ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ಶ್ರೀ || ಚತುರ್ದಶಪರಿಚ್ಛೇದ. ೬ 4 (ಆಗ್ರಹ.) ಕರಾವಬಹದುರ ರಾಧಾನಾಧರಾಯನು ಚಿತ್ರಶಾಲೆ ಮನ (Drawing Room) ಯಲ್ಲಿ ಕುಳಿತಿದ್ದನು. ಬಳಿ ಕಳ:ಯಲ್ಲಿಯೇ ಉಪಾಹಾರಪಾತ್ರೆಯನ್ನು ಹಿಡಿದಿದ್ದ ಆತನ ಟ್ ಪತ್ನಿ ಸುಕನ್ಯಾಬಾಯಿಯು ನಿಂತಿದ್ದಳು. ಹೊತ್ತು, ಇನ್ನೂ ಮೂರು ಗಂಟೆಯಾಗಿರಲಿಲ್ಲ, ಬಹದ್ದುರನು ಬೇಗ ಬಂದಿದ್ದನು. ಸ್ವಲ್ಪ ತಾಳಿ, ಮಹನೀಯರೇ ! ಸುಖವೆಲ್ಲಿರುವುದು ? ಸಂತೋಷವಾರನ್ನು ಸೇರಿರುವುದು ? ಹೇಳಬಲ್ಲಿರೇನು ? ಸಂಪತ್ತಿನಲ್ಲಿಯೇ ಸುಖ, ಸಂತಾನದ ಲ್ಲಿಯೇ ಸಂತೋಷವನ್ನು ವಿರೋ ? ಹೇಗೆ ? ಸಂಪದವೊಂದರಲ್ಲಿಯೇ ಸುಖ ವಿರುತ್ತಿದ್ದರೆ, ಸಂಸಾರದ ತಾಪವೇಕೆ ? ಸಂತಾನದಲ್ಲಿಯೇ ಸಂತೋಷವೆಂ ದರೆ, ಸಂತಾನವನ್ನು ಹೊಂದಿಯೂ ಅಳುತ್ತಿರುವವರೆಷ್ಟು ಮಂದಿಯಿಲ್ಲ ? ಸಂಪದವೂ, ಸಂತಾನವೂ ಇಲ್ಲದೆಯೇ ಅಖಂಡಸುಖಸಾಮ್ರಾಜ್ಯವನ್ನನು ಭವಿಸಿದ ಮಹನೀಯರೆಷ್ಟು ಮಂದಿಯಿಲ್ಲ ? ವಿಚಾರಮಾಡಬೇಕಲ್ಲವೇ ? - ಚ್ಯವನಮಹರ್ಷಿಯ ಸುಖಾಧಾರವಸ್ತುವಾವುದು ? ರಾಜಕನ್ಯ ಯಾದ ಸುಕನೈಯ ಪಾತಿವ್ರತ್ಯವೊಂದೇ ಅಲ್ಲವೆ ? ಅವಳ ನೈಸರ್ಗಿಕ ಪ್ರೇಮವೊಂದೇ ಅಲ್ಲವೆ ಆತನನ್ನು ಸುಖಸಾಮ್ರಾಜ್ಯದಲ್ಲಿ ನಲಿದಾಡುವಂತೆ ಮಾಡಿದುದು ಅದೇ ಅಲ್ಲವೇ ಪಿತೃಕುಲವನ್ನು ದ್ವೇರಿಸಿದುದು ? ಅದೇ ಅಲ್ಲವೆ? ಪತಿಯನ್ನು ನಿತ್ಯ ಯೌವನಸಂಪನ್ನನಾಗಿ ಮಾಡಿದುದು ? ಅಶ್ವಿನಿ ದೇವತೆ ಗಳಿಗೆ ಹವಿರ್ಭಾಗವನ್ನು ಸಲ್ಲಿಸುವಂತೆ ಮಾಡಿದುದು ? ಮತ್ತೂ ಹೇಳ ಬೇಕೇ ? ಅನುಕೂಲವತಿಯಾದ ಸತಿಯಿಂದೆಯೇ ಸಮಸ್ತ ಪುರುಷಾರ್ಧ