ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಶ್ರೀಕೃಷ್ಣ ಸೂಕ್ತಿ ಮುಕ್ತಾವಳಿ.

  • * \ \ \\

ವಳೂ, ಆ ಯವನನ ಮನೆಗೆ ಎನೂ ಹೋಗಲಿಲ್ಲ: ಮಾರ್ಗಮಧ್ಯದಿಂದಲೇ ಹಿಂದಕ್ಕೆ ಬಂದಿದ್ದಾಳೆ.” ಗೃಹಿಣಿ:- “ಏನು? ಕುಲತ್ಯಾಗಿನಿಯಲ್ಲಿ ವೊ? ಇಚ್ಛಾಪೂರ್ವಕವಾಗಿ ಹೋ ದವಳಲ್ಲವೆಂದು ನಿಮಗೆ ಯಾರು ಹೇಳಿದರು? ಎಲ್ಲ ವಿಚಾರವೂ ನಿಮಗೆ ಬಹುಶಃ ತಿಳಿದಿರಬಹುದು, ಕೆಲವು ದಿವಸಗಳ ವರೆಗೆ, ಒಬ್ಬ ಹೆಂಗಸು ಹುಚ್ಚಿಯ ವೇಷದಿಂದ ಆಗಾಗ ಇಲ್ಲಿಗೆ ಬಂದುಹೋಗುತ್ತಿದ್ದಳು. ಒಂದು ದಿನ, ಸಂಜೆಯ ವೇಳೆಯಲ್ಲಿ ನಿಮ್ಮ ಸೊಸೆಯನ್ನು ಕಟ್ಟಿ ಕೊಂಡು ಓಡಿಹೋಗುವುದರಲ್ಲಿದ್ದಳು; ನಾನು ಹೋಗಿ, ಬಿಡಿಸಿ ಕೊಂಡು ಬಂದೆನು, ಹಿಂದಿರುಗಿ ಬಂದವಳು ತಲೆದಿಂಬಿನಲ್ಲಿ ಮುಟವನ್ನಿಟ್ಟುಕೊಂಡು, ಪುನಃ, ಏನು ಆ ಹುಡುಗಿಯ ಅಳು! ನಾನೇನು ಇದೆಲ್ಲವನ್ನೂ ನಿಮ್ಮೊಡನೆ ಹೇಳಿ ದೆನೆ? ನಿಮ್ಮ ಆ ಸೊಸೆಯಾವಾಗ ನಾನಿರುವ ಪರ್ಯಂತವೂ ವನಓಡಿಹೋಗು ಇದು ಅಸಂಭವವೆಂದು ತಿಳಿದಳೋ ಆಗ ಈ ಮಂತ್ರಾಲೋಚನೆಯನ್ನು ಮಾಡಿ, ಜನಗಳನ್ನು ಬರಮಾಡಿಕೊಂಡು ಹೊರಟುಹೋಗಿರುವಳು.” ಗೃಹಿಣಿಯು ಹೇಳಿದುದನ್ನು ಕೇಳಿ, ಅದಿತಿಗೆ ವಿಸ್ಮಯವುಂಟಾಯಿತು. ಒಂದೆ ರಡು ಬಾರಿ – “ಶಾಸ್ತ್ರವೆಂದಿಗೆ ಸುಳ್ಳಾದೀತು? `ಚರಿತ್ರವು ಯಾರಿಗೆ ಗೊತ್ತು??? --ಎಂದುಕೊಂಡು, ಕೊನೆಗೆ ಗೃಹಿಣಿಯನ್ನು ಕುರಿತು ಅಹುದು; ನೀನು ಹೇಳಿ ದುದರಲ್ಲಿ ನನಗೂ ನಂಬುಗೆಯುಂಟಾಗುತ್ತಿದೆ. ಇನ್ನೆಂದಿಗೂ ಅವಳನ್ನು ಮನೆಗೆ ಸೇರಿಸುವುದಿಲ್ಲ.' ಎಂದನು. ಅದಿತಿಯು ಚಾವಡಿಗೆ ಬಂದು, ಸಮವೇತರಾದ ಎಲ್ಲರೊಡನೆಯೂ ಹೀಗೆಂದು ಹೇಳಿದನು: “ ಅಯಾ! ನನಗೆ ಏನೋ ಭಾಂತಿಯುಂಟಾಗಿತ್ತು. ಇದುವರೆಗೂ ನನ್ನ ಸೊಸ ನಿರ್ದೋಷಿಯೆಂದು ತಿಳಿದಿದ್ದೆನು. ಈಗ ಗೊತ್ತಾಯಿತು; ನಿಜಸ್ಥಿತಿ ಹಾಗೆ ಅಲ್ಲ. ನೀವೆಲ್ಲರೂ ನನ್ನ ಆತ್ಮೀಯರು; ನಿಮ್ಮಲ್ಲಿ ಹೇಳಿಕೊಳ್ಳುವುದಕ್ಕೆ ನಾ ಚುಗೆಯಾದರೂ ಏನು? ನನ್ನ ಸೊಸೆ ಕುಂಟೆ. ಅನೇಕದಿನಗಳಿಂದಲೂ, ಮನೆಯ ನ್ನು ಬಿಟ್ಟು ಓಡಿಹೋಗುವುದಕ್ಕೆ ಪ್ರಯತ್ನ ಮಾಡುತ್ತಿದ್ದಳು. ಆದರೆ, ಗೃಹಿಣಿಯ ಸೂಕ್ಷದರ್ಶಿತೆಯಿಂದ ಅವಳ ಪ್ರಯತ್ನವು ಸಫಲವಾಗಲು ಮಾರ್ಗವಿಲ್ಲದೆ ಹೋ ಯಿತು. ಈಗ ನನ್ನ ಈ ಮನೆಯ ಬಾಗಿಲನ್ನೊಡೆದು ಮಾಡಿದ ಸಾಹಸಕಾರ್ಯ ವೆಲ್ಲವೂ ಆ ನನ್ನ ಸೊಸೆಯ ಆಪ್ತಾಲೋಚನೆಯ ಕೌಶಲದಿಂದಲೇ ನಡೆದುದಾಗಿದೆ. ಅದು ಹೇಗಾದರೂ ಇರಲಿ; ಅವಳು ನಿರ್ದೋಷಿಯೆಂದು ನಾವು ಅವಳನ್ನು ಗ್ರಹ ಇಮಾಡಿದರೂ, ಈಗ ಅವಳು ಯವನನಿಂದ ಸ್ಪಷ್ಟಳಾಗಿರುವಳೆಂಬ ವಿಷಯದಲ್ಲಿ ಆವ ಸಂದೇಹವೂ ಇಲ್ಲ. ಅತ ಏವ, ಶಾಸ್ತ್ರಸಮ್ಮತವೆಂದು ಅವಳನ್ನು ಹೇಗೆ ತಾನೇ ಮನೆಗೆ ಸೇರಿಸುವುದಾದೀತು? ಎಲ್ಲ ಪಾಪಗಳಿಗೂ ಶಾಸ್ತ್ರದಲ್ಲಿ ಪ್ರಾಯಶ್ಚಿತ್ರವಿದೆ;