ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಾಮಿನಿ. ದಿಶೆಯ ಕ್ಷುದ್ರಗವಾಕ್ಷದಿಂದ ಹಾಸುಗೆಯ ಮೇಲೆ ಬಂದು ಬಿದ್ದ ಸೂರ್ಯಕಿರಣ ಗಳು ಅವಳ ಮನೋಜ್ಞವಾದ ಮುಖಮಂಡಲದಲ್ಲಿ ಪ್ರತಿಬಿಂಬಿತವಾಗುತ್ತಿದ್ದುವು. ನಾಸಾಗ್ರದಲ್ಲಿಯೂ ಕೆನ್ನೆಯ ಮೇಲೂ ಸಣ್ಣ ಸಣ್ಣ ಬೆವರಿನ ಹನಿಗಳು ಚಿಕ್ಕಚಿಕ್ಕ ಮುತ್ತಿನ ಮಣಿಗಳಂತೆ ಪ್ರಕಾಶಿಸುತ್ತಿದ್ದುವು. ಒದ್ದೆಯ ಚೌಕದಿಂದ ದಾಮಿನಿಯು ಮೆಯ್ಯನ್ನೊರಸಿಕೊಳ್ಳುತ್ತಿದ್ದಳು. ದಾಮಿನಿಯಾಗ ಬಾಲೆಯಲ್ಲ: ಹದಿನೇಳು ವರ್ಷದ ಯುವತಿ, ಅವಳ ಸರ್ವಾವಯವಗಳೂ ಈಗ ಸಂಪೂರ್ಣತೆಯನ್ನು ಹೊಂದಿವೆ. ದೇಹದ ಬೆಳೆವಣಿಗೆಗೆ ತಕ್ಕಂತೆ, ಅಂಗಚಾಲನದಲ್ಲಿಯೂ ಗಾಂಭೀರ್ಯವು ಸಿದ್ಧಿಸಿದೆ. ಸ್ವಭಾವತಃ ಗೌ? ರಾಂಗಿಯಾದ ದಾಮಿನಿಯಲ್ಲಿ ಆ ಬಣ್ಣವು ಆಪೇಕ್ಷೆಮಾಡಿದುದಕ್ಕಿಂತಲೂ ಅತಿಶಯ ವಾಗಿ ನಿರ್ಮಲವಾಗತೊಡಗಿದೆ. ಮಯ್ಯನೊರಸಿಕೊಂಡು, ದಾಮಿನಿಯು ಕನ್ನಡಿಯನ್ನು ತೆಗೆದಳು. ಅಷ್ಟರ ಲ್ಲಿಯೆ ಅಂಗಳದಲ್ಲಿ ಅಪರಿಚಿತವಲ್ಲದ ಒಂದು ಸ್ವರ ಕೇಳಿ ಚಂಚಲೆಯಾಗಿ, ಅಲ್ಲಿಯೆ ಕನ್ನಡಿಯನ್ನೆಸೆದು, ಬೇಗನೆ ಬಾಗಿಲ ಬಳಿಗೆ ಬಂದು ನಿಂದಳು, ಆರನ್ನು ಬಾಲ್ಯದಲ್ಲಿ « ಅಣ್ಣಾ ! ರಮೇಶ! ಎಂದು ಕರೆಯುತ್ತಿದ್ದಳೋ ಅವನೇ ಇಂದು ಅಂಗಳದಲ್ಲಿ ನಿಂದು, ತನ್ನ ಚಿಕ್ಕಮ್ಮನೊಡನೆ ಅದೇನನ್ನೋ ಮಾತನಾಡುತ್ತಿದ್ದನು. ಸತೃಷ್ಣನಯನೆ ಯಾಗಿ ಅವಳವನನ್ನು ನೋಡತೊಡಗಿದಳು. ರಮೇಶನು ಇನ್ನಾರೂ ಅಲ್ಲ; ಈಗಲವನು ದಾಮಿನಿಗೆ ಜೀವನಸರ್ವಸ್ತನಾದ Yಡಿ ಸ್ವಾಮಿ! ಮಾತು ಮುಗಿಯಿತು; ರಮೇಶನು ತನ್ನ ಶಯನಗೃಹವನ್ನು ಪ್ರವೇಶಮಾಡಿ ದನು. ಹಾಸುಗೆಯ ಮೇಲೆ, ಒಂದೆರಡು ಅರಳಿದ ಹೂಗಳು ಬಿದ್ದಿರುವುದನ್ನು ನೋಡಿ-“ನನ್ನ ನಾಮಾವಳಿ*ಯಲ್ಲಿದ್ದ ಹೂಗಳನ್ನು ಕದ್ದ ಕಳ್ಳನಾರೋ? - ಎಂದನು. ದಾಮಿನಿ:- “ಚೆನ್ನಾಯಿತು! ಒಳ್ಳೆಯ ಕೆಲಸ! ಹೂಗಳನ್ನು ತಂದು ನಾಮಾವಳಿ ಯಲ್ಲಿ ಕಟ್ಟಿಡಕೂಡುವುದು! ಇತರರು ಅದನ್ನು ಕದ್ದು ಕೊಳ್ಳುವುದಕ್ಕೆ ಆಗಲಾರದೆ? ಈಗ, ಆರೋ ಕದ್ದು ಕೊಂಡು ಹೋಗಿ, ಒಳ್ಳೆಯ ಕೆಲಸವಾಯಿತು!” - ರಮೇಶ:- “ಒಳ್ಳೆಯ ಕೆಲಸವಾಯಿತು; ಅಲ್ಲವೇನೊ? ಈ ಬಾರಿ, ಕಳ್ಳನನ್ನು ಹಿಡಿಯಕೂಡಿದ್ದರೆ, ಗೊತ್ತಾಗುತ್ತಿತ್ತು!”

  • ದೇವರ ನಾಮಗಳನ್ನು ಕಸೂತಿಮಾಡಿದ ಚೀಟಿಯ ಬಟ್ಟೆಯ ಉತ್ತರೀಯ, (ಹೋದವ ಪಂಚ.) - ಇದು ಹೆಚ್ಚಾಗಿ ಬಂಗಾಳೀಯರ ಭದ್ರಗೃಹಗಳಲ್ಲಿರುವುದು.