ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೫೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಸು೦ದರಿ ಅಥವಾ ದೀರ್ಘ ಪ್ರಯತ್ನ, ರಿಯ ಸ್ವಭಾವವನ್ನು ಹುಟ್ಟಾ ಅರಿತ ನರ್ಮದೆಯು ಅವಳ ಚರಿತ್ರವಲ್ಲ ನಿಜವಾದ ದ್ದೆಂದು ಭಾವಿಸಿದಳು, ಮತ್ತು ಯೌಗಿಕಮಹಾತ್ಮ ಯಿಂದ ದಿವ್ಯಸುಂದರಿಯ ಮುಂದಿನ ಭವಿತವ್ಯವನ್ನು ತಿಳಿದು, ಸ್ವಲ್ಪ ದಿನದಲ್ಲಿಯೇ ನೀನು ಮರಳಿ ನಿನ್ನ ಪತಿಯನ್ನು ಇದೇ ಸ್ಥಳದಲ್ಲಿಯೇ ಕೂಡುವಿ. ಕಾರಣ ನೀನು ಅಲ್ಲಿಯ ತನಕ ನನ್ನ ಬಳಿಯಲ್ಲಿ ಸ್ವಸ್ಥವಾ ಗಿರು, ಎಂದು ದಿವ್ಯಸುಂದರಿಗೆ ಸೂಚಿಸಿದಳು. ಆಗ ದಿವ್ಯಸುಂದರಿಯ ಮನಸ್ಸಿಗೆ ಎಷ್ಟೋ ಸಮಾಧಾನವಾದಂತಾಗಲು ಅವಳು ನರ್ಮದೆಯ ಹೇಳಿಕೆಯ ಪ್ರಕಾರ ಅವಳ ಹತ್ತರ ಇರಹತ್ತಿದಳು. ಪೂರ್ಣೇಶ್ವರ ದೇವಾಲಯವಿದ್ದ ಗುಡ್ಡದ ಉತ್ತರದಿಕ್ಕಿಗೆ ಪಾಯಧ್ಯಾಲಾ ಎಂಬ ಒಂದು ಸಣ್ಣ ನದಿಯು ಹರಿಯುತ್ತದೆ. ಅದರ ದಂಡೆಯಲ್ಲಿ ಇಪ್ಪತ್ತು-ಇಪ್ಪ ತೈದು ಮನೆಯುಳ್ಳ ಒಂದು ಹಳ್ಳಿಯದೆ, ದಿವ್ಯಸುಂದರಿಯು ಆ ದೇವಾಲಯದಲ್ಲಿ ಇರಹತ್ತಿದ ಮೇಲೆ ನರ್ಮದೆಯು ಅವಳಿಗಾಗಿ ಆ ಹಳ್ಳಿಯಿಂದ ಅಕ್ಕಿ, ಸಕ್ಕರೆ, ಚಹಾ ಮೊದಲಾದ ಪದಾರ್ಥಗಳನ್ನು ತರಿಸಹತ್ತಿದಳು, ಪರ್ವತದ ಮೇಲೆ ಎಷ್ಟೋ ಗವಳಿ ಗರ ಮನೆಗಳಿದ್ದವು, ಆ ಗವಳಿಗರು ಒಳ್ಳೆ ಭಕ್ತಿಭಾವದಿಂದ ನರ್ಮದೆಗೆ ಸಾಕಾಗು ವಷ್ಟು ಹಾಲನ್ನು ತಂದು ಕೊಡುತ್ತಿದ್ದರು. ಒಂದು ದಿವಸ ದಿವ್ಯಸುಂದರಿಗೆ ಬೇಕಾದ ಸಾಮಾನು ಮುಗಿದದ್ದರಿಂದ ನರ್ಮದೆಯು ಒಬ್ಬ ಗವಳಿಣಿಯ ಕೈಯಲ್ಲಿ ದುಡ್ಡು ಕೊಟ್ಟು ಸಾಮಾನು ತರುವದಕ್ಕಾಗಿ ಅವಳನ್ನು ಆ ಹಳ್ಳಿಗೆ ಕಳಿಸಿ ತಾನು ಈಶ್ವರೀ ಭಜನೆಯಲ್ಲಿ ಲೀನವಾದಳು. ಗವಳಿಣಿಯು ಸಾಮಾನು ತಂದಳು. ತಂದ ಆ ಸಾಮಾ ನನ್ನು ದಿವ್ಯಸುಂದರಿಯು ವ್ಯವಸ್ಥೆಯಿಂದ ಇಡುತ್ತಿರುವಾಗ ಸಕ್ಕರೆಯನ್ನು ಹಾಕಿದ ಕಾಗದದ ಕಡೆಗೆ ಅವಳ ಲಕ್ಷವು ಹೋಯಿತು. ಅದು ಒಂದು ವರ್ತಮಾನಪತ್ರದ ತುಂಡು ಇದ್ದಿತು. ಅವಳು ಅದನ್ನು ತೆಗೆದುಕೊಂಡು ಅದರೊಳಗಿನ ವಿಷಯ ವನ್ನು ಓದಹತ್ತಿದಳು, ಓದೋದುತ್ತ ಅವಳ ಕಣ್ಣುಗಳು ಕಣ್ಣೀರುಗಳಿಂದ ತುಂಬಿ ಬಂದವು, ಭಯಂಕರವಾದ ಛಳಿ ಬಂದವರಂತೆ ಅವಳು ಗದಗದ ನಡುಗಹತ್ತಿ ದಳು. ಇಷ್ಟರಲ್ಲಿ ಭಜನಕಾರ್ಯವನ್ನು ಮುಗಿಸಿಕೊಂಡು ನರ್ಮದೆಯು ಅಲ್ಲಿಗೆ ಬಂದು, ದಿವ್ಯಸುಂದರಿಯ ಸ್ಥಿತಿಯನ್ನು ನೋಡಿ ಆಶ್ಚರ್ಯಚಕಿತಳಾಗಿ ಹೀಗಾಗಲು ಕಾರಣವೇನೆಂದು ಅವಳಿಗೆ ವಿಚಾರಿಸಿದಳು, ಆಗ ದಿವ್ಯಸುಂದರಿಯು ಆರ್ತಸ್ವರದಿಂದ ಆ ವರ್ತಮಾನಪತ್ರದ ತುಂಡನ್ನು ಓದಲಿಕ್ಕೆ ಆರಂಭಿಸಿದಳು. ಯೋಗ್ಯ ನ್ಯಾಯ! « ಎಷ್ಟೋ ದಿವಸ ಕಾಮರ್ಸಬ್ಯಾಂಕಿನ ಸಲುವಾಗಿ ನಡೆದ ಖಟ್ಟೆಯು ಇಂದು ತೀರ್ಗಡೆಯಾದದ್ದನ್ನು ಕೇಳಿ, ಯಾರೂ ನ್ಯಾಯಾಧೀಶನ ಪ್ರಶಂಸೆ ಮಾಡದೆ ಇರಲಿ ಕಿಲ್ಲ. ಪೋಲೀಸರು ಮಾಡಿದ ಪ್ರಯತ್ನದ ಸಲುವಾಗಿ ಅವರು ಸ್ತುತಿಗೆ ಪಾತ್ರರಾಗಿ