ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ಸ ತಿ ಹಿ ತೈ ಷಿ ಣಿ ಗಳೂ ಸಾಧ್ಯವಾಗುವುವೆಂದು ತಿಳಿಯಲಿಲ್ಲವೋ ? ಪತಿರಾಜನು ದುಡಿದು ತಂದುದನ್ನು ಅಲ್ಪವೆಂದಲ್ಲಗಳೆಯದೆ, ಪೂರ್ಣಶ್ರದ್ಧೆಯಿಂದ ಕಾಲವರಿತು ಉಚಿತರೀತಿಯಲ್ಲಿ ಉಪಯೋಗಿಸುವ ಸತಿಯಿದ್ದರೆ, ಆತನ ಸಂಸಾರದಲ್ಲಿ ತಾಪವೆಲ್ಲಿರುವುದು ? ಆಯಾಸದಿಂದ ಜಡನಾಗಿರುವ ಪತಿಯನ್ನು ಸುಮ ನೋಹರವಾಣಿಯಿಂದ ಸಂತಯಿಸಿ ಸೇವಿಸುವ ಸತಿಯಿದ್ದರೆ, ಆತನ ಸುಖಕ್ಕೆ ಕೊರತೆಯೆಂತಹುದು ? ಪತಿರಾಜನು ಗುರುದೈವಭಕ್ತನಾಗಿರಲು, ನಿರ್ಮಲಾಂತಃಕರಣದಿಂದ ಆತನಿಗೆ ಸಹಕಾರಿಣಿಯಾಗಿರುವ ಸತಿಯಿದ್ದರೆ, ಆತನ ಆತ್ಮಸಂತೋಷಕ್ಕೆ ಅಂತವಾದರೂ ಇರುವುದೋ ? ಹಾಗಾದರೆ, ಸೋದರಿಯರೇ ! ನಮ್ಮಲ್ಲಿ ಎಷ್ಟು ಮಂದಿ ಸುಕನ್ಯ ಯರಿರಬಹುದು ? ವಿಚಾರಮಾಡಿ ಹೇಳಿರಿ, ಅಭಿಮಾನವನ್ನು ಳಿದು, ಆತ್ಮ ಸಾಕ್ಷಿಯಾಗಿ ತನ್ನೆ ರಸನಿಗೆ ಸಹಚಾರಿಣಿಯಾಗಿರುವ ಕೋಮಲಾಂತಃಕರ ಣೆಯರು, ನಮ್ಮ ವರಲ್ಲಿ, ಎಷ್ಟು ಮಂದಿಯಿರಬಹುದು ? ನಮ್ಮ ನಮ್ಮಲ್ಲಿಯೇ ವಿಚಾರಮಾಡಿ, ತಿಳಿದುಕೊಳ್ಳುವುದು ಮೇಲಲ್ಲವೆ ? ಸ್ಕೂಲವಾಗಿ ನೋಡಿದರೆ, ನಾ ಸ್ತ್ರೀವರ್ಗವನ್ನು ದುರಭಿಮಾನ, ಮಾತೃರಾದಿ ರೋಗಗಳು ಮುತ್ತಿ, ಅಪವಾದಗ್ರಸ್ತೆಯರನ್ನಾಗಿ ಮಾಡು ತಿರುವುದೆಂದು ತಿಳಿಯುತ್ತಿದೆ. ಆದರೂ, ನಮ್ಮ ಸುಕನ್ಯಾದೇವಿಯಂತಹ ಮಹಿಳೆಯರ ತಪೋಜ್ವಾಲೆಯಿಂದ, ಇನ್ನೂ ನಮ್ಮವರು ಸಂಪೂರ್ಣವಾಗಿ ಅದರ ಬಾಯಿಗೆ ತುತ್ತಾಗುವಂತಿಲ್ಲ, ಈಗಲೇ ನಮ್ಮ ವರಲ್ಲಿ ಪ್ರತಿಯೊ ಬ್ಬರೂ ಒಬ್ಬೊಬ್ಬ ಸುಕನ್ಯಯಾಗಿ ನಿಂತರೆ, ಆ ಭೀಕರರೋಗಗಳಿಗೆ ಅರಣ್ಯ ವಾಸವೇ ಗತಿಯಾಗಬೇಕಾದೀತು ! ಆದುದರಿಂದ, ನಾವೆಲ್ಲರೂ ಈಗೀ ಗಲೇ ಎಚ್ಚೆತ್ತು ಕೊಂಡು, ನಮ್ಮ ಧರ್ಮರಾಜ್ಯದಲ್ಲಿ ನೆಲೆಯಾಗಿ ನಿಂತು, ಸುಖ-ಸಮಾಧಾನಗಳನ್ನು ಸೂರೆಗೊಳ್ಳುವುದು ಮುಖ್ಯವಾಗಿದೆ. ಸದ್ಯಸ್ಥಿತಿಯಲ್ಲಿ, ವಿದ್ಯಾ, ಬುದ್ಧಿ, ವಿನಯ, ವಿತರಣೆ, ದಕ್ಷತೆ ಮೊದಲಾದ ಸಮಸ್ತ ವಿಚಾರಗಳಲ್ಲಿಯೂ, ರಾಧಾನಾಧ ರಾವಬಹದ್ಗುರ