ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಕೃಷ್ಣ ಸೂಕ್ತಿಮುಕ್ತಾವಳಿ. ತೊಡೆಯ ಮೇಲೆ ಮಲಗುವರು; ತಾಯ ಕಯ್ಯಲ್ಲಿ ಉಣ್ಣುವರು; ತಾಯ ಕತೆ ಗಳನ್ನು ಕೇಳುವರು; ತಾಯ ಮೊಗವನ್ನು ನೋಡುವರು; ತಾಯಿಯೊಡನೆ ಮು ದ್ದು ಮುದ್ದಾಗಿ ಮಾತನಾಡುವರು; ತಾಯಿಯೊಂದಿಗೆ ಜಗಳವಾಡುವರು; ಗಲಭೆ ಮಾಡುವರು; ತಾಯ ಸಂಗಡ ದೌರಾತ್ಮವನ್ನು ನಡೆಯಿಸುವರು. ಆದರೆ, ದಾ ಮಿಸಿಯ ಅದೃಷ್ಟದಲ್ಲಿ ಅವಾವುವೂ ಇಲ್ಲ ವೇತಕ್ಕೆ? ಅಜ್ಜಿಯಿರುವಳು; ಬಲು ಒಳ್ಳೆ ಯವಳು; ತನ್ನನ್ನು ತಾಯಂತೆಯೆ ಪ್ರೀತಿಸುವಳು. ಆದರೆ, ತಾಯಿ? ಅವಳ ಆದರ? ಅವಳ ಪ್ರೀತಿ? ಅದಾವ ಪರಿ?-ತನ್ನ ತೃತೀಯವರ್ಷದಲ್ಲಿಯೆ ತಾಯನ್ನು ನೀಗಿ ಕೊಂಡಿದ್ದ ಆ ದಾಮಿನಿಗೆ ಅದು ಹೇಗೆ ಗೊತ್ತಾಗಬೇಕು? ಎಲ್ಲಿಯೂ, ಒಂದೊಂದು ವೇಳೆ, ಕೊಂಚಕೊಂಚವಾಗಿ, ಅವಳಿಗೆ ಆ ನೆನಪು! ಕೊಂಚಕೊಂಚ;-ಕೇವಲ ಛಾಯಾಮಾತ್ರ!--ಕೇವಲ ಒಂದು ದೇಹ;-ಆ ಮೇಲೆ, ಬರೀ ಒಂದು ಮುಖ!!-- ಬಾಲ್ಯಕಾಲದಲ್ಲಿ ಒಂದು ಬಾರಿ ದುರ್ಗೊತ್ಸವವನ್ನು ನೋಡಿದಳು;- ಕೇವಲ ಒಂದೇ ಬಾರಿ: - ಮಾವಾಗಲೂ ನೋಡಿದುದಿಲ್ಲ;-ಪ್ರೌಢಾವಸ್ಥೆಯಲ್ಲಿ ಹೇಗೆ ಆ ದುರ್ಗೊತ್ಸವದ ದುರ್ಗಾ ವಿಗ್ರಹದ ಜ್ಞಾಪನವಾಗಬಹುದೋ ಹಾಗೆಯೆ, ಈಗ, ಅವ ಳಿಗೆ ತನ್ನ ತಾಯ ಜ್ಞಾಪಕ!! ಎಷ್ಟೋ ಬಾರಿ, ಮಾತೃವಿಗ್ರಹವನ್ನು ಮನಸ್ಸಿನ ಲ್ಲಿಯೇ ಪ್ರತಿಷ್ಠಾಪನಮಾಡುವಳು;-ಬಟ್ಟೆಗಳಿಂದಲೂ ಆಭರಣಗಳಿಂದಲೂ ಮನಸ್ಸಿ ನಲ್ಲಿಯೇ ಅದನ್ನಲಂಕರಿಸುವಳು;-ಅನಂತರ, ನಗೆಮೊಗದಿಂದ, ಅತ್ಯಾದರದಿಂದ, ಮನಬಂದಂತೆ, ಆ ದಿವ್ಯದೇವೀಮೂರ್ತಿಯ ಸರ್ವಾಂಗಗಳನ್ನೂ ಅಳವಡಿಸು ವಳು;-ಅಳವಡಿಸಿ, ಆ ಬಳಿಕ, ಮನಸ್ಸಿನಲ್ಲಿಯೇ-“ಅಮ್ಮಾ ಅಮ್ಮಾ!” ಎಂದು ಕರೆಯತೊಡಗುವಳು. ಇಂದೂ, ತಾಯ ವಿಚಾರವನ್ನು ಮನಸ್ಸಿನಲ್ಲಿಯೇ ಭಾವಿಸಿಕೊಳ್ಳುತ್ತಿದ್ದ ಹಾಗೆ,-ತಾಯ ವಿಚಾರ, ದೀಪದ ವಿಚಾರ, ಸ್ವಪ್ನದ ವಿಚಾರ, ರಮೇಶನ ವಿಚಾ ರ-ಸಮಸ್ತವಿಚಾರಗಳೂ ಮೇಲಿಂದ ಮೇಲೆ ಮನಸ್ಸಿಗೆ ಬಂದು, ದಾಮಿನಿಯ ಹೃದಯದಲ್ಲಿ ಅತಿಶಯವಾದ ವ್ಯಥೆಯನ್ನುಂಟುಮಾಡಿದುವು. ದಾಮಿನಿಯು “ಸತ್ಯ ರೆ ಸುಖ ವೆಂದುಕೊಂಡಳು. -- @++-.. ದ್ವಿತೀಯ ಪರಿಚ್ಛೇದ. ಹತ್ತು ವರ್ಷಗಳಾದ ಮೇಲೆ, ಒಂದು ದಿನ, ಅಪರಾಹ್ನದಲ್ಲಿ, ದಾಮಿನಿಯೋಬ್ಬಳೇ ಕಿರುಮನೆಯಲ್ಲಿ ಮಂಚದ ಮೇಲೆ ಹಾಸುಗೆಯನ್ನು ಹಾಸುತ್ತಿದ್ದಳು, ಪಶ್ಚಿಮ