ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ನೆಯ ಪ್ರಕರಣ.-೧೦ ದಿರೆಯ ಆತ್ಮನಿವೇದನ ! P** *//- * * * * * * * * - - * ***- +-+ vvvv7, /////ww ನನಗೆ ಈಗ ವೇಳೆಯೂ ಇಲ್ಲ, ನೀವು ಮನೆಗೆ ಹೋಗಬೇಕಾಗಿದ್ದರೆ ಸಹಿಮಾಡಿರಿ. ಇಲ್ಲವಾದರೆ ಇಲ್ಲಿ ನೀವು ಶರೆಮನೆಯಲ್ಲಿದ್ದಂತೆ ಇರಿ.” ಶಾಮರಾಯನ ಈ ಮಾತುಗಳನ್ನು ಕೇಳಿ ವಿನಾಯಕನ ಮನಸ್ಸಿನಲ್ಲಿ ಸಿಟ್ಟೂ, ಭೀತಿಯೂ ಒಮ್ಮೆಲೇ ಉತ್ಪನ್ನ ವಾದವು. ಆಗ ಅವನು ಉದ್ವೇಗದಿಂದ:-( ನೀವು ಹೀಗೆ ನನ್ನನ್ನು ಎಷ್ಟು ದಿವಸ ಅಡಗಿಸಿಡುವಿರಿ? ಎಂದಾದರೂ ನನ್ನ ಬಿಡುಗಡೆ ಯಾಗೇ ಆಗುವದು, ಬಿಡುಗಡೆಯಾದ ಮೇಲೆ ಇದರ ಪ್ರತಿಫಲವನ್ನು ನೀವು ನಿಶ್ಚಯ ವಾಗಿ ಅನುಭೋಗಿಸಬೇಕಾದೀತು, ” | ಶಾನು:- ( ನಗುತ್ತ ) ವಿನಾಯಕರಾಯ, ಈ ಪ್ರಸಂಗವು ನಿಮಗೆ ಚಮ ತ್ಕಾರವಾಗಿ ತೋರಿದ್ದರಿಂದ ನಿಮ್ಮ ಮನಸ್ಸು ಅಸ್ವಸ್ಥವಾಗುವದು ಸಾಹಜಿಕವಾಗಿದೆ. ನೀವು ಇಂದಿನ ರಾತ್ರಿ ಇಲ್ಲಿಯೇ ವಿಶ್ರಾಂತಿಯನ್ನು ತಕ್ಕೊಳ್ಳಿರಿ. ಬೆಳಗಾದ ಮೇಲೆ ನಿಮ್ಮ ಮನೋಭಿಲಾಷೆಯನ್ನು ಹೇಳಿರಿ. ” ಎಂದನ್ನುತ್ತ ಗೋಪಾಳನನ್ನು ಸಂಗಡ ಕರಕೊಂಡು ಎರಡನೇ ಬಾಗಿಲಿಂದ ಹೊರಟುಹೋದನು, ಮತ್ತು ತಿರುಗಿ ಒಬ್ಬನೇ ಬಂದು:- ತಾವು ಚಿಂತೆಮಾಡ ಬೇಡರಿ, ನಾನು ಈಗಲೇ ತಮಗೆ ಫಲಾಹಾರ ಮೊದಲಾದದ್ದನ್ನು ಕಳಿಸುತ್ತೇನೆ. ಇಲ್ಲಿ ಪಲಂಗ ಮೊದಲಾದವು ಇರುತ್ತವೆ. ” ಎಂದನ್ನುತ್ತ ಬಾಗಿಲು ಮುಚ್ಚಿಕೊಂಡು ಹೊರಟುಹೋದನು. - ಶಾಮರಾಯನು ಹೋದಮೇಲೆ ದಿವಾಣಖಾನೆಯಲ್ಲಿ ವಿನಾಯಕನೊಬ್ಬನೇ। ಆದನು. ಆಗ ವಿಚಾರಮಾಡಲಿಕ್ಕೆ ಆಸ್ಪದವಾದದ್ದರಿಂದ ಅವನು ನಡೆದ ಯಾವತ್ತೂ ಸಂಗತಿಯ ಸಲುವಾಗಿ ಆಲೋಚನೆ ಮಾಡಹತ್ತಿದನು. ಒಮ್ಮೆ ಅವನು ತನ್ನ ಬುದ್ದಿ ದೋಷದಿಂದ ಇಂಥ ಸಂಕಟದಲ್ಲಿ ಸಿಕ್ಕಿವೆಂದು ತನ್ನ ಬುದ್ದಿಯನ್ನು ಹಳಿಯುತ್ತಿದ್ದನು; ಒಮ್ಮೆ ಶಾಮರಾಯನ ಮೇಲೆ ಸಂತಪ್ತನಾಗುತ್ತಿದ್ದನು; ಒಮ್ಮೆ ಅವನು ಇದೆಲ್ಲ ಅದೃಷ್ಟ ಚಮತ್ಕಾರವೆಂದು ನೆನಿಸುತ್ತಿದ್ದನು. ಮನೆಯಲ್ಲಿ ಅಣ್ಣ-ಅತ್ತಿಗೆಯರು ನನ್ನ ದಾರಿಯನ್ನು ನೋಡುತ್ತಿದ್ದಾರು; ನಾನು ಬರುವಾಗ ಏನೂ ಹೇಳದೆ ಬಂದದ್ದರಿಂದ ಇಬ್ಬರೂ ಚಿಂತೆಯನ್ನು ಮಾಡುತ್ತಿದ್ದಾರು; ನನ್ನ ಶೋಧದ ಸಲುವಾಗಿ ಅಣ್ಣನು ಅತ್ತಿತ್ತ ತಿರುಗಾಡುತ್ತಿದ್ದಾನು; ಇತ್ಯಾದಿ ಅನೇಕ ವಿಚಾರಗಳು ಆ ವೇಳೆಯಲ್ಲಿ ಅವನ ಮನಸ್ಸಿನಲ್ಲಿ ಉತ್ಪನ್ನ ವಾದವು, ವಿಶೇಷತಃ ಏನುಮಾಡಿದರೆ ತನ್ನ ಬಿಡುಗಡೆಯಾದೀ ತೆಂಬುವದೇ ಅವನ ಅಂತಃಕರಣದ ಮುಖ್ಯ ವಿಚಾರವಾಗಿದ್ದಿತು. `ಅವನು ಆ ವಿಚಾರ ದಲ್ಲಿರುವಾಗ ಬಾಗಿಲು ತೆರೆದು ಒಬ್ಬ ಮನುಷ್ಯನು ಒಳಗೆ ಬಂದು, ಕುಡಿಯುವ ನೀರನ್ನೂ, ಫಲಾಹಾರವನ್ನೂ ಅವನ ಮುಂದಿಟ್ಟು ಕೂಡಲೆ ಹೊರಟುಹೋದನು. ಸಂಕಟದಿಂದ ಉದ್ವಿಗ್ನನಾಗಿದ್ದ ವಿನಾಯಕನಿಗೆ ಹೊಟ್ಟೆ ಹಸಿವೆಯಾಗಿದ್ದರೂ, ಆ ಫಲಾ