಬಲಾತ್ಕಾರಕ್ಕೆ ಕಟ್ಟು ಬಿದ್ದು, ಅವರು ತಂದುಕೊಟ್ಟ ಹಾಲನ್ನು ಕುಡಿದೆನು, ಮತ್ತೆ ಎಲ್ಲರೂ ಪ್ರಯಾಣಮಾಡಿದೆವು. ಅಲ್ಲಿ ತೆಗೆದುಕೊಂಡ ಆಹಾರದಿಂದ ಎಲ್ಲ ರಿಗೂ ತೂಕಡಿಕೆಯುಂಟಾಯಿತು. ನಾನು ಮೈಮರೆತು ಮಲಗಿ ಬಿಟ್ಟೆನು, ಸುಮಾರು ಗೊಲ್ಲರಪಾಳ್ಯಕ್ಕೆ ನಾಲ್ಕು ಮೈಲಿಯಲ್ಲಿ ರುವ ಮುಳ್ಳು ಮೆಳೆಯ ಚೌಕಕ್ಕೆ ಒಂಡಿಯು ಬಂದು ನಿಂತಿತು. ಅಕಸ್ಮಾತ್ತಾಗಿ ಅಲ್ಲಿ ಉಂಟಾದ ಕೋಲಾಹಲದಿಂದ ದಿಗಿಲುಬಿದ್ದ ನಾನು ಏಳಹೋದೆನು ; ಆಗಲಿಲ್ಲ, ನನ್ನ ಕೈಕಾಲುಗಳು ಹಗ್ಗೆ ಗಳಿಂದ ಬಿಗಿಯಲ್ಪಟ್ಟು ಬಂಡಿಕಿಟಿಕಿಗೆ ಕಟ್ಟಲ್ಪಟ್ಟಿದ್ದುವು. ಮಲ ದಂತೆಯೇ ನೋಡಿದೆನು ; ಮಕ್ಕಳಿರಲಿಲ್ಲ, ಬಂಡಿಯವನು ಗಾಯ ಪಟ್ಟು ಕೆಳಗೆ ಚೀರುತ್ತಿದ್ದನು. ಉಳಿದಿದ್ದ ಅಳುಗಳು ತಮ್ಮನ್ನು ಸುತ್ತಿದ್ದ ೨೦-೩೦ ಮಂದಿ ಕಳ್ಳರೊಡನೆ ಹೊಡೆದಾಡುತ್ತಿದ್ದರು. ನಾನು ಆ ಭಯಾನಕ ವ್ಯಾಪಾರವನ್ನು ನೋಡಲಾರದೆ ಮೂರ್ಛಿತೆ ಯಾದೆನು.'